ಉಡುಪಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಇ-ಶೌಚಾಲಯ

Team Udayavani, Dec 19, 2019, 4:28 AM IST

xc-26

ಉಡುಪಿ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ನೀಗಿಸಲು ಉಡುಪಿ ನಗರಸಭೆ ಮುಂದಾಗಿದ್ದು, ಅಲ್ಲಲ್ಲಿ ಇ-ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನ ಎನ್‌.ಕೆ. ಮೆಟಲ್‌ ಶೀಟ್‌ ಸಂಸ್ಥೆಯು ಇದರ ನಿರ್ಮಾಣದ ಉಸ್ತುವಾರಿವನ್ನು ವಹಿಸಿದೆ.

ನಿರ್ಮಾಣದ ವೆಚ್ಚವನ್ನು ಪೌರಾಡಳಿತ ನಿರ್ದೇ ಶನಾಲಯ ಭರಿಸಲಿದೆ. ಈ ಶೌಚಾಲಯಗಳನ್ನು ಆಯಕಟ್ಟಿನ ಸ್ಥಳದಲ್ಲಿ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗುತ್ತಿದೆ. ನಗರಸಭೆ ಹಾಗೂ ಒಳಚರಂಡಿ ವಿಭಾಗದ ವತಿಯಿಂದ ಸರ್ವೆ ನಡೆಸಲಾಗಿದ್ದು, ಅದರ ಅನ್ವಯ ಇ-ಶೌಚಾಲಯ ನಿರ್ಮಾಣ ಮಾಡಲು ಜಾಗ ಆಯ್ಕೆ ಮಾಡಲಾಗಿದೆ.

ಬಯೋ ಡೈಜೆಸ್ಟರ್‌ ವ್ಯವಸ್ಥೆ
ಇ- ಶೌಚಾಲಯಗಳು “ಬಯೋ ಡೈಜೆಸ್ಟರ್‌’ ವ್ಯವಸ್ಥೆಯನ್ನು ಒಳಗೊಂಡಿದೆ. ಡೈಜೆಸ್ಟರ್‌ ವ್ಯವಸ್ಥೆಯಲ್ಲಿ ತ್ಯಾಜ್ಯ ತಂತಾನೇ ಜೈವಿಕವಾಗಿ ವಿಲೇವಾರಿಯಾಗಲಿದೆ. ಜನರ ಬಳಕೆ ಅನುಗುಣವಾಗಿ ಬಯೋ ಡೈಜೆಸ್ಟರ್‌ ಶೌಚದ ಗುಂಡಿ ನಿರ್ಮಿಸಲಾಗುತ್ತದೆ. ಅದಕ್ಕೆ ಇನಾ ಕ್ಯುಲಂ ಎಂಬ ಬ್ಯಾಕ್ಟೀರಿಯಾ ಸೇರಿಸಿದರೆ ಕಲ್ಮಷ ಶುದ್ಧೀಕರಿಸುವ ಕೆಲಸವನ್ನು ಇದು ಮಾಡುತ್ತದೆ. ಶೌಚಾಲಯದ ಸೇಫ್ಟಿ ಟ್ಯಾಂಕ್‌ ಒಳಗೆ ಇದನ್ನು ಸೇರಿಸುವುದರಿಂದ ಕಲ್ಮಷಗಳು ಶೇ. 100ರಷ್ಟು ಕರಗಿ, ಹಾಕಿದ ನೀರು ಮಾತ್ರ ಉಳಿಯುತ್ತದೆ. ಈ ನೀರು ವಾಸನೆಯಿಂದ ಕೂಡಿರುವುದಿಲ್ಲ. ಈ ಒಮ್ಮೆ ಬ್ಯಾಕ್ಟೀರಿಯಾ ಸೇರಿಸಿದ ಬಳಿಕ ನಿರಂತರ ಉಪಯೋಗವಿದ್ದರೆ ಮತ್ತೆ ಮತ್ತೆ ಬ್ಯಾಕ್ಟೀರಿಯಾ ಸೇರಿಸುವ ಅಗತ್ಯವಿಲ್ಲ. ಬ್ಯಾಕ್ಟೀರಿಯಾಗಳು ಶೌಚಾಲಯವನ್ನು ಬಳಸದಿದ್ದರೂ ನಾಲ್ಕು ತಿಂಗಳ ಕಾಲ ಉಳಿಯುತ್ತವೆ.

ಬಳಕೆ ಹೇಗೆ?
ಇ-ಶೌಚಾಲಯಗಳು ಹೊಸ ತಂತ್ರಜ್ಞಾನ ಹೊಂದಿದ್ದು, ಸ್ವಯಂ ಸ್ವತ್ಛತೆ ಮಾಡಿಕೊಳ್ಳಲಿವೆ. ಶೌಚಾಲಯದ ಹೊರ ಬಾಗಿಲಲ್ಲಿ ಹಸಿರು ಬಣ್ಣ ಇದ್ದರೆ ಅದು ಬಳಕೆಗೆ ಮುಕ್ತ ಎಂದರ್ಥ. ಕೆಂಪು ಬಣ್ಣ ಇದ್ದರೆ ಒಳಗೆ ಇನ್ನೊಬ್ಬರು ಇದ್ದಾರೆ ಎಂದರ್ಥ. ಬಳಕೆದಾರರು ನಿಗದಿತ ದರದ ನಾಣ್ಯ ಹಾಕಿದ ಅನಂತರ ಬಾಗಿಲು ತಾನೇ ತೆರೆದುಕೊಳ್ಳಲಿದೆ. ಬಾಗಿಲುಗಳು ಸೆನ್ಸರ್‌ ವ್ಯವಸ್ಥೆ ಹೊಂದಿದ್ದು, ಒಳಗಡೆ ಮತ್ತೂಬ್ಬರು ಇದ್ದರೆ ಹೊರಗಿನಿಂದ ನಾಣ್ಯ ಹಾಕಿದರೂ ತೆಗೆದುಕೊಳ್ಳುವುದಿಲ್ಲ. ಒಳಗೆ ವಿದ್ಯುತ್‌ ದೀಪ, ಪುಟ್ಟ ಫ್ಯಾನ್‌ ವ್ಯವಸ್ಥೆಯೂ ಇದೆ. ಬಳಕೆಯ ಅನಂತರ ನೀರು ಹರಿಯುತ್ತದೆ.

ಎಲ್ಲೆಲ್ಲಿ ಇ-ಶೌಚಾಲಯ?
ಉಡುಪಿ ಬೋರ್ಡ್‌ ಹೈಸ್ಕೂಲ್‌ ಪ್ರವೇಶ ದ್ವಾರ, ತಾಲೂಕು ಕಚೇರಿ, ನಗರಸಭೆ ಸಮೀಪದಲ್ಲಿ ಇ-ಶೌಚಾಲಯ ನಿರ್ಮಾಣವಾಗಲಿದೆ. ಒಂದು ಶೌಚಾಲಯಕ್ಕೆ 6.8 ಲ.ರೂ ವೆಚ್ಚ ತಗಲಲಿದೆ.

ಪರಿಸರಸ್ನೇಹಿ
ನಗರದಲ್ಲಿ ಮೂರು ಇ-ಶೌಚಾಲಯಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಈ ಶೌಚಾಲಯವು ಪರಿಸರಸ್ನೇಹಿ ಶೌಚಾಲಯವಾಗಿರಲಿದೆ.
-ಸ್ನೇಹಾ, ಪರಿಸರ ಎಂಜಿನಿಯರ್‌, ನಗರಸಭೆ

ಸ್ವಚ್ಛತೆ ಅಗತ್ಯ
ಪ್ರಸ್ತುತ ಇರುವ ಶೌಚಾಲಯದಲ್ಲಿ ಸ್ವತ್ಛತೆ ಕೊರತೆ ಇದೆ. ಇದೀಗ ನಗರಸಭೆ ಇ- ಶೌಚಾಲಯ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸೌಲಭ್ಯ ಜನರಿಗೆ ಶೀಘ್ರದಲ್ಲಿ ಬಳಕೆಗೆ ಸಿಗುವಂತಾಗಲಿ.
-ಮೀರಾ ನಾಯಕ್‌, ಉಡುಪಿ

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.