ರಾಜಕೀಯ ತೊರೆದು ಹೈನುಗಾರಿಕೆಯಲ್ಲಿ ಯಶ ಕಂಡ ಡಿಪ್ಲೊಮಾ ಪದವೀಧರ

ದಿನಕ್ಕೆ 220 ಲೀಟರ್‌ಗೂ ಅಧಿಕ ಹಾಲು ಪೂರೈಸುತ್ತಿರುವ ಮುಕ್ಕೂರು ಜಗನ್ನಾಥ ಪೂಜಾರಿ

Team Udayavani, Dec 19, 2019, 4:46 AM IST

xc-29

ಹೆಸರು: ಜಗನ್ನಾಥ ಪೂಜಾರಿ ಮುಕ್ಕೂರು
ಏನೇನು ಕೃಷಿ?: ಹೈನುಗಾರಿಕೆ, ಅಡಿಕೆ – ತೆಂಗು ತೋಟ.
ಎಷ್ಟು ವಯಸ್ಸು?: 45 ಕೃಷಿ ಪ್ರದೇಶ: 7 ಎಕ್ರೆ

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸುಳ್ಯ : ಸಮಾಜ ಸೇವೆಗೆ ರಾಜಕೀಯ ಕ್ಷೇತ್ರ ಆಯ್ದುಕೊಂಡು ಬಳಿಕ ಅದನ್ನು ತೊರೆದು ಹೈನುಗಾರಿಕೆಯಲ್ಲಿ ತೊಡಗಿ ದಿನವೊಂದಕ್ಕೆ 220ಕ್ಕೂ ಅಧಿಕ ಲೀಟರ್‌ ಹಾಲು ಪೂರೈಕೆ ಮಾಡಿ ಪರಿಪೂರ್ಣ ಹೈನುಗಾರನಾದ ಡಿಪ್ಲೋಮಾ ಪದವೀಧರನ ಯಶೋಗಾಥೆಯಿದು. ಮುರುಳ್ಯ ಗ್ರಾಮದ ಅಲೆಕ್ಕಾಡಿ ನಿವಾಸಿ ಜಗನ್ನಾಥ ಪೂಜಾರಿ ಮುಕ್ಕೂರು ಈ ಸಾಧಕ. ಹಲವು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಹಂತ-ಹಂತವಾಗಿ ತನ್ನ ಕೃಷಿ ಕ್ಷೇತ್ರದಲ್ಲಿ ಹಸುರು ಬೆಳೆದು ಬದುಕು ಕಟ್ಟಿಕೊಂಡವರು.

220 ಲೀ. ಹಾಲು
ಮೂಲತಃ ಪೆರುವಾಜೆ ಗ್ರಾಮದ ಮುಕ್ಕೂರಿನವರಾಗಿರುವ ಜಗನ್ನಾಥ ಪೂಜಾರಿ ಅವರು ಡಿಪ್ಲೊಮಾ ಪದವಿ ಮುಗಿಸಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಗ್ರಾ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅದನ್ನು ಬಿಟ್ಟು ಅಲೆಕ್ಕಾಡಿಯಲ್ಲಿ ಕೃಷಿ ಭೂಮಿ ಆಯ್ದುಕೊಂಡು ಅದರಲ್ಲಿ ಜೀವನ ಕಂಡುಕೊಂಡಿದ್ದಾರೆ. ಪ್ರಥಮವಾಗಿ ಒಂದು ದನ ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದರು. ಅದಾದ ಬಳಿಕ ಇವರ ಹಟ್ಟಿ ತುಂಬಾ ವಿವಿಧ ತಳಿಯ ಜಾನುವಾರುಗಳ ಸಾಕಾಣೆ ಆರಂಭಿಸಿ ಮುಖ್ಯ ವೃತ್ತಿಯನ್ನಾಗಿಸಿ ಮಾಡಿಕೊಂಡಿದ್ದಾರೆ. ಪ್ರಸ್ತುತ 30 ಮಿಶ್ರ ತಳಿಯ ಹಸು ಕರುಗಳನ್ನು ಸಾಕುತ್ತಿದ್ದಾರೆ. ಪ್ರತಿ ನಿತ್ಯ ಸಂಜೆ ಮತ್ತು ಬೆಳಗ್ಗೆ ಸೇರಿ ಒಟ್ಟು 220 ಲೀಟರ್‌ ಹಾಲನ್ನು ಸ್ಥಳೀಯ ಡಿಪೋಗೆ ಮಾರಾಟ ಮಾಡುತ್ತಾರೆ.

ಆಧುನಿಕ ಪದ್ಧತಿ
1,500 ಚದರ ಅಡಿ ವಿಸ್ತೀರ್ಣದ ದನದ ಕೊಟ್ಟಿಗೆ, ಸಿಮೆಂಟ್‌ ಶೀಟ್‌ನ ಛಾವಣಿ, ರಬ್ಬರ್‌ ಮ್ಯಾಟ್‌, ನೀರು ಸಂಗ್ರಹಕ್ಕೆ ಸಿಮೆಂಟ್‌ ತೊಟ್ಟಿ, ಬೇಸಗೆಯಲ್ಲಿ ಹಟ್ಟಿ ಒಳಗಿನ ವಾತಾವರಣ ಬಿಸಿ ಏರದಂತೆ ಫ್ಯಾನ್‌, ಸಂಗೀತಕ್ಕೆ ಸ್ಟೀರಿಯೋ ಸ್ಪೀಕರ್‌ ಎಲ್ಲವೂ ಹಟ್ಟಿಯಲ್ಲಿವೆ. ಹಾಲು ಹಿಂಡಲು ವಿದ್ಯುತ್‌ ಚಾಲಿತ ಯಂತ್ರ, ವಿದ್ಯುತ್‌ ಕೈಕೊಟ್ಟಾಗ ಇನ್ವರ್ಟರ್‌ ವ್ಯವಸ್ಥೆ ಅಳವಡಿಸಿಕೊಂಡು ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡುತ್ತಿರುವುದು ಇವರ ಸಾಧನೆ. ಇವರ ಕೃಷಿ ಕ್ಷೇತ್ರಕ್ಕೆ ಊರ – ಪರವೂರಿನಿಂದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಭೇಟಿ ನೀಡಿದ್ದಾರೆ.

ಸ್ವತಃ ದುಡಿಮೆ
ಪೆರುವಾಜೆ ಗ್ರಾಮದ ಮುಕ್ಕೂರು ಪೂವಪ್ಪ ಪೂಜಾರಿ ಮತ್ತು ಸುಶೀಲಾ ಅವರ ಪುತ್ರನಾಗಿರುವ ಜಗನ್ನಾಥ ಪೂಜಾರಿ ಪ್ರಸ್ತುತ ಅಲೆಕ್ಕಾಡಿ ಕೃಷಿ ಕ್ಷೇತ್ರದಲ್ಲಿ ಪತ್ನಿ ಮಮತಾ ಹಾಗೂ ಮಗಳು ಅನಘಾ ಅವರೊಂದಿಗೆ ಜೀವನ ನಿರ್ವಹಿಸುತ್ತಿದ್ದಾರೆ. ಸೂರ್ಯ ತನ್ನ ಬೆಳಕು ಹರಿಸಿ ದಿನಚರಿಗೆ ಮುನ್ನುಡಿ ಇಡುವ ಮೊದಲೇ ಈ ಮೂವರು ಹೈನುಗಾರಿಕೆ ಕೆಲಸದಲ್ಲಿ ತೊಡಗುತ್ತಾರೆ. ನಾಲ್ಕೂವರೆ ಗಂಟೆಗೆ ಹೈನುಗಾರಿಕೆ ದಿನಚರಿ ಆರಂಭಿಸುತ್ತಾರೆ. ಸೆಗಣಿ ತೆಗೆದು ಹಟ್ಟಿ ಶುಚಿಗೊಳಿಸುವುದು, 5 ಗಂಟೆಗೆ ಹಿಂಡಿ ಹಾಕಿ, 5.30ಕ್ಕೆ ಹಾಲು ಕರೆಯುತ್ತಾರೆ. 10 ಗಂಟೆಗೆ ಮತ್ತೆ ಹುಲ್ಲು ಹಾಕಿ, 12 ಗಂಟೆಗೆ ಶುದ್ಧ ನೀರು ಕೊಡುತ್ತಾರೆ. ಅಪರಾಹ್ನ 3 ಗಂಟೆಗೆ ಸೆಗಣಿ ತೆಗೆದು ನೀರು ಹಾಕಿ ಶುಚಿಗೊಳಿಸುತ್ತಾರೆ. 4 ಗಂಟೆಯಿಂದ ಹಾಲು ಹಿಂಡುವುದು, ಬಳಿಕ ಹಿಂಡಿ ಮತ್ತು ಹುಲ್ಲು ಹಾಕುತ್ತಾರೆ. ಕೊಟ್ಟಿಗೆಯ ಬದಿಯಲ್ಲಿ ಗೋಬರ್‌ ಗ್ಯಾಸ್‌ ಘಟಕವಿದ್ದು, ಮನೆಗೆ ಬೇಕಾದ ಇಂಧನವನ್ನು ಪಡೆಯುತ್ತಾರೆ. ತ್ಯಾಜ್ಯ ಸ್ಲರಿ ನೀರನ್ನು ತೋಟಕ್ಕೆ ಬಿಡುತ್ತಾರೆ. 2 ಎಕ್ರೆ ಪ್ರದೇಶದಲ್ಲಿ “ಸಿಒ-3′ ಹಾಗೂ “ಸಂಪೂರ್ಣ’ ತಳಿಯ ಹಸುರು ಹುಲ್ಲುನ್ನು ಬೆಳೆಸಿದ್ದಾರೆ. ಹುಲ್ಲು ಕತ್ತರಿಸಲು ಪವರ್‌ ವೀಡರ್‌ ಮತ್ತು ಚಾಪ್‌ ಕಟ್ಟರ್‌ ವ್ಯವಸ್ಥೆ ಇದೆ. ಅಜೋಲಾ ಘಟಕವನ್ನೂ ಮಾಡಿದ್ದಾರೆ.

ಅಡಿಕೆ, ತೆಂಗು
ಏಳು ಎಕ್ರೆ ಜಾಗ ಹೊಂದಿರುವ ಅವರ ಅಡಿಕೆ ತೋಟದಲ್ಲಿ 2,000 ಮರವಿದೆ. ತೆಂಗು, ಕಾಳುಮೆಣಸು, ಹಣ್ಣಿನ ಗಿಡ ಹೀಗೆ ಬಹುಮಿಶ್ರಿತ ಕೃಷಿಯನ್ನೂ ಹೊಂದಿದ್ದಾರೆ.

ಪ್ರಶಸ್ತಿ, ಸಮ್ಮಾನ
ಈ ಬಾರಿಯ ರಾಜ್ಯಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ರೋಟರಿ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಸಮ್ಮಾನಿಸಿದೆ.

ಎದೆಗುಂದದೆ ಮುನ್ನಡೆಯಿರಿ
ಕೃಷಿ ನನ್ನ ನೆಚ್ಚಿನ ಕ್ಷೇತ್ರ. ಸ್ವತಃ ದುಡಿಮೆ ಯಶಸ್ಸಿನ ಗುಟ್ಟು. ಎಳವೆಯಿಂದಲೇ ಹೈನುಗಾರಿಕೆ ಬಗ್ಗೆ ಆಸಕ್ತಿ ಇತ್ತು. ಪರಿಣಿತರ ಸಲಹೆ ಪಡೆದು ಹೈನುಗಾರಿಕೆ ಆರಂಭಿಸಿದೆ. ಶ್ರಮದಾಯಕ ದುಡಿಮೆಯಿಂದ ಯಶಸ್ಸು ಕೂಡ ಸಿಕ್ಕಿದೆ. ಇದರ ಜತೆಗೆ ಅಡಿಕೆ, ಕಾಳುಮೆಣಸು, ಹಣ್ಣು ಹಂಪಲು ಕೃಷಿಯೂ ಇದೆ. ಬಹುಮುಖ್ಯವಾಗಿ ನಾನು ಗಮನಿಸಿದ ಹಾಗೆ, ನಾವು ಮಾಡುವ ಕೆಲಸವನ್ನು ಪ್ರೀತಿಯಿಂದ, ಗಂಭೀರತೆಯಿಂದ ಮಾಡಿದಾಗ ಅದು ಗುರಿ ತಲುಪುತ್ತದೆ. ಒಂದು ದನ ಖರೀದಿಸಿ ಈಗ 30ಕ್ಕೇರಿದೆ. ಸವಾಲು ಇರುವುದು ಸಹಜ. ಅದಕ್ಕೆ ಎದೆಗುಂದದೆ ಮುನ್ನಡೆಯಬೇಕು. ಹೈನುಗಾರಿಕೆ ಕಾಯಕಕ್ಕೆ ನಾನು, ಪತ್ನಿ, ಮಗಳು ಸೇರಿ ದುಡಿಯುತ್ತೇವೆ. ಅಗತ್ಯ ಸಂದರ್ಭ ಮಾತ್ರ ಕಾರ್ಮಿಕರನ್ನು ಬಳಸುತ್ತೇವೆ. ಈ ಕಾರ್ಯದಲ್ಲಿ ನಮಗೆ ಆತ್ಮತೃಪ್ತಿ ಸಿಕ್ಕಿದೆ.
– ಜಗನ್ನಾಥ ಪೂಜಾರಿ ಮುಕ್ಕೂರು, ಪ್ರಗತಿಪರ ಕೃಷಿಕ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Shri Dharmasthala: ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Kumbra

Kukke: ಅಭಯ ಆಂಜನೇಯ ಗುಡಿಯಿಂದ ಕಳವು

missing

Missing Case: ಬೆಳ್ತಂಗಡಿ; ಯುವತಿ ಕಾಣೆ: ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.