ಸಂಪರ್ಕಕ್ಕೆ ಸಿಗದ ಸಮೂಹ ಸಾರಿಗೆ
Team Udayavani, Dec 20, 2019, 10:47 AM IST
ಸಾಂಧರ್ಬಿಕ ಚಿತ್ರ
ಬೆಂಗಳೂರು: ನಗರದಲ್ಲಿ ಮೆಟ್ರೋ (ಬೆಂಗಳೂರು ಮೆಟ್ರೋ ರೈಲು ನಿಗಮ) ಹಾಗೂ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಸೇವೆ ಇದೆ. ಅಷ್ಟೇ ಅಲ್ಲ, ರೈಲು ಸೌಕರ್ಯವೂ ಇದೆ. ಆದರೆ, ಇವುಗಳ ನಡುವೆ ಸಂಪರ್ಕ ಸೇತುವೆಯೇ ಇಲ್ಲ!
ಮಲ್ಲೇಶ್ವರದ ವಿವಿಧ ಪ್ರದೇಶಗಳ ಕಥೆ ಇದು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆ ಇದ್ದರೂ, ಸ್ಥಳೀಯರಿಗೆ ಅದರ ನೇರ ಸೌಲಭ್ಯ ಸಿಗದೆ ಇರುವುದ ರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದಕ್ಕೆ ತೊಂದರೆ ಅನು ಭವಿಸುತ್ತಿದ್ದಾರೆ. ಹೀಗಾಗಿ, ಆಟೋ, ಕ್ಯಾಬ್‌ಗಳ ಮೊರೆ ಹೋಗುತ್ತಿದ್ದಾರೆ. ಮಲ್ಲೇಶ್ವರದ ವಿವಿಧ ವಾರ್ಡ್ ಗಳಿಗೆ ಹೊಂದಿ ಕೊಂಡಂತೆ ಶ್ರೀರಾಮಪುರ ಹಾಗೂ ಮಂತ್ರಿ ಸ್ಕ್ವೇರ್‌ನಲ್ಲಿ ಮೆಟ್ರೋ ಸೇವೆ ಇದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳೂ ಇವೆ. ಆದರೆ, ಈ ಸೇವೆ ಇಲ್ಲಿನ ವಾರ್ಡ್‌ಗಳಲ್ಲಿನ ಮುಖ್ಯ ರಸ್ತೆಗಳಿಗೆ ಹೊಂದಿ ಕೊಂಡಿರುವ ಸ್ಥಳೀಯರಿಗೆ ಮಾತ್ರ ಸಿಗುತ್ತಿದ್ದು, ಒಳಭಾಗದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಭಾಗದ ಸಾರ್ವಜನಿಕರಿಗೆ ಸಮಸ್ಯೆ: ಶೇಷಾದ್ರಿಪುರ, ಸುಬ್ರಮಣ್ಯ ನಗರ, ಸ್ವಿಮಿಂಗ್‌ಪೂಲ್ ಏಕ್ಸ್‌ಟೆಂಕ್ಷನ್, ಮಿಲ್ಕ್ ಕಾಲೋನಿ, ಓರಾಯನ್ ಮಾಲ್, ಗುಟ್ಟಹಳ್ಳಿ, ಕೋದಂಡ ರಾಮಪುರ, ಯಶವಂತಪುರ ಹಾಗೂ ಮಲ್ಲೇಶ್ವರದ ವಿವಿಧ ಭಾಗಗಳಲ್ಲಿ ಜನರಿಗೆ ಸಮೂಹ ಸಾರಿಗೆ ಬಳಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಆಟೋಗಳಿಗೆ ಹಣ ತೆರ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮೂರರಿಂದ ನಾಲ್ಕು ಕಿ.ಮೀ ಸಂಪರ್ಕವೇ ಇಲ್ಲ : ಮಲ್ಲೇಶ್ವರದ 8ನೇ ಕ್ರಾಸ್‌ನಿಂದ ಸುಬ್ರಮಣ್ಯ ನಗರದ ನಡುವೆ ಅಂದಾಜು ಮೂರರಿಂದ ನಾಲ್ಕು ಕಿ.ಮೀ ಅಂತರವಿದೆ. ಈ ಅಂತರದಿಂದ ಇಲ್ಲಿನ ಮೆಟ್ರೋ ಹಾಗೂ ಬಿಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಹೋಗುವುದಕ್ಕೆ ಆಟೋ ಮೂಲಕ ಸಮೂಹ ಸಾರಿಗೆ ಬಳಸಬೇಕಾಗಿದೆ. ಆಟೋ ಬಳಸಿದವರು ಮತ್ತೆ ಸಮೂಹ ಸಾರಿಗೆಗೆ ಹಣ ತೆರಬೇಕಾಗಿದೆ. ಹೀಗಾಗಿ, ಈ ಭಾಗದಲ್ಲಿ ಸಮೂಹ ಸಾರಿಗೆ ಬಳಕೆ ಕುಂಠಿತವಾಗಿದೆ. ಅಲ್ಲದೆ, ಈ ಭಾಗದಲ್ಲಿ ರೈಲ್ವೆ ಹಳಿಯ ಬಳಿ ಇರುವ ಮೇಲ್ಸೇತುವೆಯನ್ನು ಮೇಲ್ದಜೆಗೇರಿಸುವ ಕೆಲಸವಾಗಿಲ್ಲ. ಹಲವು ರೈಲ್ವೆ ಹಳಿ ದಾಟಿಕೊಂಡೇ ಮಲ್ಲೇಶ್ವರದಿಂದ ಶ್ರೀರಾಮಪುರದ ಕಡೆ ಬರುತ್ತಾರೆ. ಮುಖ್ಯರಸ್ತೆಗೆ ಇರುವ ಅಂತರವನ್ನು ಕಡಿಮೆ ಮಾಡಲು ಅಥವಾ ಸಂಪರ್ಕ ಸಾಧಿಸಲು ಸುಲಭವಾಗುವ ನಿಟ್ಟಿನಲ್ಲಿ ಮಲ್ಲೇಶ್ವರ 8ನೇ ಕ್ರಾಸ್‌ನಿಂದ ಸುಬ್ರಮಣ್ಯ ನಗರದ ನಡುವೆ ಎತ್ತರಸಿದ ಪಾದಚಾರಿ ಮಾರ್ಗ ನಿರ್ಮಾಣ ಮಾಡಿಕೊಡುವಂತೆಯೂ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಚಿಂತನೆಗಳೂ ನಡೆದಿಲ್ಲ.
ಸಾರ್ವಜನಿಕರ ಪ್ರಸ್ತಾವನೆಗಳು ನನೆಗುದಿಗೆ: ಮಲ್ಲೇಶ್ವರದ ವಿವಿಧ ವಾರ್ಡ್‌ಗಳ ಸಾರ್ವಜನಿಕರು ಸಮೂಹ ಸಾರಿಗೆ ಅಭಿವೃದ್ಧಿಪಡಿಸುವಂತೆ ಹಾಗೂ ಎತ್ತರಿಸಿದ ಪಾದಚಾರಿ ಮಾರ್ಗ ಮಾಡಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನೀಡಿದ್ದಾರೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೀನಮೇಷ ಏಣಿಸುತ್ತಿದ್ದಾರೆ. ಮಲ್ಲೇಶ್ವರದ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್. ಗೋಪಾಲ್‌ರಾವ್ ಅವರು ಈ ಭಾಗದಲ್ಲಿ ಬಸ್ ಸೇವೆ ನೀಡುವಂತೆ 2015ರಲ್ಲೇ “ಎಲ್ಲಾದರು ಹತ್ತಿ, ಎಲ್ಲಾದರೂ ಇಳಿಯರಿ’ ಎನ್ನುವ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಬಿಎಂಟಿಸಿಯ ಅಧಿಕಾರಿಗಳಿಗೆ ನೀಡಿದ್ದರು.
“ಈಭಾಗದಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳೂ ಇದ್ದಾರೆ. ಆದರೆ, ಸಮೂಹ ಸಾರಿಗೆಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಮಲ್ಲೇಶ್ವರದ ಸುತ್ತಮುತ್ತಲಿ ಆಯ್ದ ಪ್ರದೇಶಗಳಲ್ಲಿ “ಎಲ್ಲಾದರು ಹತ್ತಿ, ಎಲ್ಲಾದರೂ ಇಳಿಯರಿ’ ಎನ್ನುವ ಪರಿಕಲ್ಪನೆಯಡಿ ಬಸ್ ಸೇವೆ ನೀಡುವಂತೆ ಬಿಎಂಟಿಸಿಗೆ ಮನವಿ ಮಾಡಲಾಗಿತ್ತು. ಸಲಹೆಗೆ ಸಂಬಂಧಿಸಿದಂತೆ ಬಿಎಂಟಿಸಿ ಪ್ರಾಯೋಗಿಕ ಸರ್ವೇಯನ್ನೂ ಮಾಡಿತ್ತು. ಇದಕ್ಕೆ ಇಲ್ಲಿನ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದರು ಸಹ. ಆದರೆ, ಸರ್ವೇಯಾದ ನಂತರ ಬಸ್ ಸೇವೆ ಪ್ರಾರಂಭವಾಗಲಿಲ್ಲ’ಎನ್ನುತ್ತಾರೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್. ಗೋಪಾಲ್‌ರಾವ್.
ಮಲ್ಲೇಶ್ವರದ ವಿವಿಧೆಡೆ ಬಸ್‌ಸೇವೆ ನೀಡುವ ಪ್ರಸ್ತಾವನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಭಾಗದಲ್ಲಿ ಬಸ್ ಸೇವೆಯ ಅಗತ್ಯತೆ ಇರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯವಿದ್ದರೆ ಬಸ್ ಸೇವೆ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. -ರಾಜೇಶ್, ಬಿಎಂಟಿಸಿ ಮುಖ್ಯಸಂಚಾರ ವ್ಯವಸ್ಥಾಪಕ
-ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.