ಸಸ್ಪೆನ್ಸ್ ವಾರೆಂಟ್

Team Udayavani, Dec 20, 2019, 11:44 AM IST

cinema-tdy-2

“ಜೆ ಕೆ ಮತ್ತು ನನ್ನ ಕಾಂಬಿನೇಷನ್‌ ಮೂರನೇ ಚಿತ್ರವಿದು. ಮುಂದೆ ಕೂಡ ಇದೇ ಕಾಂಬಿನೇಶನ್‌ನಲ್ಲಿ ಚಿತ್ರಗಳು ಬರಲಿವೆ..’ – ಹೀಗೆ ಹೇಳುತ್ತಾ ಹೋದರು ನಿರ್ದೇಶಕ ನಾಗೇಂದ್ರ ಅರಸ್‌. ಅವರು ಹೇಳಿದ್ದು, “ನನ್ನ ಗುರಿ ವಾರೆಂಟ್‌’ ಚಿತ್ರದ ಬಗ್ಗೆ. ಚಿತ್ರಕ್ಕೆ ಸೆನ್ಸಾರ್‌ಆಗಿದ್ದು ಯಾವುದೇ ಕಟ್ಸ್‌ ಇಲ್ಲದೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ಕುರಿತು ಒಂದಷ್ಟು ಹೇಳಿಕೊಳ್ಳಲು ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಆಗಮಿಸಿದ್ದರು ನಾಗೇಂದ್ರ ಅರಸ್‌.

“ಈ ಚಿತ್ರಕ್ಕೆ ಮೊದಲು “ವಾರೆಂಟ್‌’ ಎಂಬ ಶೀರ್ಷಿಕೆ ಇತ್ತು. ಸಬ್ಸಿಡಿ ಸಿಗಲ್ಲ ಅನ್ನುವ ಕಾರಣಕ್ಕೆ, “ನನ್ನ ಗುರಿ ವಾರೆಂಟ್‌’ ಎಂದು ಹೆಸರಿಡಲಾಗಿದೆ. ಚಿತ್ರ ನೋಡಿದವರಿಗೆ ಶೀರ್ಷಿಕೆ ಯಾಕಿಡಲಾಗಿದೆ ಅನ್ನೋದು ಗೊತ್ತಾಗಲಿದೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ಇಲ್ಲಿ ಗ್ಲಾಮರ್‌ ಇದೆ. ಆದರೆ ವಲ್ಗರ್‌ ಇಲ್ಲ. ಸಿನಿಮಾದಲ್ಲಿ ಜೆಕೆ ಮತ್ತು ತಾಂಡವ್‌ ಇದ್ದಾರೆ. ಮನೀಶ ವೈಗನ್‌ಕರ್‌ ನಾಯಕಿಯಾಗಿದ್ದಾರೆ. ನಿರ್ಮಾಣ ಕೂಡ ಅವರದೇ. ಹಾಗಂತ, ಇದು ತ್ರಿಕೋನ ಪ್ರೇಮಕಥೆ ಅಲ್ಲ. ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್‌ನಲ್ಲೇ ಚಿತ್ರ ಸಾಗಲಿದೆ. ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ವಿ.ಮನೋಹರ್‌ ಒಂದು ಸಾಂಗ್‌ ಸಂಯೋಜಿಸಿದರೆ, ಮ್ಯಾಥ್ಯೂಸ್‌ ಮನು ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ.  ಸತೀಶ್‌ ಬಾಬು ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಹಾಗೆಯೇ, ಮೂವರು ಛಾಯಾಗ್ರಾಹಕರುಕ್ಯಾಮೆರಾ ಹಿಡಿದಿದ್ದಾರೆ.

ಎಂ.ಬಿ.ಅಳ್ಳಿಕಟ್ಟೆ, ಡಿಸೋಜ ಹಾಗು ಸಂದೀಪ್‌ ಛಾಯಾಗ್ರಹಣ ಮಾಡಿದ್ದಾರೆ. “ವಾರೆಂಟ್‌’ ಯಾರಿಗೆ, ಯಾಕೆ? ಅನ್ನೋ ಕುತೂಹಲವಿದ್ದರೆ ಸಿನಿಮಾ ನೋಡಬೇಕು. ಬ್ಯಾಂಕಾಕ್‌ನಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇಷ್ಟರಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ’ ಎಂದು ವಿವರ ಕೊಟ್ಟರು ನಾಗೇಂದ್ರ ಅರಸ್‌. ನಾಯಕ ಜೆ.ಕೆ ಅವರಿಗೆ ನಿರ್ದೇಶಕರ ಜೊತೆ ಮೂರನೇ ಚಿತ್ರವಂತೆ. “ಫ‌ಸ್ಟ್‌ ಲವ್‌’,” ಮೇ 1′ ನಂತರ ಈಗ “ನನ್ನ ಗುರಿ ವಾರೆಂಟ್‌’ ಮಾಡಿದ್ದೇನೆ. ಇಲ್ಲಿ  ಕಥೆಯೇ ಹೈಲೈಟ್‌. ನಿರ್ಮಾಪಕರ ಕಥೆಗೆ ನಿರ್ದೇಶಕರು ನ್ಯಾಯ ಸಲ್ಲಿಸಿದ್ದಾರೆ.

ಇದೊಂದು ಹೊಸಬಗೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳನ್ನು ಹೊಂದಿದೆ. ಇಲ್ಲಿ ಒಂದಷ್ಟು ಪಾತ್ರಗಳಿದ್ದರೂ ಎಲ್ಲಾ ಪಾತ್ರಗಳಿಗೂ ಆದ್ಯತೆ ನೀಡಲಾಗಿದೆ. ನಾನಿಲ್ಲಿ ಉದ್ಯಮಿಯೊಬ್ಬರ ಮಗನಾಗಿ ನಟಿಸಿದ್ದೇನೆ. ವಾರೆಂಟ್‌ ಯಾರಿಗೆ ಹೋಗುತ್ತೆ, ಕೊಡೋರು ಯಾರು ಎಂಬುದು ಸಿನಿಮಾದಲ್ಲಿ ಗೊತ್ತಾಗಲಿದೆ’ ಎಂದರು ಜೆಕೆ. ನಿರ್ಮಾಪಕಿ ಮನೀಶ ವೈಗನ್‌ಕರ್‌ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಕಥೆ ಬರೆಯುವುದರ ಜೊತೆಯಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಮೂಲತಃ ಕಾರವಾರದವರಾದ ಮನೀಶ ವೈಗನ್‌ ಕರ್‌, ಮುಂಬೈನಲ್ಲಿ ನೆಲೆಸಿದ್ದಾರೆ. ಈ ಹಿಂದೆ ರಾಜಸ್ತಾನಿ ಭಾಷೆಯಲ್ಲೊಂದು ಚಿತ್ರ ನಿರ್ಮಿಸಿದ್ದು, ಈಗ ಕನ್ನಡತಿಯಾಗಿ ಕನ್ನಡ ಸಿನಿಮಾ ಮಾಡುವ ಆಸೆ ಈಡೇರಿಸಿಕೊಂಡಿದ್ದಾರೆ. “ಒಳ್ಳೆಯ ಚಿತ್ರ ಮಾಡಿದ ಖುಷಿ ನನ್ನದು’ ಎಂಬುದು ಅವರ ಮಾತು.

ಸಂಗೀತ ನಿರ್ದೇಶಕ ಮ್ಯಾಥುಸ್‌ ಮನು ಅವರಿಲ್ಲಿ ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ವಿ.ಮನೋಹರ್‌ ಸರ್‌ ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಮ್ಯಾಥುಸ್‌, ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗಲಿದೆ’ ಅಂದರು. ವಿ.ಮನೋಹರ್‌ ಅವರಿಲ್ಲಿ “ಆಸೆ ಅಂಗಲಂಗುಲ..’ ಎಂಬ ಹಾಡು ಬರೆದ ಬಗ್ಗೆ ಹೇಳಿಕೊಂಡರು. ಹಿನ್ನೆಲೆ ಸಂಗೀತ ನೀಡಿರುವ ಸತೀಶ್‌ ಬಾಬು ನಾಗೇಂದ್ರ ಅರಸ್‌ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಎಂ.ಬಿ.ಅಳ್ಳಿಕಟ್ಟೆ ಅವರು, ನಾಗೇಂದ್ರ ಅರಸ್‌ ಅವರ ಜೊತೆ ಎರಡನೇ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ ಹಂಚಿಕೊಂಡರು. ಎಲ್ಲರೂ ಮಾತನಾಡಿ ಮುಗಿಸುವ ಹೊತ್ತಿಗೆ ಚಿತ್ರದ ಹಾಡುಗಳನ್ನೂ ಬಿಡುಗಡೆ ಮಾಡಲಾಯಿತು. ವಿತರಕ ವಿಜಯ್‌ ತಮ್ಮ ವಿಜಯ್‌ ಸಿನಿಮಾಸ್‌ ಮೂಲಕ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಹೇಳಿಕೊಂಡರು.

ಟಾಪ್ ನ್ಯೂಸ್

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.