ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಕೊಪ್ಪಳ ಬೆಸ್ಟ್
Team Udayavani, Dec 20, 2019, 5:18 PM IST
ಕೊಪ್ಪಳ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಪ್ರಸಕ್ತ ವರ್ಷದಲ್ಲಿ ಅನುದಾನ ಬಳಕೆ ಮಾಡುವಲ್ಲಿ ಕೊಪ್ಪಳ ಜಿಲ್ಲೆ ಅಗ್ರಸ್ಥಾನದಲ್ಲಿದೆ.
ಆದರೆ ಭೌತಿಕವಾಗಿ ಕಾಮಗಾರಿ ವೇಗವಾಗಿ ನಿರ್ವಹಿಸುವಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳು ನಿಧಾನಗತಿಯಲ್ಲಿ ಕಾರ್ಯ ಆರಂಭಿಸಿವೆ. ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರಾದೇಶಿಕವಾರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಭಾಗದಲ್ಲಿನ ಮೂಲಭೂತ ಸೌಕರ್ಯ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಶಿಕ್ಷಣಕ್ಕೂ ಒತ್ತು ನೀಡಿ ಈ ಹಿಂದಿನ ಸರ್ಕಾರಗಳು ಮಂಡಳಿಗೆ ಈ ಹಿಂದೆ
ಒಂದು ಸಾವಿರ ಕೋಟಿ ಹಣ ನೀಡಿ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದವು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಡಳಿಗೆ ವಾರ್ಷಿಕ 1500 ಕೋಟಿ ರೂ. ಕೊಡುವ ಮೂಲಕ ಅವೃದ್ಧಿಗೆ ಮತ್ತಷ್ಟು ಆದ್ಯತೆ ನೀಡಿದ್ದರು. ತರುವಾಯ ಬಂದ ಮೈತ್ರಿ, ಬಿಜೆಪಿ ಸರ್ಕಾರವೂ ಅಭಿವೃದ್ಧಿಗೆ ಜೈ ಎಂದಿದೆ.
6 ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲೆ ಫಸ್ಟ್:ಮಂಡಳಿಯಿಂದ ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಗೆ 244 ಕೋಟಿ ಅನುದಾನ ಹಂಚಿಕೆಯಲ್ಲಿ ಶೇ. 54ರಷ್ಟು ಪ್ರಗತಿ ಸಾಧಿಸಿದ್ದರೆ, ಬೀದರ್-220 ಕೋಟಿಯಲ್ಲಿ ಶೇ. 39, ಕಲಬುರಗಿ-413 ಕೋಟಿಯಲ್ಲಿ ಶೇ. 45, ಕೊಪ್ಪಳ-169 ಕೋಟಿಯಲ್ಲಿ ಶೇ. 56, ರಾಯಚೂರು-264 ಕೋಟಿಯಲ್ಲಿ ಶೇ. 48, ಯಾದಗಿರಿ-172 ಕೋಟಿಯಲ್ಲಿ ಶೇ. 48ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ ಮಂಡಳಿಗೆ ಹಂಚಿಕೆಯಾದ 1,500 ಕೋಟಿಯಲ್ಲಿ ಆರ್ಥಿಕವಾಗಿ ನವೆಂಬರ್ ಅಂತ್ಯಕ್ಕೆ ಶೇ. 47ರಷ್ಟು ಪ್ರಗತಿ ಸಾಧಿಸಿದೆ.
ಈ ಆರು ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೇ ಹೆಚ್ಚಿನ ಪ್ರಗತಿ ಸಾಧಿಸಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕವಾಗಿ ಕೊಪ್ಪಳ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಭೌತಿಕವಾಗಿ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಿ ಬಳ್ಳಾರಿ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ. ಉಳಿದಂತೆ ಐದು ಜಿಲ್ಲೆಗಳಲ್ಲೂ ಭೌತಿಕ ಪ್ರಗತಿ ಸ್ವಲ್ಪ ಮಟ್ಟಿಗೆ ಸಾಗಿದೆ.
ಭೌತಿಕ ಪ್ರಗತಿಯಲ್ಲಿ ಬಳ್ಳಾರಿ ಟಾಪ್ : ಇನ್ನೂ ಕಾಮಗಾರಿಗಳಲ್ಲಿ ಹೆಚ್ಚಿನ ಪ್ರಗತಿ ಸಾ ಧಿಸುವ ಲೆಕ್ಕಾಚಾರ ಅವಲೋಕಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ 1,341 ಕಾಮಗಾರಿಗಳ ಪೈಕಿ ಶೇ. 63ರಷ್ಟು ಪ್ರಗತಿ ಸಾ ಧಿಸಿದೆ. ಬೀದರ್ನಲ್ಲಿ 705 ಕಾಮಗಾರಿಯಲ್ಲಿ ಶೇ. 52ರಷ್ಟು, ಕಲಬುರಗಿಯಲ್ಲಿ 2,116 ಕಾಮಗಾರಿಯಲ್ಲಿ ಶೇ. 52 ಪ್ರಗತಿ, ಕೊಪ್ಪಳ 740 ಕಾಮಗಾರಿಯಲ್ಲಿ ಶೇ. 47, ರಾಯಚೂರು 1,259 ಕಾಮಗಾರಿಯಲ್ಲಿ ಶೇ. 37, ಯಾದಗಿರಿಯಲ್ಲಿ 946 ಕಾಮಗಾರಿಯಲ್ಲಿ ಶೇ. 44ರಷ್ಟು ಭೌತಿಕ ಪ್ರಗತಿ ಸೇರಿದಂತೆ ಒಟ್ಟಾರೆ 7,108 ಕಾಮಗಾರಿಗಳಲ್ಲಿ 2,764 ಕಾಮಗಾರಿ ಪೂರ್ಣಗೊಂಡಿದ್ದರೆ, 462 ಕಾಮಗಾರಿ ಆರಂಭಿಸಿ ಪೂರ್ಣ ಮಾಡಬೇಕಿದೆ. ಇನ್ನೂ 320 ಕಾಮಗಾರಿ ಇನ್ನೂ ಆರಂಭ ಮಾಡಬೇಕಿದೆ. ಒಟ್ಟಾರೆ ಭೌತಿಕವಾಗಿ ಶೇ. 50ರಷ್ಟು ಪ್ರಗತಿ ಸಾಧಿ ಸಿದ್ದು, ಆರು ಜಿಲ್ಲೆಗಳ ಪೈಕಿ ಬಳ್ಳಾರಿ ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಿದೆ.
‘ರಾಯಚೂರು, ಯಾದಗಿರಿ ನಿಧಾನ: ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆದಿವೆ. ಸ್ವತಃ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಅವರು ಅಭಿವೃದ್ಧಿ ಕಾಮಗಾರಿ ನಿಧಾನಗತಿಯಾದರೆ ಅನುದಾನ ನೀಡುವುದಿಲ್ಲ ಎನ್ನುವ ಖಡಕ್ ಸಂದೇಶ ನೀಡಿದ್ದಾರೆ. ಆದರೆ ಕೆಲವು ಜಿಲ್ಲೆಯಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರೂ ಭೌತಿಕ ಪ್ರಗತಿ ಸಾಧಿಸುವಲ್ಲಿ ಹಿನ್ನೆಡೆ ಅನುಭವಿಸುತ್ತಿವೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.