ಕಟಕ್: “ಫೈನಲ್ ಲಕ್’ ನಿರೀಕ್ಷೆಯಲ್ಲಿ ಭಾರತ
ಒಂದು ದಿನ ವಿರಾಮ ಪಡೆದ ಕೊಹ್ಲಿ ಪಡೆ ; ಇಂದು ಅಭ್ಯಾಸ, ನಾಳೆ ನಿರ್ಣಾಯಕ ಪಂದ್ಯ
Team Udayavani, Dec 21, 2019, 6:00 AM IST
ಕಟಕ್: ವೆಸ್ಟ್ ಇಂಡೀಸ್ ಎದುರಿನ 3ನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನಾಡಲು ಕಟಕ್‌ಗೆ ಆಗಮಿಸಿರುವ ಭಾರತ ತಂಡ ಶುಕ್ರವಾರ ಸಂಪೂರ್ಣ ವಿಶ್ರಾಂತಿ ಪಡೆಯಿತು.
ಶನಿವಾರ ಅಭ್ಯಾಸ ನಡೆಸಲಿದ್ದು, ರವಿವಾರ “ಬಾರಾಬತಿ ಸ್ಟೇಡಿಯಂ’ನಲ್ಲಿ ಅಂತಿಮ ಹೋರಾಟಕ್ಕೆ ಇಳಿಯಲಿದೆ.ಅಭ್ಯಾಸ ನಡೆಸದ ಕಾರಣ ಟೀಮ್ ಇಂಡಿಯಾದ ಸದಸ್ಯರೆಲ್ಲ ಒಟ್ಟಿಗೆ ಬೆರೆತು “ಕ್ರಿಕೆಟ್ ಲೋಕ’ದಿಂದ ಹೊರಗುಳಿದು ತಮ್ಮದೇ ಪ್ರಪಂಚದಲ್ಲಿ ಕಾಲ ಕಳೆದರು. ನಾಯಕ ಕೊಹ್ಲಿ ಸಹಿತ ಆಟಗಾರರೆಲ್ಲ “ರಿಲ್ಯಾಕ್ಸ್ ಮೂಡ್’ನಲ್ಲಿದ್ದರು. ಇದರ ಚಿತ್ರವೊಂದು° ಸ್ವತಃ ಕೊಹ್ಲಿ ಟ್ವೀಟ್ ಮಾಡಿದ್ದಾರೆ.ಗುರುವಾರ ಸಂಜೆ ಎರಡೂ ತಂಡಗಳು ಭುವನೇಶ್ವರಕ್ಕೆ ಆಗಮಿಸಿದಾಗ ಸಾಂಪ್ರದಾಯಕ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಕಟಕ್ ಅದೃಷ್ಟದ ತಾಣ
ಭಾರತದ ಪಾಲಿಗೆ ಕಟಕ್ ಕ್ರೀಡಾಂಗಣ ಅದೃಷ್ಟದ ತಾಣ. ಇಲ್ಲಿ 18 ಏಕದಿನ ಪಂದ್ಯಗಳನ್ನಾಡಿದ್ದು, 12ರಲ್ಲಿ ಜಯ ಸಾಧಿಸಿದೆ. ನಾಲ್ಕರಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ. ವೆಸ್ಟ್ ಇಂಡೀಸನ್ನು ಮೂರೂ ಪಂದ್ಯಗಳಲ್ಲಿ ಮಣಿಸಿದೆ.
2007ರಿಂದ ಈ ಅಂಗಳದಲ್ಲಿ ಭಾರತದ್ದು ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಈ ಅವಧಿಯಲ್ಲಿ ಆಡಲಾದ 7 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ.
ವಿಂಡೀಸ್ ವಿರುದ್ಧ ಅಜೇಯ
ಇಲ್ಲಿ ಭಾರತ-ವೆಸ್ಟ್ ಇಂಡೀಸ್ ಮೊದಲ ಸಲ ಮುಖಾಮುಖೀಯಾದದ್ದು 1994ರಲ್ಲಿ. ನಾಯಕರಾಗಿದ್ದವರು ಮೊಹಮ್ಮದ್ ಅಜರುದ್ದೀನ್ ಮತ್ತು ಕೋರ್ಟ್ನಿ ವಾಲ್ಶ್. ಆರಂಭಕಾರ ಅಜಯ್ ಜಡೇಜ ಅವರ ಶತಕ ಸಾಹಸದಿಂದ (104) ಭಾರತ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು.2007ರ ಮುಖಾಮುಖೀಯಲ್ಲಿ ಭಾರತ ದ ಗೆಲುವಿನ ಅಂತರ 20 ರನ್. ಸಣ್ಣ ಮೊತ್ತದ ಈ ಮೇಲಾಟದಲ್ಲಿ ಭಾರತ 189, ವಿಂಡೀಸ್ 169 ರನ್ ಗಳಿಸಿತ್ತು. ಧೋನಿ ಮತ್ತು ಗೇಲ್ ನಾಯಕರಾಗಿದ್ದರು.
2011ರ ಕೊನೆಯ ಪಂದ್ಯವನ್ನು ಸೆಹವಾಗ್ ಪಡೆ ಸಮ್ಮಿ ಬಳಗದ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತ್ತು.ಸ್ಕೋರ್: ವಿಂಡೀಸ್-9ಕ್ಕೆ 211. ಭಾರತ-9ಕ್ಕೆ 213.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.