ಬೇಸಗೆ ಬಿಸಿಯಲ್ಲಿ ಕೃಷಿಗೆ ನೀರೊದಗಿಸುವ ಕಟ್ಟ!


Team Udayavani, Dec 22, 2019, 4:41 AM IST

cd-31

ವರ್ಷದಿಂದ ವರ್ಷಕ್ಕೆ ವಾತಾವರಣ ಉಷ್ಣತೆ ಹೆಚ್ಚುತ್ತಾ ಸಾಗುವ ವಿದ್ಯಮಾನಕ್ಕೆ ನಾವೆಲ್ಲ ಸಾಕ್ಷಿಗಳಾಗಿದ್ದೇವೆ. ಅಂತರ್ಜಲ ಮಟ್ಟ ಕುಸಿತದ ಜತೆಗೆ ಅತಿಯಾದ ಬಿಸಿಲಿನಿಂದ ಇದ್ದ ನೀರು ಆವಿಯಾಗುತ್ತಿರುವುದೂ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಕಟ್ಟಗಳು ಪರಿಹಾರವಾಗಬಲ್ಲವು. ಹರಿಯುವ ನೀರಿಗೆ ತಡೆ ಒಡ್ಡಿ ಕೃಷಿಗೆ ಬಳಸುವ ಪರಿಪಾಠ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ.

ಬೇಸಗೆ ಬಿಸಿ ಬಂತೆಂದರೆ ನೀರಿನ ಮೂಲಗಳು ಬತ್ತಲು ಆರಂಭ ಎಂದರ್ಥ. ಇದರ ಪರಿಣಾಮ ಮನುಷ್ಯನ ಮೇಲೆ ಆಗುವ ರೀತಿಯಲ್ಲಿ ಕೃಷಿ ಚಟುವಟಿಕೆಯ ಮೇಲೂ ಉಂಟಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಹರಿವು ಕ್ಷೀಣಿಸುವ ನೀರನ್ನು ಪೂರ್ತಿ ಬತ್ತುವ ಮೊದಲೇ ಒಂದೆಡೆ ಸಂಗ್ರಹಿಸಿಟ್ಟು ಅಂತರ್ಜಲ ಹಾಗೂ ಕೃಷಿ ಭೂಮಿ ಹಸಿರನ್ನಾಗಿಸುವ ಪ್ರಯತ್ನವೇ ಬಗೆ-ಬಗೆಯ ನೀರಿನ ಕಟ್ಟಗಳು.

ತೋಟದ ಉಜಿರು ಕಣಿಯಿಂದ ಹಿಡಿದು ದೊಡ್ಡ ನದಿ ತನಕ ನೀರಿನ ಹರಿವಿಗೆ ತಡೆ ಒಡ್ಡು ಪ್ರಕ್ರಿಯೆ ಈ ಹಿಂದಿನಿಂದಲೂ ಇತ್ತು. ಆದರೆ ಇದಕ್ಕೆ ಮಹತ್ತÌ, ಬೇಡಿಕೆ ಸೃಷ್ಟಿಯಾದದ್ದು ಇತ್ತೀಚಿನ ವರ್ಷಗಳಲ್ಲಿ. ಏರುತ್ತಿರುವ ಬಿಸಿ, ಆವಿಯಾಗುತ್ತಿರುವ ನೀರು, ಮೂರು-ನಾಲ್ಕು ತಿಂಗಳು ಕಾಡುವ ಬರದ ಪರಿಣಾಮ ಇದಕ್ಕೆ ಮುಖ್ಯ ಕಾರಣ.

ನೀರು ಸಂಗ್ರಹ
ನಗರಕ್ಕೆ, ಗ್ರಾಮಾಂತರ ಪ್ರದೇಶಕ್ಕೆ ಕುಡಿಯುವ ನೀರು, ಕೃಷಿ, ಕೈಗಾರಿಕೆ ಸೇರಿದಂತೆ ವಾಣಿಜ್ಯ ಬಳಕೆಗೆ ಪೂರಕವಾಗಿ ದೊಡ್ಡ ನದಿಗಳಿಗೆ ಬೃಹತ್‌ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಅವು ವರ್ಷವಿಡೀ ಹಾಗೆಯೇ ಇರುತ್ತವೆ. ಮಳೆಗಾಲದಲ್ಲಿಯೂ ನೀರು ಹರಿದು ಹೋಗಲು, ಬೇಸಗೆಯಲ್ಲಿ ನೀರು ಹಿಡಿದಿಟ್ಟುಕೊಳ್ಳಲು ಪೂರಕವಾಗಿರುವಂತೆ ಈ ಕಟ್ಟ ನಿರ್ಮಿಸಲಾಗಿರುತ್ತದೆ. ಸಣ್ಣ ನದಿಗಳಲ್ಲಿ ಇದೇ ತರಹದ ಅಣೆಕಟ್ಟುಗಳಿವೆ. ಇದಕ್ಕೆ ಸರಕಾರ ಅನುದಾನ ಬಳಸಿ ಕಾಲ-ಕಾಲಕ್ಕೆ ಅಣೆಕಟ್ಟು ನಿರ್ಮಿಸುತ್ತಿದೆ.

ಪರಿಸರ ಸ್ನೇಹಿ ಕಟ್ಟ
ಸರಕಾರದ ಅನುದಾನಕ್ಕೆ ಕಾಯದೇ ಪರಿಸರದಲ್ಲಿ ಸಿಗುವ ಪರಿಕರ ಬಳಸಿ ಕಡಿಮೆ ವೆಚ್ಚದಲ್ಲಿ ತಡೆ ಒಡ್ಡು ನಿರ್ಮಿಸುವ ಕೃಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತೋಟದ ನಡುವಿನ ಉಜಿರುಕಣಿಯಲ್ಲಿ ನವಂಬರ್‌, ಡಿಸೆಂಬರ್‌ ತನಕ ನೀರಿನ ಹರಿವಿದೆ ಎಂದಾದರೆ ಅದಕ್ಕೆ ಮರಳು ಚೀಲ, ಹಲಗೆ ಜೋಡಿಸಿ ಮಣ್ಣಿನ ತಡೆ ಹೀಗೆ ತೆರನಾಗಿ ಪರಿಸರ ಸ್ನೇಹಿ ಕಟ್ಟ ನಿರ್ಮಿಸಿದರೆ 20ರಿಂದ 30 ದಿವಸ ತನಕ (ಅದಕ್ಕಿಂತ ಹೆಚ್ಚು ಇರಬಹುದು)ನೀರು ಸಂಗ್ರಹವಾಗುತ್ತದೆ. ಇದು ಆ ಕೃಷಿ ಭೂಮಿಯ ಸೀಮಿತ ಪ್ರದೇಶಕ್ಕೆ ಬಿಸಿಲಿನ ಬಿಸಿಯಿಂದ ರಕ್ಷಣೆ ಕೊಡುತ್ತದೆ. ಜತೆಗೆ ಬೆಳೆಗೆ ನೀರನ್ನೂ ಒದಗಿಸುತ್ತದೆ.

ಇಂತಹ ಕಡಿಮೆ ವೆಚ್ಚದ ತಡೆ ಒಡ್ಡುಗಳನ್ನು ಅವಕಾಶ ಇರುವೆಡೆ ಹೆಚ್ಚೆಚ್ಚು ನಿರ್ಮಿಸಬಹುದಾಗಿದೆ. ಈ ರೀತಿಯು ಜಲಸಂರಕ್ಷಣೆ ಪ್ರಯೋಗ ಈಗ ಹೆಚ್ಚಾಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯು ಆಗಿದೆ. ಸಂಘ ಸಂಸ್ಥೆಗಳು, ಎನ್ನೆಸ್ಸೆಸ್‌ ಮೊದಲಾದ ಸಾಮಾಜಿಕ ಸಂಘಟನೆಗಳು ಕೂಡ ಜಲಸಂರಕ್ಷಣೆಯ ನಿಟ್ಟಿನಲ್ಲಿ ಇಂತಹ ತಡೆ ಒಡ್ಡುಗಳ ರಚನೆಗೆ ಮುಂದಾಗುತ್ತಿವೆ. ವರ್ಷದಿಂದ ವರ್ಷಕ್ಕೆ ತಡೆ ಒಡ್ಡುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಇದಕ್ಕೂಂದು ದೃಷ್ಟಾಂತ.

ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಹಾಯಧನ
ಬಹುಮುಖ್ಯವಾಗಿ ಕೃಷಿ ಉದ್ದೇಶದಿಂದ ಕಿಂಡಿ ಅಣೆಕಟ್ಟಿನ ಪರಿಕಲ್ಪನೆ ಅಗತ್ಯತೆ ಇರುವುದು ಗ್ರಾಮಾಂತರ ಪ್ರದೇಶದಲ್ಲಿ. ಸಣ್ಣ ನೀರಾವರಿ ಇಲಾಖೆಯು ಹೊಳೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡಿದರೆ, ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾಯತ್‌ ವತಿಯಿಂದ ತೋಡುಗಳಿಗೆ 5 ಲಕ್ಷ ರೂ. ಒಳಗಿನ ವೆಚ್ಚದ ಕಟ್ಟ ನಿರ್ಮಾಣಕ್ಕೆ ಸಹಾಯಧನ ನೀಡುತ್ತದೆ. ಆದರೆ ಸಹಾಯಧನ ಇಲ್ಲದೆಯೋ ಇಂತಹ ಕಟ್ಟ ನಿರ್ಮಿಸಿದವರು ಹಲವರಿದ್ದಾರೆ.

ಗಣನೀಯ ಕೊಡುಗೆ
ಅಣೆಕಟ್ಟು, ಕಿಂಡಿ ಅಣೆಕಟ್ಟು, ಸಣ್ಣ ಒಡ್ಡುಗಳು ಅಂತರ್ಜಲದ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡುತ್ತಿವೆ. ಇಂತಹ ಅಂತರ್ಜಲ ಸಂರಕ್ಷಣೆ ಇರುವೆಡೆ ಬಾವಿ, ಕೆರೆಮೂಲಗಳಲ್ಲಿ ಜಲ ಮಟ್ಟ ಏರಿಕೆ ಆಗುತ್ತಿರುವುದು ಕಿಂಡಿ ಕಟ್ಟಗಳಿಂದ ಆಗುತ್ತಿರುವ ಪ್ರಯೋಜನಕ್ಕೆ ಪ್ರತ್ಯಕ್ಷ ಸಾಕ್ಷಿ. ಜತೆಗೆ ಭೂಮಿಯೊಳಗೆ ಕುಸಿಯುತ್ತಿರುವ ಅಂತರ್ಜಲ ಹೆಚ್ಚಳಕ್ಕೂ ಇದರ ಕೊಡುಗೆ ಅಪಾರ.

-  ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ICC-Champ

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC-Champ

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.