ಗಿರ್ಮಿಟ್ ಜಾದೂ; ದಾಸನಕೊಪ್ಪದಲ್ಲಿ “ಖಾರಾ- ಮಂಡಕ್ಕಿ’ ರುಚಿ
ನಿತ್ಯ 120 ಪ್ಲೇಟ್ ಖಾಲಿ
Team Udayavani, Dec 23, 2019, 5:33 AM IST
ಸ್ಥಳ: ಮಂಜುನಾಥ ಹೋಟೆಲ್, ದಾಸನಕೊಪ್ಪ ಗ್ರಾಮ, ಶಿರಸಿ
ಸಮಯ: ಬೆಳಗ್ಗೆ 8- ರಾತ್ರಿ 8
ವಾರದ ಎಲ್ಲಾ ದಿನ ತೆರೆದಿರುತ್ತದೆ
ಮಂಡಕ್ಕಿಯನ್ನು ಹಾಗೇ ತಿನ್ನಲೂ ತುಂಬಾ ರುಚಿ. ಅದರಲ್ಲೂ ರಾಣೆಬೆನ್ನೂರಿನಿಂದ ತರಿಸಿದ ಮಂಡಕ್ಕಿಗೆ ಹದವಾಗಿ ಖಾರ, ಸೇವು ಹಾಕಿ ಸಾಂಬಾರ ಮಿಕ್ಸ್ ಮಾಡಿ, ಅದರ ಮೇಲೊಂದು ಕರಿದ ಮೆಣಸಿನಕಾಯಿ ಇದ್ದರೆ ರುಚಿ ಸೂಪರ್! ಈ ಮಂಡಕ್ಕಿ ಖಾರದ ಸ್ವಾದಿಷ್ಟಕರ ರುಚಿ ನೋಡಲು ದಾಸನಕೊಪ್ಪಕ್ಕೆ ಬರಬೇಕು. ಶಿರಸಿಯಿಂದ ಹಾವೇರಿಗೆ ತೆರಳುವಾಗ, ಶಿರಸಿ ತಾಲೂಕಿನ ಗಡಿ ಅಂಚಿನಲ್ಲಿ ಸಿಗುವ ಊರೇ ದಾಸನಕೊಪ್ಪ. ಇಲ್ಲಿನ ಸಣ್ಣ ಪೇಟೆಯ “ಮಂಜುನಾಥ ಹೋಟೆಲ್’ನಲ್ಲಿ ಕೊಡುವ ಮಂಡಕ್ಕಿಯ ಗಿರ್ಮಿಟ್‌ನ ರುಚಿಯನ್ನು ಸವಿದವರೇ ಬಲ್ಲರು. ಇಲ್ಲಿನ ಮಂಡಕ್ಕಿ ಅಥವಾ ಅವಲಕ್ಕಿ ಬಳಸಿ ಮಾಡಿಕೊಡುವ ಖಾರ, ಕಳೆದ ಐದಾರು ದಶಕಗಳಿಂದಲೂ ಫೇಮಸ್. ಸುತ್ತಮುತ್ತಲಿನ ಊರುಗಳಲ್ಲಿ, ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಕೇಳಿಕೊಂಡು ಬಂದು ತಿಂದು ಹೋಗುತ್ತಾರೆ.
ತಂದೆಯಿಂದ ಪಡೆದ ಕೈರುಚಿ
ಈ ಖಾರಾ ಮಂಡಕ್ಕಿ ಸ್ಟಾಲ್ ಮಾಲೀಕ, ಅಂಜು ರಾಮಣ್ಣ ಇಳಿಗೇರ. ಈ ರುಚಿಕರ ತಿನಿಸು ತಯಾರಿಸುವುದನ್ನು ತಂದೆಯಿಂದ ಕಲಿತದ್ದು ಎನ್ನುತ್ತಾರೆ ಅವರು. ದಿನವೊಂದಕ್ಕೆ ನೂರು ಸೇರಿಗೂ ಅಧಿಕ ಮಂಡಕ್ಕಿಗೆ ರಾಮಣ್ಣನವರೇ ಜೀರಿಗೆ, ಸಾಸಿವೆ, ಉಳ್ಳಾಗಡ್ಡಿ, ಮೆಣಸು ಎಲ್ಲ ಸೇರಿಸಿ ಹದಗೊಳಿಸುತ್ತಾರೆ. ಹಾಗೆ, ಪಾತ್ರೆಯ ಬಡ್ಡೆಯಲ್ಲಿ ತಿರುಗಿಸಿ, ಅದು ಹಸಿಯಾಗದೇ ಇರಲು ಹಾಗೂ ಸ್ವಾದಿಷ್ಟವಾಗಿರಲು ಬಟಾಣಿ ಹುಡಿಯನ್ನೂ ಮಿಕ್ಸ್ ಮಾಡುತ್ತಾರೆ. ಈ ಗಿರ್ಮಿಟ್ ಮಂಡಕ್ಕಿ ಖಾರವನ್ನು ಸಂಜೆ ವೇಳೆಗೆ ತಿಂದರೆ ಹೆಚ್ಚು ಸೂಕ್ತ ಎನ್ನುವುದು ಇಲ್ಲಿನ ಗ್ರಾಹಕರ ಅಭಿಪ್ರಾಯ.
ಬೆಂಗಳೂರಿಗೂ ಪ್ರಯಾಣ ಬೆಳೆಸುತ್ತೆ
ದೂರದ ಕಾರವಾರ, ಸಾಗರ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಬೆಂಗಳೂರಿಗೂ ಈ ಖಾರಾ ಮಂಡಕ್ಕಿ ರವಾನೆಯಾಗುತ್ತದೆ. ಒಂದು ಪ್ಲೇಟ್ ಮಂಡಕ್ಕಿಗೆ 15 ರೂ. ದರವಿದೆ. ನಿತ್ಯ ನೂರರಿಂದ ನೂರ ಇಪ್ಪತ್ತು ಪ್ಲೇಟ್ ಸೇಲ್ ಆಗುತ್ತದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ರಾಮಣ್ಣನವರಿಗೆ ಖಾರಾ ಮಂಡಕ್ಕಿ ಹೋಟೆಲು ಬದುಕು ಕಟ್ಟಿಕೊಟ್ಟಿದೆ. ಹಾವೇರಿಯಿಂದ ಶಿರಸಿಗೆ ಹೋಗುವ ಹಾದಿಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ, “ಮಂಜುನಾಥ ಹೋಟೆಲ್’ಗೆ ಭೇಟಿ ನೀಡಿ ಖಾರಾ ಮಂಡಕ್ಕಿ ರುಚಿ ಸವಿಯಲು ಮರೆಯದಿರಿ.
ಅಂಜು ಇಳಿಗೇರ. 9972325541
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.