ದಶಕದ ಟಾಪ್ 10 ಜನಪ್ರಿಯ ಆ್ಯಪ್‌ಗಳು
Team Udayavani, Dec 23, 2019, 4:40 AM IST
ಹೊಸ ವರ್ಷಕ್ಕೆ ಅಣಿಯಾಗುತ್ತಿರುವ ಹೊತ್ತಿದು. ಇದರೊಂದಿಗೆ ಒಂದು ದಶಕ ಅಂತ್ಯವಾಗುತ್ತಿದೆ. ಕಳೆದ ದಶಕದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆದ ಟಾಪ್ 10 ಆ್ಯಪ್‌ಗಳ ಪಟ್ಟಿಯೊಂದು ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಯಾವುದೇ ಆ್ಯಪ್‌ನ ಯಶಸ್ಸು ಮತ್ತು ಜನಪ್ರಿಯತೆ ಅದನ್ನು ಎಷ್ಟು ಬಳಕೆದಾರರು ಬಳಸುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಆ್ಯಪ್‌ಗಳೆಲ್ಲವೂ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿರುವಂಥವು.
ಟಾಪ್ 10 ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಅಲಂಕರಿಸಿರುವ ಸಂಸ್ಥೆ ಫೇಸ್‌ಬುಕ್!
ಫೇಸ್‌ಬುಕ್ ಸಂಸ್ಥೆ ಒಂದೇ ಆಗಿರುವುದರಿಂದ ನಾಲ್ಕು ಸ್ಥಾನಗಳು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ. ಮೊದಲ ಸ್ಥಾನ ಫೇಸ್‌ಬುಕ್ ಆ್ಯಪ್‌ನ ಪಾಲಾಗಿದ್ದರೆ, ಎರಡನೇ ಸ್ಥಾನ ಫೇಸ್‌ಬುಕ್‌ನ ಮೆಸೆಂಜರ್ ಆ್ಯಪ್ ಪಾಲಾಗಿದೆ. ಇನ್ನು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಎರಡೂ ಫೇಸ್‌ಬುಕ್ ಒಡೆತನದ ಸಂಸ್ಥೆಗಳೇ ಆಗಿವೆ. ಖಾಸಗಿತನ, ಫೇಕ್ ನ್ಯೂಸ್ ಇನ್ನೂ ಹಲವು ವಿವಾದಗಳನ್ನು ಎದುರಿಸುತ್ತಿರುವ ಫೇಸ್‌ಬುಕ್ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಇದರಿಂದ ಸಾಬೀತಾದಂತಾಗಿದೆ. ನಂತರದ ಸ್ಥಾನಗಳಲ್ಲಿ ಸ್ನ್ಯಾಪ್‌ಚಾಟ್(5), ವಿಡಿಯೋ ಕಾಲಿಂಗ್ ಆ್ಯಪ್ ಸ್ಕೈಪ್(6), ಟಿಕ್‌ಟಾಕ್(7), ಯುಸಿ ಬ್ರೌಸರ್(8), ಯುಟ್ಯೂಬ್(9) ಮತ್ತು ಹತ್ತನೆಯದಾಗಿ ಟ್ವಿಟ್ಟರ್ ಆ್ಯಪ್‌ಗ್ಳಿವೆ. ಅದನ್ನು ಹೊರತುಪಡಿಸಿ ಗೇಮಿಂಗ್ ಆ್ಯಪ್‌ಗ್ಳ ನಡುವಿನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿರುವುದು “ಸಬ್‌ವೇ ಸರ್ಪೆರ್’. ಇದರ ಬಳಕೆದಾರರಲ್ಲಿ ಶೇ. 15ರಷ್ಟು ಮಂದಿ ಭಾರತೀಯರು ಎನ್ನುವುದು ಗಮನಾರ್ಹ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.