ಅಪರಾಧ ಚಟುವಟಿಕೆಯಲ್ಲಿ ಅಪ್ರಾಪ್ತರ ಭಾಗಿ


Team Udayavani, Dec 23, 2019, 3:00 AM IST

aparadha

ತಿಪಟೂರು: ಮಕ್ಕಳು ದುಶ್ಚಟ, ಕೆಟ್ಟ ಆಲೋಚನೆ, ಅಪರಾಧ ಚಟುವಟಿಕೆಗೆ ಬಲಿಯಾಗುತ್ತಿರುವುದು ಆತಂಕಕಾರಿ ಎಂದು ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಹೇಳಿದರು. ನಗರದ ಕಲ್ಪತರು ವಿದ್ಯಾಸಂಸ್ಥೆಯು ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲ್ಪತರು ಸೆಂಟ್ರಲ್‌ ಸ್ಕೂಲ್‌ನ ಕಲ್ಪಮೌಲ್ಯ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರ, ಸಮಾಜಮುಖೀ ಚಿಂತನೆ, ಭಾವನೆ, ಪ್ರೀತಿ ವಾತ್ಸಲ್ಯ ಕಲಿಸುವ ಜವಾಬ್ದಾರಿ ಶಿಕ್ಷಕರ ಜೊತೆಗೆ ಹೆತ್ತವರದ್ದಾಗಿದೆ. ಅತ್ಯಾಚಾರ, ಉಗ್ರ ಚಟುವಟಿಕೆ, ಇನ್ನಿತರ ಅಪರಾಧಗಳಲ್ಲಿ ಅಪ್ರಾಪ್ತರೂ ಭಾಗಿರುವುದು ಕಳವಳಕಾರಿ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುವಾಗೇ, ಮಕ್ಕಳು ಯಾವ ದಾರಿ, ಯಾರ ಸಹವಾಸದಲ್ಲಿದ್ದಾರೆ ಎಂಬ ಬಗ್ಗೆ ನಿಗಾವಹಿಸಬೇಕು.

ಮಕ್ಕಳು ಸಣ್ಣಮಟ್ಟದ ಅಡ್ಡ ದಾರಿ ಹಿಡಿದರೂ ಹೆತ್ತವರಿಗೆ ಗೊತ್ತಾಗುತ್ತದೆ. ಆ ಸಂದರ್ಭ ಪ್ರೀತಿ, ವಾತ್ಸಲ್ಯ, ಭಾವನಾತ್ಮಕವಾಗಿ ಮಕ್ಕಳಿಗೆ ಮನವರಿಕೆ ಮಾಡಬೇಕು. ಪ್ರಾಪ್ತ ವಯಸ್ಸಿಗೆ ಬರುವವರೆಗೂ ಸ್ನೇಹಿತರಂತೆ ನಡೆದುಕೊಂಡು ಸಂಸ್ಕಾರ, ಧರ್ಮ, ಗುರುಹಿರಿಯರ ಬಗ್ಗೆ ಗೌರವ, ದೇಶಾಭಿಮಾನ ಮೂಡುವಂತೆ ನೋಡಿಕೊಂಡಾಗ ಹೆತ್ತವರ ಜವಾಬ್ದಾರಿ ಸಾರ್ಥಕವಾಗುತ್ತದೆ ಎಂದು ಹೇಳಿದರು.

ವಿಶ್ವಮಟ್ಟದಲ್ಲಿ ಕೀರ್ತಿ: ತುಮಕೂರು ಜಿಲ್ಲೆಗೆ ಕಳಶಪ್ರಾಯದಂತೆ ತಿಪಟೂರಿನ ಕಲ್ಪತರು ವಿದ್ಯಾ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. 1960ರ ದಶಕದಲ್ಲೇ ಪ್ರೊ.ದಿ. ಮಹಲಿಂಗಯ್ಯ, ಪಲ್ಲಾಗಟ್ಟಿ ಅಡವಪ್ಪರಂತಹ ಮಹಾ ಮಹಿಮರು ಈ ಭಾಗದ ದಾನಿಗಳ ನೆರವಿನಿಂದ ಗ್ರಾಮೀಣ ಜನರಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಈ ಸಂಸ್ಥೆ ಸ್ಥಾಪಿಸಿದರು. ತಿಪಟೂರಿಗೆ ಕಲ್ಪತರು ನಾಡು ಎಂಬ ಹೆಸರು ಬರಲು ಇಲ್ಲಿನ ತೆಂಗು, ಕೊಬ್ಬರಿ ಹೇಗೆ ಸ್ಥಾನ ಪಡೆದಿವೆಯೋ ಅಷ್ಟೇ ಮಟ್ಟದಲ್ಲಿ ಕಲ್ಪತರು ವಿದ್ಯಾಸಂಸ್ಥೆಯೂ ಸ್ಥಾನ ಪಡೆದಿದೆ.

ಈ ಸಂಸ್ಥೆ ಡೊನೇಷನ್‌ ಎಂಬ ಭೂತದಿಂದ ಈ ಭಾಗದ ಜನರ ಹೆದರಿಸುತ್ತಿಲ್ಲ. ಕಡಿಮೆ ಹಣದಲ್ಲಿ ಗುಣಮಟ್ಟದ ಶಿಕ್ಷಣ, ಶೇ.100 ಫ‌ಲಿತಾಂಶ ನೀಡುತ್ತಿದೆ. ಸಂಸ್ಥೆಯಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲೂ ಕೆಲಸ ಮಾಡುತ್ತ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲ ರೀತಿಯ ಸವಲತ್ತು ನೀಡಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳು ಗುರಿಮುಟ್ಟಿ ಸಂಸ್ಥೆ, ಶಿಕ್ಷಕರು, ಹೆತ್ತವರಿಗೂ ಕೀರ್ತಿ ತರಲಿ ಎಂದು ಆಶಿಸಿದರು.

ಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ಸುಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಕ್ರಾಂತಿಯೇ ಸರಿ ಎಂಬ ಮಾತಿಗೆ ಸಂಸ್ಥೆಯಿಂದ ನಾನಾ ಕಾಲೇಜು ತೆರೆದು ಮೂಲಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸೆಂಟ್ರಲ್‌ ಸ್ಕೂಲ್‌ ನಡೆಸುತ್ತಿದ್ದೇವೆ. ಉತ್ತಮ ಕಟ್ಟಡ, ತಂತ್ರಜ್ಞಾನ, ಕ್ರೀಡಾ ಮೈದಾನ, ಪ್ರಯೋಗಾಲಯ ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಬುದ್ಧಿಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರು ಮಾಡಿಸಿಕೊಂಡಿದ್ದೇವೆ ಎಂದರು.

ಕಾರ್ಯದರ್ಶಿ ಕೆ.ಪಿ.ರುದ್ರಮುನಿಸ್ವಾಮಿ ಮಾತನಾಡಿ, 2003ರಲ್ಲಿ ಕೇವಲ 143 ಮಕ್ಕಳೊಂದಿಗೆ ಪ್ರಾರಂಭವಾಗಿರುವ ಶಾಲೆಯಲ್ಲಿ ಈಗ 1500ಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡೆ, ಉತ್ತಮ ಗ್ರಂಥಾಲಯ, ಶೈಕ್ಷಣಿಕ ಪ್ರವಾಸ, ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು.

ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಖಜಾಂಚಿ ಟಿ.ಎಸ್‌. ಶಿವಪ್ರಸಾದ್‌ ಮಾತನಾಡಿ, ಕಳೆದ 12 ವರ್ಷದಿಂದ ಸಿಬಿಎಸ್‌ಸಿ ಬೋರ್ಡ್‌ ನಡೆಸುವ ಪರೀಕ್ಷೆಯಲ್ಲಿ ಶೇ.100 ಫ‌ಲಿತಾಂಶ ಪಡೆಯುತ್ತಿದ್ದೇವೆ. ಪ್ರತಿ ಮಕ್ಕಳ ವೈಯಕ್ತಿಕ ಕಲಿಕೆಗೆ ಹೆಚ್ಚು ಒತ್ತು ನೀಡುತ್ತ, ಮೂಲ ಸೌಲಭ್ಯ, ಉತ್ತಮ ಬೋಧನಾ ವ್ಯವಸ್ಥೆ ಮಾಡಿದ್ದೇವೆ. ಸಂಸ್ಥೆ ನಡೆಸುತ್ತಿರುವ ಮಾಂಟೆಸ್ಸರಿ, ಪಿಯುಸಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜುಗಳು ಸೇರಿ ಎಂಜಿನಿಯರಿಂಗ್‌ ಕಾಲೇಜಿನಲ್ಲೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಹೆಸರು ಪಡೆದಿದ್ದೇವೆ ಎಂದರು.

ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ, ಬಹುಮಾನ ನೀಡಲಾಯಿತು. ಮಕ್ಕಳ ಆಕರ್ಷಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಇಒ ಬಿ. ಮಂಗಳಗೌರಮ್ಮ, ಸೆಂಟ್ರಲ್‌ ಸ್ಕೂಲ್‌ ಪ್ರಾಂಶುಪಾಲೆ ದೇವಿಕಾ ಬಿ. ಸ್ವಾಮಿ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷರಾದ ಎಸ್‌.ಎಸ್‌.ನಟರಾಜು, ಕಾರ್ಯದರ್ಶಿ ರಾಜಕುಮಾರ್‌, ಟಿ.ಯು.ಜಗದೀಶ್‌ ಮೂರ್ತಿ ಅನೇಕ ಗಣ್ಯರಿದ್ದರು.

ಹಳ್ಳಿಗಳು ಖಾಲಿ!: ಪ್ರಸ್ತುತ ದಿನಗಳಲ್ಲಿ ಬಡವ, ಸಾಮಾನ್ಯ, ರೈತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಮಕ್ಕಳು ನಗರದ ಕಾನ್ವೆಂಟ್‌ಗಳಲ್ಲೇ ಓದಬೇಕು. ಅದರಲ್ಲೂ ಉತ್ತಮ ಹೆಸರು ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲೇ ಓದಬೇಕು. ಉತ್ತಮ ಕೆಲಸ ಸಿಗಬೇಕೆಂಬ ಆಸೆಯಿಂದ ಹಳ್ಳಿ ತೊರೆದು ನಗರ, ಪಟ್ಟಣಗಳಲ್ಲೇ ಮನೆ ಮಾಡಿಕೊಂಡಿದ್ದಾರೆ. ಕಷ್ಟದಲ್ಲಿದ್ದರೂ ದುಡಿದು, ಕೆಲವೊಮ್ಮೆ ಜಮೀನು ಮಾರಿ ಓದಿಸುತ್ತಾರೆ.

ಹಿಂದೆ ಯುವಕರು ಉದ್ಯೋಗಕ್ಕೋಸ್ಕರ ಹೆತ್ತವರ ಬಿಟ್ಟು ಹಳ್ಳಿ ತೊರೆದು ನಗರಗಳಿಗೆ ವಲಸೆ ಬರುವುದು ಸಾಮಾನ್ಯವಾಗಿತ್ತು. ಆದರೆ ಈಗ ಮಕ್ಕಳನ್ನು ಓದಿಸಲು ಹೆತ್ತವರು ಹಳ್ಳಿ ತೊರೆಯುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರಗಳು ಹಳ್ಳಿಗಳಲ್ಲಿ ಉತ್ತಮ ಸೌಲಭ್ಯವುಳ್ಳ ಶಾಲೆ ತೆರೆಯಬೇಕು ಎಂದು ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಹೇಳಿದರು.

ಟಾಪ್ ನ್ಯೂಸ್

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.