ನಿರೀಕ್ಷೆ ಮಿತಿಯಲ್ಲಿರಲಿ
Team Udayavani, Dec 23, 2019, 4:10 AM IST
ಜೀವನದ ಪ್ರತಿ ಹಂತ ಅನೇಕ ಮಜಲಿನ ಆಗರ…ಆ ಹಂತದಲ್ಲಿ ಸಂಭವಿಸುವ ಎಲ್ಲ ಪ್ರಕ್ರಿಯೆಗಳು ಮನಸ್ಸಿನ ಇಷ್ಟಾರ್ಥವಾಗಿ ನಡೆಬೇಕೆಂಬುದು ಎಲ್ಲರ ಮಹದಾಸೆ. ಅನೇಕ ನಿರೀಕ್ಷೆಗಳ ಬೃಹತ್ ಕೂಪ ನಮ್ಮ ಮನಸ್ಸು. ಬೆಟ್ಟದ ಎತ್ತರದಷ್ಟು ನಿರೀಕ್ಷೆಗಳನ್ನ ಜೋಳಿಗೆ ಹಾಕೊಂಡು ಕನಸು ಕಾಣುವ ಪರಿ ನಮ್ಮದು. ಕಂಡ ಕನಸು ನನಸಾಗದೇ ಉಳಿದಾಗ ನಮ್ಮ ನಿರೀಕ್ಷೆ ಹುಸಿಯಾಗುವುದು ನಿಶ್ಚಿತ. ಕಾಣುವ ಪ್ರತಿಯೊಂದು ವಿಚಾರದಲ್ಲಿ ನಮ್ಮ ಪಾತ್ರ ಸದಾ ಇರಬೇಕೆಂದು ಬಯಸುವುದು ಮೂರ್ಖತನ. ಕೈಗೆಟುಕದ ಕಾರ್ಯವನ್ನು ಮುಂದಿಟ್ಟು ನಿರೀಕ್ಷೆಗಳನ್ನು ಸೃಷ್ಟಿಸಿ ಬಳಿಕ ವೇದನೆ ಪಡುವುದು ಸಲ್ಲ.
ನಿರೀಕ್ಷೆ ತಪ್ಪೇ?
ತನ್ನ ಯೋಗ್ಯತೆಗಿಂತ ಜಾಸ್ತಿ ಕನಸು ಕಾಣುತ್ತಾರೆ. ನಿರೀಕ್ಷಿತ ಪ್ರತ್ಯುತ್ತರ ಅಥವಾ ನಿರೀಕ್ಷಿತ ಸ್ವರ ಬಾರದೇ ಹೋದಾಗ ಕೊಂಚ ಮುದು ಡುವುದು ಸಹಜ. ನಮ್ಮ ನಿರೀಕ್ಷೆಗಳು ಮತ್ತೂಬ್ಬರಲ್ಲಿ ನೋವುಂಟು ಮಾಡುತ್ತದೆ ಎನ್ನುವುದುದಾದರೆ ನಮ್ಮ ನಿರೀಕ್ಷೆಗಳಿಗೆ ಅರ್ಥ ಎಲ್ಲಿದೆ? ಜೀವನದ ಹಂತದಲ್ಲಿ ಬುದುಕು ಹೀಗೆಯೇ ಶೃಂಗಾರ ಗೊಳ್ಳಬೇಕೆಂದು ಕಾಣದ ಕಸರತ್ತಿಗೆ ಕೈ ಹಾಕುತ್ತೇವೆ.ಅದರಲ್ಲಿ ಯಶಸ್ಸು ಕಾಣಲು ಸಾಧ್ಯವೇ ಇಲ್ಲವೆಂದು ತಿಳಿದಾಗ ಮನಸ್ಸು ಬೇಡದ ಕಾರ್ಯಕ್ಕೆ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ನಿರೀಕ್ಷೆ ಹುಟ್ಟಿಸಲು ಮತ್ತೂಬ್ಬ ವ್ಯಕ್ತಿಯಿಂದಲೂ ಸಾಧ್ಯ. ಆದರೆ ಆತನ ಜೀವನ ನಿರೀಕ್ಷೆಗಳ ಸಾಗರದಲ್ಲಿ ಮಿಂದೇ ಳದಿದ್ದರೆ ಸಮಾಜದಲ್ಲಿ ವ್ಯವಹರಿಸಲು ಸಾಧ್ಯ. ವೈಯಕ್ತಿಕ ಜೀವನದಲ್ಲಿ ಸೋಲುಂಡಾಗ ಅದರ ಹೊರೆ ಮತ್ತೂಬ್ಬರಿಗೆ ವಹಿಸುವುದು ತುತ್ಛ ಕಾರ್ಯ. ಯಶಸ್ಸಿನ ತೋಟಕ್ಕೆ ನಾವೇ ಗೊಬ್ಬರ ಹಾಕಬೇಕು. ಮತ್ತೂಬ್ಬರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಾರದು. ಹಾಗಾಗಿ ಜೀವನದ ಮುನ್ನಡೆ ಅಥವಾ ಹಿನ್ನಡೆಗೆ ನಾವೇ ಕಾರಣ ಹೊರತು ನಮ್ಮ ನಿರೀಕ್ಷೆಗಳಲ್ಲ.ಪ್ರಯತ್ನ ರಹಿತ ಕಾರ್ಯದಲ್ಲಿ ಫಲ ದೊರೆಯುವುದು ಬೇಸಿಗೆಯಲ್ಲಿ ಮಾವಿನ ಮರದಲ್ಲಿ ಚಿಗುರು ಕಂಡಂತೆ.
- ಗಣೇಶ್ ಪವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.