ಜೀವನವನ್ನು ಅನುಭವಿಸಿ
Team Udayavani, Dec 23, 2019, 4:12 AM IST
ಸುಖ ದಃಖದ ಬಗ್ಗೆ ಕೃಷ್ಣ ಹೇಳುವ ಮಾತು-ಸುಖ ಎಲ್ಲರ ಬಳಿಯೂ ಇದೆ. ಆದರೆ ಎಲ್ಲರೂ ಇನ್ನೊಬ್ಬರ ಸಂತೋಷದಿಂದ ದುಃಖಿಗಳಾಗಿದ್ದಾರೆ ಅಷ್ಟೆ.
ಐಸ್ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಎಲ್ಲರೂ ಅದನ್ನು ಸವಿದವರೇ. ಅಂತೆಯೇ ಐಸ್ ಕ್ರೀಂ ಅನ್ನು ಹಾಗೇ ಹಿಡಿದುಕೊಂಡರೆ ಬೇಗ ಕರಗಿ ಹೋಗಿಬಿಡುತ್ತದೆ. ಅದನ್ನು ಸವಿಯಬೇಕಾದರೆ ತಕ್ಷಣವೇ ತಿಂದು ಬಿಡಬೇಕು. ಇಲ್ಲವಾದರೆ ಅದು ವ್ಯರ್ಥವಾಗಿ ಬಿಡುತ್ತದೆ. ಇದು ಸರಳವಾದ ನಿಯಮ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.
ಜೀವನವೆಂಬ ಐಸ್ ಕ್ರೀಂ ಅನ್ನು ಕರಗುವ ಮುನ್ನವೇ ಸವಿಯಬೇಕು. ಇಲ್ಲವಾದರೆ ಅದರ ನಷ್ಟವನ್ನು ಕೂಡ ಅನುಭವಿಸುವುದು ನಾವೇ. ಜೀವನದಲ್ಲಿ ಬರುವ ಎಲ್ಲ ಪಾತ್ರಗಳು ಕೆಲವೊಂದಿಷ್ಟು ದಿನಗಳು ಮಾತ್ರ ಇರುತ್ತವೆ. ಹಾಗಾಗಿ ನಾವು ಆ ದಿನಗಳಲ್ಲೇ ಆ ಪಾತ್ರಗಳನ್ನು ಅರಿಯಬೇಕು. ಅವರೊಂದಿಗೆ ಖುಷಿ, ಸಂತೋಷ, ನೋವು-ನಲಿವುಗಳನ್ನು ಹಂಚಿಕೊಂಡಾಗ ಜೀವನದ ಬಹುತೇಕ ಸುಖವನ್ನು ನಾವು ಅನುಭವಿಸುತ್ತೇವೆ. ಇದು ಜೀವನವನ್ನು ಅರಿಯಲು ಸಹಾಯಕವಾಗುತ್ತದೆ. ಇನ್ನು ಕೆಲವರೂ ಬಿಟ್ಟು ಹೋದರೆ ನಮಗೆ ಅವರ ಮೌಲ್ಯವನ್ನು ತಿಳಿಯುವುದಿಲ್ಲ. ಆದರೆ ಕೆಲವು ದಿನಗಳ ಅನಂತರ ಅವರ ಇರುವಿಕೆಯ ಅರ್ಥವಾಗುತ್ತದೆ. ಆದರೆ ಏನು ಮಾಡುವುದು ಆ ಐಸ್ ಕ್ರೀಂ ಕರಗಿ ಹೋಗಿರುತ್ತದೆ. ಆದರೆ ನಾವು ಸವಿದಿರುವುದಿಲ್ಲ. ಇದರಿಂದ ಹೊಡೆತವೂ ಕೂಡ ನಮಗೆ. ಹಾಗಾಗಿ ನಮ್ಮೊಂದಿಗೆ ಇರುವ ಎಲ್ಲರನ್ನೂ ಪ್ರೀತಿಯಿಂದಲೇ ಕಂಡಾಗ ಮಾತ್ರ ಜೀವನವೆಂಬ ಐಸ್ ಕ್ರೀಂ ಸವಿಯಲು ಸಾಧ್ಯ.
ಜೀವನದಲ್ಲಿ ಎಲ್ಲರೊಂದಿಗೆ ನಾವೇ ಹೊಂದಾಣಿಕೆಯಾಗಬೇಕೆ ವಿನಾಃ ಬೇರಯವರು ನಮಗೆ ಹೊಂದಾಣಿಕೆಯಾಗಬೇಕು ಎಂದು ಭಾವಿಸುವುದು ತಪ್ಪು. ಈ ಮನೋಭಾವನೆಯನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳುವುದು ಸೂಕ್ತ. ಹಾಗಾಗಿ ಹೊಂದಾಣಿಕೆ ಎಂಬುವುದು ಕೂಡ ಜೀವನದಲ್ಲಿ ಮುಖ್ಯ. ಐಸ್‌ಕ್ರೀಂ ಕೂಡ ತುಂಬಾ ಹೊಂದಾಣಿಕೆಯ ವಸ್ತು. ಇದು ಚಳಿಗಾಲ, ಬೇಸಗೆಕಾಲ ಮತ್ತು ಮಳೆಗಾಲ ಯಾವ ಕಾಲವಾದರೂ ಕೂಡ ಐಸ್ ಕ್ರೀಂ ಪ್ರಿಯರು ಸವಿಯುತ್ತಾರೆ. ಅದರಂತೆ ನಾವು ಯಾವಾಗಲೂ ಒಂದೇ ಮನಃಸ್ಥಿತಿಯಲ್ಲಿರಬೇಕು. ಆಗ ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ. ನಮ್ಮೊಂದಿಗೆ ಬೆರೆಯುತ್ತಾರೆ. ಇದು ಜೀವನ ಭಾಗದ ಮುಖ್ಯ ಸೂತ್ರವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.