ಐತಿಹಾಸಿಕ ಕಿಲ್ಲೆ ಮೈದಾನಕ್ಕೆ ಹೊಸ ರೂಪ
ನಗರೋತ್ಥಾನ ಯೋಜನೆಯಡಿ 38 ಲಕ್ಷ ರೂಪಾಯಿ ಅನುದಾನ
Team Udayavani, Dec 23, 2019, 4:40 AM IST
ಪುತ್ತೂರು: ಪುತ್ತೂರಿನ ಐತಿಹಾಸಿಕ ಹಿನ್ನೆಲೆಯ ಕಿಲ್ಲೆ ಮೈದಾನ ಹಾಗೂ ಸುತ್ತಲಿನ ಪರಿಸರ ನಗರದ ಸೌಂದರ್ಯ ಹೆಚ್ಚಿಸುವಂತೆ ಹೊಸ ರೂಪಕ್ಕೆ ಪರಿವರ್ತನೆ ಹೊಂದುತ್ತಿದೆ. ಹಿಂದಿನ ಸರಕಾರ ಪುತ್ತೂರು ನಗರ ಸಭೆಗೆ ನಗರೋತ್ಥಾನ ಯೋಜನೆಯಲ್ಲಿ ಮಂಜೂರುಗೊಳಿಸಿದ 25 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 38 ಲಕ್ಷ ರೂ. ಅನುದಾನವನ್ನು ಕಿಲ್ಲೆ ಮೈದಾನದ ಅಭಿವೃದ್ಧಿಗೆ ಇರಿಸಲಾಗಿದೆ. ಮೈದಾನದ ಸುತ್ತಲಿನ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ವಿನಿಯೋಗಿಸಲಾಗಿದೆ.
ಮೈದಾನದ ಹೆಗ್ಗಳಿಕೆ
ಶತಮಾನದ ಹಿಂದಿನ ಇತಿಹಾಸವನ್ನು ಹೊಂದಿರುವ ಕಿಲ್ಲೆ ಮೈದಾನಕ್ಕೆ ಬಳಿಕದಲ್ಲಿ ಕೋರ್ಟಿನ ಪಕ್ಕದಲ್ಲಿರುವ ಕಾರಣ ಕೋರ್ಟು ಮೈದಾನ ವೆಂಬ ಹೆಸರು ಬಂದಿತ್ತು. ಅನಂತರದಲ್ಲಿ ಸುಮಾರು 2 ದಶಕಗಳ ಹಿಂದೆ ಮೈದಾನಕ್ಕೆ ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನ ಎಂದು ಹೆಸರಿಡಲಾಗಿದೆ. ಸೋಮವಾರದ ಸಂತೆ ವ್ಯಾಪಾರದಿಂದ ತೊಡಗಿ ಸಾರ್ವಜನಿಕ ಕಾರ್ಯಕ್ರಮ, ಸರಕಾರಿ, ಖಾಸಗಿ ಹಬ್ಬಗಳ ಆಚರಣೆ ಸೇರಿದಂತೆ ವಿವಿಧ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೂ ಮೈದಾನದ ಚೌಕಟ್ಟು ವ್ಯವಸ್ಥಿತವಾಗಿರಲಿಲ್ಲ. ಹಾಲಿ ನಗರಸಭಾ ಕಚೇರಿಯನ್ನು ಬೇರೆ ಕಡೆಯಲ್ಲಿ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಇದು ಕಾರ್ಯ ರೂಪಕ್ಕೆ ಬಂದಾಗ ಹಾಲಿ ನಗರ ಸಭೆಯ ಭಾಗ ಸಂತೆಗೆ ಮೀಸ ಲಾಗಲಿದೆ. ಆಗ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸುವ ಆವಶ್ಯಕತೆ ಇರುವುದಿಲ್ಲ.
ಮೈದಾನ ಅಭಿವೃದ್ಧಿ
ಕಿಲ್ಲೆ ಮೈದಾನಕ್ಕೆ ಚೌಕಟ್ಟಿನ ಸ್ವರೂಪ ನೀಡಲು ನಿರ್ಧರಿಸಿದ ನಗರಸಭೆ ಆ ಮೂಲಕ ಸುಂದರ ಗೊಳಿಸಲು ಯೋಜನೆ ರೂಪಿಸಿದೆ. ಸುತ್ತಲೂ ಆವರಣಗೋಡೆ, ಪಶ್ಚಿಮ ಭಾಗದಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಪೂರಕವಾಗಿ ಗ್ಯಾಲರಿ, ಎರಡು ದಿಕ್ಕಿನಲ್ಲಿ ಆಕರ್ಷಕ ಪ್ರವೇಶ ದ್ವಾರ, ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.
ಮತ್ತಷ್ಟು ಸಮತಟ್ಟು
ಪ್ರವೇಶ ದ್ವಾರಕ್ಕೆ ಸುಭದ್ರ ಗೇಟ್, ಈಗಾಗಲೇ ಮೈದಾನದಲ್ಲಿರುವ ಶೌಚಾಲಯವನ್ನು ಸುಸಜ್ಜಿತಗೊಳಿಸಲು ನಿರ್ಧರಿಸಲಾಗಿದೆ. ಆ ಭಾಗದಲ್ಲೂ ಗ್ಯಾಲರಿ ನಿರ್ಮಾಣವಾಗಲಿದ್ದು, ಮೈದಾನವನ್ನು ಮತ್ತಷ್ಟು ಸಮತಟ್ಟುಗೊಳಿಸಲಾಗುತ್ತದೆ.
ಸುತ್ತಲೂ ಸೌಂದರ್ಯ
ಹಾಲಿ ಮೈದಾನದ ಮೇಲ್ಭಾಗದಲ್ಲಿರುವ ಹಾಗೂ ಮಿನಿ ವಿಧಾನಸೌಧದ ಮುಂಭಾಗ ದಲ್ಲಿರುವ ಪುತ್ತೂರಿಗೆ ವಿಶೇಷ ಗೌರವವನ್ನು ತಂದಿರುವ ವೀರ ಯೋಧರ ಸ್ಮಾರಕ ಅಮರ್ ಜವಾನ್ ಜ್ಯೋತಿ, ಮಂಗಲ್‌ಪಾಂಡೆ ಚೌಕ ಪರಿಸರದಲ್ಲಿ ಇಂಟರ್‌ಲಾಕ್ ಅಳವಡಿಸಿ ಸುಂದರಗೊಳಿಸಲಾಗಿದೆ. ಅಲ್ಲಿರುವ ಆಕರ್ಷಕ ಮರಗಳಿಗೆ ಸುಂದರ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇಲ್ಲೇ ಇರುವ ಹಿಂದಿನ ಸೈರನ್ ಟವರ್ ಹಾಗೂ ರೇಡಿಯೋ ಟವರ್‌ಗಳನ್ನು ನವೀಕರಣಗೊಳಿಸಲಾಗಿದೆ. ಜತೆಗೆ ನಗರವಾಸಿಗಳಿಗೆ ವಾಯುವಿಹಾರಕ್ಕೆ ಸಣ್ಣ ಪಾರ್ಕ್‌ನಂತಿರುವ ಈ ಸ್ಥಳದಲ್ಲಿ ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಕಿಲ್ಲೆ ಮೈದಾನ ಹಾಗೂ ಸುತ್ತಲಿನ ಪರಿಸರದ ಸೌಂದ ರ್ಯ ನಗರದ ಘನತೆಯನ್ನು ಹೆಚ್ಚಿಸಲಿದೆ.
ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣ
ತ್ವರಿತ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಕ್ರೀಡಾಕೂಟ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೂರಕವಾಗಿ ಹಾಗೂ ಸುಂದರವಾಗಿ ಕಿಲ್ಲೆ ಮೈದಾನ ತೆರೆದುಕೊಳ್ಳಲಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು.
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.