ರಾಜ್ಯದ ಕಣ್ ಕಂಕಣದತ್ತ
Team Udayavani, Dec 23, 2019, 4:19 AM IST
ಡಿ. 26ರಂದು ದಕ್ಷಿಣ ಭಾರತ ಅಪರೂಪದ ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದು, ಈ ಖಗೋಳ ವಿಸ್ಮಯದ ಬಗ್ಗೆ ನಾಡಿನ ವಿಜ್ಞಾನಿಗಳು, ವಿಜ್ಞಾನಾಸಕ್ತರು, ವಿದ್ಯಾರ್ಥಿಗಳಲ್ಲಿ ಕೌತುಕವಿದೆ. ಭಾರತದಲ್ಲಿ 2019ರಲ್ಲಿ 3ನೆಯ ಹಾಗೂ ಕೊನೆಯದ್ದಾಗಿರುವ ಈ ಗ್ರಹಣದ ಕೇಂದ್ರ ಮಾರ್ಗವು ಸೌದಿ ಅರೇಬಿಯಾದಿಂದ ಆರಂಭಿಸಿ, ದ.ಭಾರತ, ಸುಮಾತ್ರಾ, ಬೊರ್ನಿಯೊ, ಫಿಲಿಪ್ಪೀನ್ಸ್, ಗುವಾಮ್ ಮೂಲಕ ಹಾದುಹೋಗುತ್ತದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಷ್ಟೇ ಕಂಕಣ ಸೂರ್ಯಗ್ರಹಣ ಕಾಣಿಸಲಿದ್ದು, ಗ್ರಹಣದ ಕೇಂದ್ರ ಮಾರ್ಗದ ಆರಂಭವು ಕಣ್ಣೂರು-ಕಾಸರಗೋಡು ಭಾಗದ ಮೂಲಕ ಆಗಲಿದೆ. ಕರ್ನಾಟಕದಲ್ಲಿ ಮಂಗಳೂರಿನಲ್ಲಿ 93.04 ಪ್ರತಿಶತ, ಮೈಸೂರಿನಲ್ಲಿ 93.5 ಪ್ರತಿಶತ ಹಾಗೂ ಬೆಂಗಳೂರಿನಲ್ಲಿ 89.54 ಪ್ರತಿಶತ ಗೋಚರವಾಗಲಿದೆ. ದೇಶದ ಇತರ ಭಾಗಗಳಲ್ಲಿ ಭಾಗಶಃ ಗೋಚರಿಸಲಿದೆ.
ಕಂಕಣ ರಿಂಗ್‌ಣ
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಸಂಭವಿಸುವ ಗ್ರಹಣವನ್ನು ಸೂರ್ಯಗ್ರಹಣ ಎನ್ನುತ್ತೇವೆ. ಅಮಾಮಾಸ್ಯೆಯ ದಿನ ಸೂರ್ಯ ಗ್ರಹಣ ಸಂಭವಿಸುತ್ತದೆ. ಹಾಗೆಂದು ಎಲ್ಲಾ ಅಮವಾಸ್ಯೆಗಳಲ್ಲೂ ಸೂರ್ಯಗ್ರಹಣ ಇರುವುದಿಲ್ಲ. ಏಕೆಂದರೆ ಎಲ್ಲಾ ಅಮವಾಸ್ಯೆಗಳಲ್ಲಿ ಚಂದ್ರ- ಭೂಮಿ-ಸೂರ್ಯ ಒಂದೇ ರೇಖೆಯಲ್ಲಿ ಇರುವುದಿಲ್ಲ. ಇವು ಮೂರೂ ಒಂದೇ ರೇಖೆಯಲ್ಲಿದ್ದಾಗ ಮಾತ್ರ ಗ್ರಹಣವೆನ್ನುತ್ತೇವೆ. ಕಂಕಣ ಸೂರ್ಯ ಗ್ರಹಣದಲ್ಲಿ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಈ ರೀತಿಯ ಸೂರ್ಯಗ್ರಹಣದ ವೇಳೆ ಚಂದ್ರ ಬಿಂಬವು ಸೂರ್ಯನ ಅಂಚನ್ನು ಮಾತ್ರ ತೆರವು ಬಿಟ್ಟು ಉಳಿದ ಭಾಗವನ್ನು ಮರೆಮಾಚುತ್ತದೆ. ಈ ಕಾರಣಕ್ಕಾಗಿಯೇ ಸೂರ್ಯನು ಹೊಳೆಯುವ ಬಳೆಯಂತೆ ಗೋಚರಿಸುತ್ತಾನೆ. ಸೂರ್ಯಬಿಂಬದ ಹೊಳೆವ ಭಾಗ ಕಡಗ/ಬಳೆಯಂತೆ ಕಾಣುವುದರಿಂದ ಇದನ್ನು ಕಂಕಣ ಸೂರ್ಯಗ್ರಹಣ ಎನ್ನಲಾಗುತ್ತದೆ. ಸೂರ್ಯನ ಅಂಚು ಅತ್ಯಂತ ಪ್ರಕಾಶಮಾನವಾಗಿ ಬೆಂಕಿ ಉರಿಯುತ್ತಿರುವ ಹಾಗೆ ಭಾಸವಾಗುವುದರಿಂದ, ಇದನ್ನು ಆಂಗ್ಲಭಾಷೆಯಲ್ಲಿ Rಜಿnಜ ಟf ಊಜಿrಛಿ (ಬೆಂಕಿ ಉಂಗುರ) ಎಂದು ಕರೆಯಲಾಗುತ್ತದೆ.
ಕಾಸರಗೋಡಿನ ಚೆರುವತ್ತೂರಿನತ್ತ ಚಿತ್ತ
ಕಾಸರಗೋಡು ಜಿಲ್ಲೆಯ ಚೆರುವತ್ತೂರಿನಲ್ಲಿ ಕಂಕಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸುವುದರಿಂದ, ಖಗೋಳಾಸಕ್ತರ ಬೃಹತ್ ಅಲೆಯೇ ಈ ಪುಟ್ಟ ಪಟ್ಟಣಕ್ಕೆ ಹರಿದುಬರುವ ನಿರೀಕ್ಷೆ ಇದೆ. ಸೂರ್ಯಗ್ರಹಣ ವೀಕ್ಷಣೆಗೆ ಅನುಕೂಲಕರವಾದ ಜಗತ್ತಿನ ಕೆಲವು ಪ್ರಮುಖ ಸ್ಥಳಗಳಲ್ಲಿ ಚೆರುವತ್ತೂರು ಕೂಡ ಒಂದು ಒಂದು.
ಗ್ರಹಣ ವೀಕ್ಷಣೆಗೆ ಸಾಧನಗಳು
1)ಗ್ರಹಣ ವೀಕ್ಷಕ ಸೌರ ಕನ್ನಡಕ
2) ಟೆಲಿಸ್ಕೋಪ್ ಮೂಲಕ ಸೂರ್ಯನ ಪ್ರತಿಬಿಂಬ ಹಾಳೆಯ ಮೇಲೆ ಬೀಳುವಂತೆ ಮಾಡಿ ನೋಡಬಹುದು
3) ಪಿನ್ ಹೋಲ್ ಕೆಮೆರಾ
ಮುನ್ನೆಚ್ಚರಿಕೆ ಅಗತ್ಯ
ಬರಿಗಣ್ಣಲ್ಲಿ ನೋಡಬೇಡಿ. ವೈಜ್ಞಾನಿಕವಾಗಿ ತಯಾರಿಸಲಾದ ಸೋಲಾರ್ ಗ್ಲಾಸ್‌ಗಳನ್ನು ಬಳಸಿ
ಸಾಮಾನ್ಯ ಕೂಲಿಂಗ್ ಗ್ಲಾಸ್‌ಗಳು(ಯುವಿ ಪ್ರೊಟೆಕ್ಷನ್ ಇದ್ದರೂ ಸಹ) ಕೂಡ ನಿಮ್ಮ ಕಣ್ಣುಗಳನ್ನು ರಕ್ಷಿಸುವುದಿಲ್ಲ.
ಕೆಮೆರಾಗಳಿಗಾಗಿ ವಿಶೇಷ ಸೋಲಾರ್ ಫಿಲ್ಟರ್ ಬಳಸಿ
ಕೆಲವು ಸೆಕಂಡ್ ಮಾತ್ರ ವೀಕ್ಷಿಸಿ, ಪದೇ ಪದೇ ವೀಕ್ಷಿಸಬೇಡಿ
ಕಣ್ಣಿನ ಸಮಸ್ಯೆ ಇರುವವರು ಸೂರ್ಯನನ್ನು ವೀಕ್ಷಿಸಬೇಡಿ
ಸೋಲಾರ್ ಫಿಲ್ಟರ್‌ಗಳ ಫಿಲ್ಮ್ ಭಾಗವನ್ನು ಮುಟ್ಟುವುದು,
ಮಡಚುವುದು ಮಾಡದಿರಿ
ಸೋಲಾರ್ ಫಿಲ್ಟರ್‌ಗಳು ಹರಿದಿದ್ದರೆ ಅಥವಾ ಅವುಗಳಲ್ಲಿ ರಂಧ್ರವಿದ್ದರೆ ಬಳಸಬೇಡಿ
ಡಿ.26ಗುರುವಾರ
ಗ್ರಹಣ ಸ್ಪರ್ಶ ಕಾಲ: ಬೆಳಗ್ಗೆ 8.04 ನಿಮಿಷ
ಮಧ್ಯಕಾಲ: ಬೆಳಗ್ಗೆ 9.25 ನಿಮಿಷ
ಉಂಗುರಾಕಾರ ಅವಧಿ: ಸುಮಾರು 3 ನಿಮಿಷ
ಮೋಕ್ಷ ಕಾಲ: ಬೆಳಗ್ಗೆ 11.04
ಕರ್ನಾಟಕದಲ್ಲಿ ಮುಂದಿನ ಕಂಕಣ ಸೂರ್ಯಗ್ರಹಣ:
2064ರ ಫೆ.17ಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.