ಕ್ರಿಸ್ಮಸ್‌ ಆಚರಣೆ ಶಾಂತಿಯ ಸಂಕೇತ

ಕ್ರಿಸ್ಮಸ್‌: ಬಿಷಪ್‌ ಸಂದೇಶ

Team Udayavani, Dec 23, 2019, 3:36 AM IST

wd-41

ಉಡುಪಿ: ಮನುಷ್ಯನ ಮೇಲಿನ ಪ್ರೀತಿಯಿಂದ ಸರ್ವಶಕ್ತ ದೇವರು ಒಂದು ಪುಟ್ಟ ಶಿಶುವಾಗಿ, ದನದ ಕೊಟ್ಟಿಗೆಯಲ್ಲಿ ಜನ್ಮತಳೆದ ಮಹಾ ರಹಸ್ಯದ ಆಚರಣೆಯೇ ಕ್ರಿಸ್ಮಸ್‌. ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕಮಾತ್ರ ಪುತ್ರರನ್ನೇ ಈ ಲೋಕಕ್ಕೆ ಕೊಟ್ಟರು ಎನ್ನುವುದನ್ನು ಪವಿತ್ರ ಬೈಬಲ್‌ ಗ್ರಂಥ ಹೇಳುತ್ತದೆ.

ಮನುಷ್ಯತ್ವವನ್ನು ಮರೆತು ದಾನವ ರಾಗಲು ಹೊರಟವರಿಗೆ ಮಾನವರಾಗಿ ಜೀವಿಸಲು ಕಲಿಸಲು ದೇವರು ಭೂಮಿ ಯಲ್ಲಿ ಜನ್ಮ ತಾಳಿದರು. ಅವರು ಜಗತ್ತಿಗೆ ಶಾಂತಿ-ಸಮಾಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ, ಶೋಷಣೆ, ರೋಗರುಜಿನ, ದ್ವೇಷ, ಯುದ್ಧ, ಅತ್ಯಾಚಾರ, ಮತಾಂಧತೆ, ಪರಮತ ಅಸಹಿಷ್ಣುತೆಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಉತ್ತರ ಪ್ರತೀಕಾರ ಖಂಡಿತ ಅಲ್ಲ. ಬದಲಾಗಿ ಪ್ರೀತಿ ಮಾತ್ರ. ಇದನ್ನು ಜನರಿಗೆ ಅರ್ಥ ಮಾಡಿಸಲು ಯೇಸು ಕ್ರಿಸ್ತರು ಈ ಧರೆಯಲ್ಲಿ ಜನ್ಮ ತಾಳಿದ್ದು.

ಯೇಸು ಜನಿಸಿದ ದಿವಸ ದೇವರ ಶಾಂತಿ ಈ ಲೋಕದಲ್ಲಿ ಜನ್ಮತಾಳಿತು. ನಾನು ಶಾಂತಿ ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ, ನನ್ನ ಶಾಂತಿ ಸಮಾಧಾನವನ್ನು ನಿಮಗೆ ಕೊಡುತ್ತೇನೆ ಎಂದು ಯೇಸು ಶಾಂತಿಯ ವಾಗ್ಧಾನ ಮಾಡಿ ದರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರೇ ನಿಜವಾದ ದೇವರ ಮಕ್ಕಳು. ಹಾಗಾದರೆ ನಾವೂ ನೀವೂ ಶಾಂತಿಯ ಸಾಧನ,

ಶಾಂತಿಯ ದೂತರಾಗೋಣವೇ? ಶಾಂತಿ, ಪ್ರೀತಿಯ ಭಾರತವನ್ನು ಕಟ್ಟೋಣವೇ?
ಸರ್ವೇಜನಾಃ ಸುಖೀನೋಭವಂತು! ವಾಲೈಕುಮ್‌ಸಲಾಮ್‌! ಒಬ್ಬರ ನ್ನೊಬ್ಬರು ಪ್ರೀತಿಸಿರಿ – ಇವೆಲ್ಲದರ ತಾತ್ಪರ್ಯ ಒಂದೇ – ಎಲ್ಲರೂ ಸುಖ, ಶಾಂತಿ, ಪ್ರೀತಿಯಿಂದ ಬಾಳಲಿ ಎಂಬುದು. ಇದೇ ಕ್ರಿಸ್ತ ಜಯಂತಿಯ ಸಂದೇಶ. ತಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳು.
ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ, ಬಿಷಪ್‌, ಉಡುಪಿ

ಧರ್ಮಪ್ರಾಂತ ದ್ವೇಶ ಕಲಹ ತ್ಯಜಿಸಿ; ಶಾಂತಿ ಬದುಕು ರೂಪಿಸಿ
ಬೆಳ್ತಂಗಡಿ: ಪಾಪಾಂಧಕಾರದಲ್ಲಿ ಮುಳುಗಿದ್ದ ಮಾನವ ಕುಲಕ್ಕೆ ರಕ್ಷಣೆಯ ನ್ನೀಯಲು ದೇವ ಪುತ್ರ ಶ್ರೀ ಯೇಸು ಸ್ವಾಮಿ ಕ್ರಿಸ್ತರು ಜನಿಸಿದರು ಇದು ಸರ್ವ ಮನುಷ್ಯರಿಗೂ ಸಂತೋಷವನ್ನು ಕೊಡುವ ಸುದ್ದಿಯಾಗಿದೆ. ಈ ಸುದ್ದಿಯು ನಮಗೆ ಸಿಹಿಯಾಗಬೇಕಿದ್ದರೆ ಯೇಸುಕ್ರಿಸ್ತರನ್ನು ಸ್ವೀಕರಿಸಿ ಅವರು ತೋರಿಸಿಕೊಟ್ಟ ಪರಿಶುದ್ಧತೆಯ ಮತ್ತು ಪರಪ್ರೀತಿಯ ಮಾರ್ಗದಲ್ಲಿ ಸಂಚರಿಸಬೇಕು.

ನಾವೆಲ್ಲ ದ್ವೇಷವನ್ನೂ ಕಲಹವನ್ನೂ ತ್ಯಜಿಸಿ ಪ್ರೀತಿಯ ಮತ್ತು ಶಾಂತಿಯ ದಾರಿಯಲ್ಲಿ ಸಾಗಬೇಕು. ಕ್ರಿಸ್ಮಸ್‌ ಆಚರಣೆಯ ಸಂದರ್ಭ ನಾಡಿನ ಸಮಸ್ತರಿಗೂ ಪ್ರಭು ಕ್ರಿಸ್ತರ ಆರ್ಶೀವಾದ ವನ್ನೂ ಪ್ರಾರ್ಥಿಸುತ್ತೇನೆ. ನಮ್ಮ ನಾಡು ಶಾಂತಿಯ ಮತ್ತು ಸಮೃದ್ಧಿಯ ನೆಲೆಬೀಡಾಗಲಿ ಎಂದು ಹಾರೈಸುತ್ತೇನೆ. 2020ರ ಹೊಸ ವರ್ಷದ ಶುಭವನ್ನು ಸರ್ವರಿಗೂ ಕೋರುತ್ತೇನೆ.
– ವಂ| ಲಾರೆನ್ಸ್‌ ಮುಕ್ಕುಯಿ, ಧರ್ಮಾಧ್ಯಕ್ಷರು, ಬೆಳ್ತಂಗಡಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.