ಗುಂಡೂರು ಗ್ರಾಮಸ್ಥರ ಪ್ರತಿಭಟನೆ
Team Udayavani, Dec 23, 2019, 1:18 PM IST
ಸಿದ್ದಾಪುರ: ಸಮೀಪದ ಗುಂಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಮತದಾರರಾಗಿದ್ದ ನೂರಕ್ಕೆ ತೊಂಬತ್ತರಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ ಮಾಡಿ ಕೇವಲ ಶೇ. 10 ರಷ್ಟು ಮತದಾರರನ್ನು ಉಳಿಸಿಕೊಂಡು ಚುನಾವಣೆಗೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗುಂಡೂರು ಗ್ರಾಮಸ್ಥರು ಸೊಸೈಟಿ ಆವರಣದ ಎದುರು ರವಿವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರು, ಸೊಸೈಟಿ ಆಡಳಿತ ಮಂಡಳಿ ತಮಗೆ ಬೇಕಾದವರಿಗೆ ಮಾತ್ರ ಅರ್ಹತೆ ನೀಡಿ ಸರ್ಕಾರದ ನೀತಿ ನಿಯಮಾವಳಿಗಳನ್ನು ದುರಪಯೋಗ ಪಡೆಸಿಕೊಳ್ಳುತ್ತಿದೆ. ಐದು ವರ್ಷದಲ್ಲಿ ನಮಗೆ ಸಭೆ ಕುರಿತಾಗಿ ಒಂದು ದಿನವೂ ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸಲಾಗಿದೆ. ಗ್ರಾಮದಲ್ಲಿ ಸಣ್ಣ ವಿಷಯ ಇದ್ದರೂ ಡಂಗುರು ಹಾಕಿಸುವ ಮೂಲಕ ಮಾಹಿತಿ ನೀಡಲಾಗುತ್ತೆ. ಆದರೆ ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ನೀಡದೆ ಚುನಾವಣೆ ಬಂದ ನಂತರ ನೋಟಿಸ್ ನೀಡುತ್ತಿದ್ದಾರೆ. ನೂರಕ್ಕೆ ತೊಂಬತ್ತರಷ್ಟು ಗ್ರಾಮಸ್ಥರನ್ನು ಅನರ್ಹಗೊಳಿಸಿ ಚುನಾವಣೆ ನಡೆಸುವುದು ನಮಗೆ ಅವಶ್ಯವಿಲ್ಲ. ಅವೈಜ್ಞಾನಿಕವಾಗಿ ಸಿದ್ಧಪಡಿಸಿರುವ ಮತದಾರರ ಪಟ್ಟಿ ಮರುಪರಿಶೀಲನೆ ಆಗಬೇಕು. ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಚುನಾವಣೆಗೂ ಮುನ್ನ ಸಾಲಗಾರರು ಮತ್ತು ಸಾಲಗಾರರಲ್ಲದವರ ಪಟ್ಟಿ ಮಾಡಲಾಗುತ್ತದೆ. ಹೀಗೆ ಪಟ್ಟಿ ಮಾಡುವಾಗ ಒಟ್ಟು ಮತದಾರರ ಸಂಖ್ಯೆ 1289 ಇತ್ತು. ಅದರಲ್ಲಿ 864 ಜನ ಸಾಲಗಾರರಲ್ಲದ ಕ್ಷೇತ್ರದ ಮತದಾರರು, 485 ಜನರು ಸಾಲಗಾರರ ಕ್ಷೇತ್ರದ ಮತದಾರರನ್ನು ಹೊಂದಿದೆ.
ಒಟ್ಟಾರೆ 1289 ಮತದಾರರು ಈ ಸೊಸೈಟಿಯ ವ್ಯವಾಹರಕ್ಕೆ ಒಳಪಟ್ಟಿದ್ದಾರೆ. ಆದರೆ ಸೊಸೈಟಿ ಆಡಳಿತ ಮಂಡಳಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕೇವಲ 111 ಜನರನ್ನು ಮಾತ್ರ ಮತದಾನಕ್ಕೆ ಅರ್ಹರು ಎಂದು ಅಂತಿಮ ಪಟ್ಟಿ ಸಿದ್ಧ ಮಾಡಲಾಗಿದೆ. ಈ ಬಗ್ಗೆ ಸೊಸೈಟಿ ಕಾರ್ಯದರ್ಶಿಯನ್ನು ಕೇಳಿದರೆ ಎಲ್ಲ ಸರಿಯಾಗಿದೆ. ಗ್ರಾಮಸ್ಥರೆ ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಸೊಸೈಟಿಯ ಈ ನಡೆಯನ್ನು ಖಂಡಿಸಿ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕರಿಸಲು ಸಿದ್ಧರಾಗಿದ್ದೇವೆ. ಈ ಕುರಿತು ಚುನಾವಣೆ ನಡೆಯದಂತೆ ತಡೆಯಲು ಸೊಮವಾರ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ಬಸವರಾಜ ಹುಲಿಯಾಪುರ, ಮಲ್ಲನಗೌಡ, ಯಮನಪ್ಪ, ವೈ. ಮುರಳಿಕೃಷ್ಣ, ಶರಣೆಗೌಡ, ಬಸವರಾಜ ಹೊಟೇಲ್, ನಾಗರಾಜ ಕಲ್ಮಂಗಿ, ಕನಕಪ್ಪ, ಚಂದ್ರಪ್ಪ ದೇಸಾಯಿ, ನಾಗಪ್ಪ ಮುಸಾಲಿ, ನಿಂಗಪ್ಪ ಇಟಗಿ, ಹನುಮಂತಪ್ಪ ಸಾಲಿ, ರಾಜಪ್ಪ ಉಪ್ಪಾರ, ವೀರೇಶ ಈಳಿಗೇರ ಸೇರಿದಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.