ವಿಕ್ರಮಾದಿತ್ಯ ವೀಕ್ಷಣೆಗೆ ಜನಸಾಗರ


Team Udayavani, Dec 23, 2019, 1:52 PM IST

uk-tdy-1

ಕಾರವಾರ :  ಐಎನ್‌ಎಸ್‌ ಕದಂಬ ಸೀಬರ್ಡ್‌ ನೌಕಾನೆಲೆಯಲ್ಲಿ ಯುದ್ಧ ನೌಕೆ ವೀಕ್ಷಣೆಗೆ ರವಿವಾರ ಜನಜಾತ್ರೆ ಕಂಡುಬಂತು. ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ಸೀಬರ್ಡ್‌ ನೌಕಾನೆಲೆಯಲ್ಲಿ ನೇವಿ ಸಪ್ತಾಹದ ಅಂಗವಾಗಿ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ನೌಕೆ ವೀಕ್ಷಣೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು. ಬೆಳಗಿನಿಂದಲೇ ನೇವಿಯ ಅರಗಾ ಮುಖ್ಯದ್ವಾರದ ಬಳಿ ಜನ ಜಮಾಯಿಸಿದ್ದರು. ರಾಷ್ಟ್ರೀಯ ಹೆದ್ದಾರಿ -66ರಲ್ಲಿ 3 ಕಿ.ಮೀ. ಉದ್ದಕ್ಕೆ ಜನರು ಬೆಳಗಿನ 9 ಗಂಟೆಯಿಂದಲೇ ಯುದ್ಧನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಕಾದಿದ್ದರು. ನೌಕೆ

ನೋಡಲು ಕಾದಿದ್ದ ಜನರ ನಿಭಾಯಿಸುವುದೇ ನೇವಿ ಸಿಬ್ಬಂದಿಗೆ ದೊಡ್ಡ ಸವಾಲಾಯಿತು. ವಿಪರೀತ ವಾಹನ ದಟ್ಟಣೆಯಿಂದ ರಾಷ್ಟ್ರೀಯ ಹೆದ್ದಾರಿ ಹಲವು ಭಾರಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಜನರು ನೌಕೆಯೆ ಮೇಲೆ ಸಂಭ್ರಮಿಸಿದರು: ಕಾರವಾರ, ಶಿರಸಿ, ಕುಮಟಾ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ ಜನರು, ಯುವಕರು, ಯುವತಿಯರು, ವೃದ್ಧರು, ಶಾಲಾ ಕಾಲೇಜು ಮಕ್ಕಳು ನೌಕೆಯನ್ನು ವೀಕ್ಷಿಸಿ ಸಂಭ್ರಮಿಸಿದರು, ಸಂತಸಪಟ್ಟರು. ಹೆಮ್ಮೆ ಪಟ್ಟರು. ರನ್‌ವೇ ತುದಿಗೆ ಇದ್ದ ಭಾರತ ಧ್ವಜದ ಬಳಿ ನಿಂತು ಸೆಲ್ಫಿ  ಕ್ಲಿಕ್ಕಿಸಿಕೊಂಡರು. ಅಲ್ಲದೇ ತಮ್ಮ ಬಂಧುಗಳು, ಗೆಳೆಯರಿಂದ ಭಾವಚಿತ್ರಗಳನ್ನು ಸೆರೆ ಹಿಡಿದುಕೊಂಡರು. ಸೀಬರ್ಡ್‌ ನೌಕಾನೆಲೆ ವ್ಯಾಪ್ತಿಯ ಸಮುದ್ರ, ಶಿಫ್‌ ಲಿಫ್ಟ್‌ ವ್ಯವಸ್ಥೆ, ಯುದ್ಧ

ನೌಕೆಗಳು ಧಕ್ಕೆಗೆ ಬರುವ ಒಳ ಮಾರ್ಗ ಹಾಗೂ ಅಲೆ ತಡೆಗೋಡೆಗಳನ್ನು ಯುದ್ಧ ನೌಕೆಗಳ ತಾಣವಾಗಿ ರೂಪಿಸಲು ಮಾಡಿದ ತಂತ್ರಜ್ಞಾನವನ್ನು ಕಂಡರು. ಭಾರತೀಯ ನೌಕಾಪಡೆಯ ಶಕ್ತಿ ಸಾಮರ್ಥ್ಯಗಳನ್ನು ನೇವಿ ಸೇಲರ್ಗಳಿಂದ ಕೇಳಿ ತಿಳಿದುಕೊಂಡರು.

ಲಘು ರಿಫ್ರೆಶ್ಮೆಂಟ್‌: ಉರಿ ಬಿಸಿಲಲ್ಲಿ ತಾಸುಗಟ್ಟಲೆ ಕ್ಯೂ (ಸರದಿ ಸಾಲಿನಲ್ಲಿ) ನಿಂತು ಬಸವಳಿದು ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ಭೇಟಿಗೆ ಬಂದ ಜನರಿಗೆ ಕದಂಬ ನೌಕಾನೆಲೆ ಆಡಳಿತ ವರ್ಗ ಲಘು ಉಪಾಹಾರದ ವ್ಯವಸ್ಥೆ ಮಾಡಿತ್ತು. ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿತ್ತು.

ಏನಿದೆ ಐಎನ್‌ಎಸ್‌ : ವಿಕ್ರಮಾದಿತ್ಯದಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯ ಅತೀ ಉದ್ದನೆಯ ಮತ್ತು ಅತೀ ಎತ್ತರದ ಭಾರತದ ಯುದ್ಧ ನೌಕೆ. 63 ಸಾವಿರ ಕೋಟಿ ರೂ. ಮೌಲ್ಯದ ಈ ಯುದ್ಧ ನೌಕೆ ಒಮ್ಮಲೇ ಎರಡು ಮೂರು ಲಘು ಯುದ್ಧ ವಿಮಾನಗಳು, ನಾಲ್ಕು ಹೆಲಿಕಾಪ್ಟರ್‌ ಹಾಗೂ ನಾಲ್ಕಾರು ಮಿಗ್‌ಗಳು ಲ್ಯಾಂಡಿಂಗ್‌ ಆಗುವಷ್ಟು ವಿಶಾಲವಾಗಿದೆ. ಯುದ್ಧ ವಿಮಾನಗಳು ಟೇಕ್‌ ಆಫ್‌ ಆಗುವಷ್ಟು ರನ್‌ ವೇ ಹೊಂದಿದೆ. ಅಷ್ಟೊಂದು ಆಧುನಿಕ ಸೌಕರ್ಯಗಳು ಈ ನೌಕೆಯಲ್ಲಿವೆ. ರಷ್ಯಾ ನಿರ್ಮಿತ ಈ ಯುದ್ಧ ನೌಕೆಯನ್ನು ಎನ್‌ ಡಿಎ ಮೊದಲ ಅವಧಿಯಲ್ಲಿ ದೇಶಕ್ಕೆ ಸಮರ್ಪಣೆ ಮಾಡಲಾಗಿತ್ತು. ಐಎನ್‌ ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಗಸ್ತು ತಿರುಗುತ್ತಿರುತ್ತದೆ. ಈ ಬೃಹತ್‌ ನೌಕೆಯ ಸುತ್ತ ಆರು ಲಘು ಯುದ್ಧ ನೌಕೆಗಳು ಗಸ್ತು (ಕಾವಲು) ಇರುತ್ತವೆ. ಈಚೆಗೆ ಫ್ರಾನ್ಸ್‌ ಮತ್ತು ಭಾರತದ ಜಂಟಿ ಸಮರಾಭ್ಯಾಸದ ವೇಳೆ ಐಎನ್‌ಎಸ್‌ ವಿಕ್ರಮಾದಿತ್ಯ ಪ್ರಮುಖ ಪಾತ್ರ ವಹಿಸಿತ್ತು.

ಟಾಪ್ ನ್ಯೂಸ್

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.