ಶುದ್ಧ ನೀರಿನ ಘಟಕಗಳಿಗೆ ಬೇಕಿದೆ ನಿರ್ವಹಣೆ
Team Udayavani, Dec 23, 2019, 3:59 PM IST
ರಾಮನಗರ: ಜಿಲ್ಲೆಯಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ಆದರೂ ಸಂಬಂಧಪಟ್ಟವರು ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗುತ್ತಿಲ್ಲ. ಜಿಲ್ಲೆಯ 536 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 36 ಘಟಕಗಳು ವಿವಿಧ ಕಾರಣಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಲ್ಲಿ ನಿರ್ವಹಣೆ ಕೊರತೆಯಿಂದಾಗಿ 22 ಘಟಕಗಳು ಹಾಗೂ ಏಜೆನ್ಸಿಗಳ ಸಮಸ್ಯೆ ಯಿಂದಾಗಿ 14 ಘಟಕಗಳು ಸ್ಥಗಿತವಾಗಿವೆ.
ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಮೂಲಕ ಮಂಜೂ ರಾದ 161ಘಟಕಗಳ ಪೈಕಿ 154 ನಿರ್ಮಾಣ ವಾಗಿದ್ದು, ಇನ್ನೂ 7 ಘಟಕಗಳು ನಿರ್ಮಾಣ ವಾಗಬೇಕಗಿದೆ. ಕೆ.ಆರ್.ಐ.ಡಿ.ಎಲ್ ಮೂಲಕ ಮಂಜೂರಾದ ಎಲ್ಲಾ 58 ಘಟಕಗಳು ನಿರ್ಮಾಣವಾಗಿದ್ದು, ಸಹಕಾರ ಕ್ಷೇತ್ರದಿಂದ 65 ಘಟಕಗಳ ಸ್ಥಾಪನೆಗೆ ಮಂಜೂ ರಾತಿ ಸಿಕ್ಕಿದೆ. ಕೈಗಾರಿಕಾ ಸಂಸ್ಥೆ, ಟ್ರಸ್ಟ್‌ಗಳು, ಸಂಸದರು, ಶಾಸಕರ ಅನುದಾನದಲ್ಲಿ 259 ಘಟಕಗಳು ಸ್ಥಾಪನೆಯಗಿದ್ದು, 8 ಘಟಕಗಳು ವಿವಿಧ ಕಾರಣಗಳಿಂದ ಸ್ಥಾಪನೆಯಾಗಿಲ್ಲ.
ಒಟ್ಟು 551 ಘಟಕಗಳ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದ್ದರೂ, 536 ಘಟಕಗಳು ಸ್ಥಾಪನೆ ಯಾಗಿವೆ. 15 ಘಟಕಗಳು ಸ್ಥಾಪನೆ ಯಗಬೇಕಾಗಿದೆ. ಆರ್.ಡಿ.ಡಬ್ಲ್ಯೂ.ಎಸ್ ಸ್ಥಾಪಿಸಿರುವ 154 ಘಟಕಗಳ ಪೈಕಿ 147 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 7 ಘಟಕಗಳು ಏಜೆನ್ಸಿ ಸಮಸ್ಯೆಯಿಂದಾಗಿ ಸ್ಥಗಿತವಾಗಿವೆ. ಕೆ.ಆರ್.ಐ.ಡಿ.ಎಲ್ ಸ್ಥಾಪಿಸಿರುವ ಘಟಕಗಳ ಪೈಕಿ 48 ಘಟಕಗಳು ನಾಗರಿಕರಿಗೆ ನೀರು ಒದಗಿಸುತ್ತಿವೆ.
ಕಾರ್ಯನಿರ್ವಹಿಸದ ಎಲ್ಲಾ 10 ಘಟಕಗಳು ನಿರ್ವಹಣೆ ಕೊರತೆ ಮತ್ತು ದುರಸ್ತಿಯಾಗಬೇಕಾಗಿದೆ. ಸಹಕಾರ ಕ್ಷೇತ್ರ ದಿಂದ ಸ್ಥಾಪನೆಯಾಗಿರುವ 65 ಘಟಕಗಳ ಪೈಕಿ 58 ಘಟಕಗಳು ನೀರೊದಗಿಸುತ್ತಿವೆ. 7 ಘಟಕಗಳು ನಿರ್ವಾಹಣಾ ಏಜೆನ್ಸಿಯ ಸಮಸ್ಯೆಯಿಂದಾಗಿ ಸ್ಥಗಿತವಾಗಿವೆ. ಸಂಸದರು, ಕೈಗಾರಿಕೆಗಳು, ಶಾಸಕರು ಮುಂತಾದವರು ಸ್ಥಾಪಿಸಿರುವ 259 ಘಟಕಗಳ ಪೈಕಿ 247 ಘಟಕಗಳು ಉದ್ದೇಶ ಈಡೇರಿಸುತ್ತಿವೆ. 12 ಘಟಕಗಳು ನಿರ್ವಹಣೆ ಕೊರತೆ ಮತ್ತು ದುರಸ್ತಿ ಕಾರಣ ಕಾರ್ಯನಿರ್ವಹಣೆಯಲ್ಲಿಲ್ಲ.
ನೀರಿಗಿಲ್ಲ ತೊಂದರೆ: ಕಳೆದ ಹಾಗೂ ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದ್ದ ಕಾರಣ ಜಿಲ್ಲಾದ್ಯಂತ ಅಂತರ್ಜಲ ಪ್ರಮಾಣ ಸಾಕಷ್ಟಿದೆ. ಹೀಗಾಗಿ ಯಾವ ಘಟಕವೂ ಸ್ಥಗಿತಗೊಂಡಿಲ್ಲ. ಮಂಜೂರಾಗಿರುವ ಘಟಕಗಳ ಸ್ಥಾಪನೆಗೆ ಸ್ಥಳ ಕೊರತೆ ಜಿಲ್ಲೆಯಲ್ಲಿ ವ್ಯಕ್ತವಾಗಿಲ್ಲ. ಕಾರ್ಯ ನಿರ್ವಹಿಸದ 36 ಘಟಕಗಳು ಸಹ ನಿರ್ವಹಣೆ ಕೊರತೆ, ಏಜೆನ್ಸಿ ಸಮಸ್ಯೆ ಮತ್ತು ದುರಸ್ತಿ ಕಾರಣದಿಂದ ಸ್ಥಗಿತ ಗೊಂಡಿವೆ.
ನಾಗರಿಕರ ಆಕ್ರೋಶ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ವ್ಯವಸ್ಥೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಯ್ತಿಗಳು ನಿರ್ವಹಿಸಬೇಕಾಗಿದೆ. ಸಾರ್ವಜನಿಕರ ಹಿತವನ್ನು ಕಾಯಬೇಕಾಗಿದೆ. ಯಾರೆ ಘಟಕ ಸ್ಥಾಪನೆ ಮಾಡಲಿ ಅದರ ನಿರ್ವಹಣೆಯ ಹೊಣೆಯನ್ನು ಈ ಸಂಸ್ಥೆಗಳು ಹೊರಬೇಕು. ಆದರೆ ಈ ಎಲ್ಲಾ ಸಂಸ್ಥೆಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಘಟಕವೊಂದು ಕೆಟ್ಟರೆ ತಿಂಗಳುಗಟ್ಟಲೆ ದುರಸ್ತಿಯಾಗೋಲ್ಲ ಎಂಬ ದೂರುಗಳು ಎಲ್ಲಾ ಗ್ರಾಮಗಳಲ್ಲೂ ವ್ಯಕ್ತವಾಗಿದೆ.
ಯಾರ ಕೈ ಸೇರುತ್ತಿದೆ ಹಣ?: ಬಹುತೇಕ ಗ್ರಾಮಗಳಲ್ಲಿ ತಲಾ 20 ಲೀಟರ್ ನೀರಿಗೆ 2 ರೂ. ಪಡೆಯಲಾಗುತ್ತಿದೆ. ಏಜೆನ್ಸಿಗಳು ನಿರ್ವ ಹಣೆಯಲ್ಲಿರುವ ಘಟಕಗಳನ್ನು ಹೊರತು ಪಡೆಸಿ ಟ್ರಸ್ಟ್‌ಗಳು, ಕೈಗಾರಿಕೆಗಳು, ಸಂಘ-ಸಂಸ್ಥೆಗಳು ಸ್ಥಾಪಿಸಿರುವ ಘಟಕಗಳಲ್ಲಿ ಸಂಗ್ರಹಣೆಯಾಗುವ ಗ್ರಾಹಕರ ಹಣ ಉಸ್ತುವಾರಿ ಇರುವ ವ್ಯಕ್ತಿಗಳ ಮೂಲಕ ಪಡೆಯಲಾಗುತ್ತಿದೆ.
ನಾಗರಿಕರಿಗಿಲ್ಲ ಸಮಾಧಾನ!: ಅನೇಕ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳು ಆಗಾಗ್ಗೆ ಕೈಕೊಡುತ್ತಿವೆ ಎಂದು ನಾಗರಿಕರು ಆರೋಪಿಸಿದ್ದಾರೆ. ಕೆಲವು ಘಟಕಗಳಲ್ಲಿ ಬೇಕಾದಷ್ಟು ನೀರು ಬರುವುದೇ ಇಲ್ಲ. 20 ಲೀಟರ್ ಬದಲಿಗೆ 10-15 ಲೀಟರ್ ಮಾತ್ರ ಬರುತ್ತಿದೆ. ಈ ದೂರಿಗಳಿಗೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಬಳಿ ಉತ್ತರ ಇಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.
-ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.