ನೀನಿದ್ದ ಆ ದಿನಗಳು ಕಲರ್‌ ಫ‌ುಲ್‌


Team Udayavani, Dec 24, 2019, 4:09 AM IST

sd-10

ದಿನ ಬೆಳಗಾದರೆ ಸಾಕು, ಕೋತಿ ಗುಡ್‌ ಮಾರ್ನಿಂಗ್‌. ಬೆಳಗಾಯ್ತು ಎದ್ದೆಳ್ಳೋ ಸೋಮಾರಿ ಸಿದ್ಧ, ತಿಂದು ಬೇಗ ಆಫೀಸ್‌ ಗೆ ಹೋಗು, ಆರೋಗ್ಯ ಚೆನ್ನಾಗಿ ಕಾಪಾಡಿಕೋ, ಮಳೇಲಿ ನೆನೆಯಬೇಡ. ಬಿಸಿಲಲ್ಲಿ ತಿರುಗಬೇಡ ಕಮಂಗಿ. ನಿಧಾನವಾಗಿ ಡ್ರೆçವ್‌ ಮಾಡು. ಯಾರ ತಂಟೆಗೂ ಹೋಗಬೇಡ. ನೀನಾಯ್ತು, ನಿನ್ನ ಕೆಲಸವಾಯ್ತು… ಗಡ್ಡ ನೀಟ್‌ ಆಗಿ ಸೆಟ್ಟಿಂಗ್‌ ಮಾಡೊÕà ಚಂದ ಕಾಣಿ¤àಯಾ. ಹುಡುಗಿಯರನ್ನು ಕಣ್ಣೆತ್ತಿ ನೋಡಿದ್ರೆ ಕಣ್‌¡ ಕಿತ್ತ್ ಬಿಡ್ತಿನಿ, ಇವತ್ತು ಇದೆ ಡ್ರೆಸ್‌ ಹಾಕೊಂಡು ಹೋಗು. ಸ್ವಲ್ಪ ಆದ್ರೂ ಮನಿ ಸೇವ್‌ ಮಾಡೋ, ಏ ಪೆದ್ದು, ಪ್ರತಿ ವಿಷಯಕ್ಕೂ ಬೇಜಾರ್‌ ಮಾಡ್ಕೊàಬೇಡ,

ಕೋಪ ಮಾಡಿಕೊಂಡ್ರೆ ನಾನು ಮಾತಾಡಲ್ಲ ನೋಡು….
ಹೀಗೆ ಪ್ರೀತಿ, ಕಾಳಜಿ ತುಂಬಿದ ಸಾವಿರಾರು ಮೇಸೇಜ್‌ಗಳು, ಗಂಟೆಗಟ್ಟಲೇ ಕಾಲ್‌ ಮಾಡಿ ನಿನ್ನ
ಬೋಧನೆ ಕೇಳುವಾಗ ಮೊಬೈಲ್‌ ಸ್ವಿಚ್‌ ಆಫ್ ಆಗಬಾರದೇ ಅಂದುಕೊಳ್ಳುತ್ತಿದ್ದೆ. ನಿನ್ನ ಚಟಪಟ ಮಾತಿಗೆ ಯಾವಾಗ ಬ್ರೇಕ್‌ ಬೀಳುತ್ತೆ ಎಂದು ಕಾದದ್ದೇ ಹೆಚ್ಚು. ಬಿಲ್‌ ಕುಲ್‌ ನೀನು ಮಾತು ನಿಲ್ಲಿಸುತ್ತಾ ಇರಲೇ ಇಲ್ಲ. ಇನ್ನು ಪ್ರತಿ ಶನಿವಾರ ದೇವಾಲಯದಲ್ಲಿ ದೇವರಜೊತೆ ನಿನ್ನ ದರ್ಶನ,ಅದಾದಮೇಲೆ ಕೇಳಬೇಕೆ? ನಾ ಮಾಡುವ ಕೆಲವು ಎಡವಟ್ಟುಗಳಿಗೆ ದೇವರೆದುರಲ್ಲೇ ಮಂಗಳಾರತಿ ಮಾಡುತ್ತಿದ್ದ ಆ ದಿನಗಳ ಮರೆಯಲು ಸಾಧ್ಯವೇ ಹೇಳು ಗೆಳತಿ?

ಇದೆಲ್ಲವೂ ಹಳೆಯ ಮಾತು. ಆದರೂ, ಇವತ್ತಿಗೆ ನಿನ್ನ ಪ್ರಪಂಚದಲ್ಲಿ ನನ್ನ ನೆನಪಿನ ಅಕ್ಷರವನ್ನು ಸಂಪೂರ್ಣವಾಗಿ ಅಳಿಸಿದ್ದೀಯಾ.

ಮುಸ್ಸಂಜೇಲಿ, ಆ ಕೆರೆಯದಡದಲ್ಲಿ ನನ್ನ ಹೆಗಲ ಮೇಲೆ ಒರಗಿ, ಬಾನೆತ್ತರಕ್ಕೆ ಹಾರಿ ಹೋಗುವ ಪಕ್ಷಿಸಂಕುಲಗಳ ನೋಡುತ್ತ ನಿನ್ನ ಬದುಕಿನ ಕನಸುಗಳನ್ನು ಹಂಚಿಕೊಳ್ಳುವಾಗ ಅದೇನೋ ಆನಂದ ಆಗ್ತಾ ಇತ್ತು. ಕಹಿ ನೆನಪುಗಳ ಮರೆಸಿ, ಸಿಹಿನೆನಪುಗಳನ್ನು ಕೊಟ್ಟು ಇಂದು ನನ್ನಿಂದ ದೂರಾಗಿಹೆಯಲ್ಲ ನೀನು? ನೀ ಇಲ್ಲದ ಆ ದಿನಗಳು ಬದುಕಿಗೆ ಅರ್ಥವನ್ನು ನೀಡಲು ಸಾಧ್ಯವೇ ಹೇಳು? ನಿನ್ನ ಆ
ಪ್ರೀತಿ, ಕಾಳಜಿ, ಇಂದೆಲ್ಲಿಹುದೋ ಯಾರ ಬಳಿಯಲ್ಲಿಹುದೋ ಅಥವಾ ನಿನ್ನಲ್ಲೇ ಅಡಗಿಹುದೋ ನಾನರಿಯೆ. ಆದರೆ, ಈ ಮನ ಮಾತ್ರ ಆ ನೆನಪುಗಳಲ್ಲಿಯೇ ದಿನ ಕಳೆಯುತ್ತದೆ.

ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ಒಂಟಿ ಪಯಣ ನನ್ನದು. ನನಸಾಗದ ಕನಸುಗಳ ಹೊತ್ತು ಬಹುದೂರ ಸಾಗಿ ಬಂದರೂ ನೆಮ್ಮದಿ ಎಂಬುದು ಈ ಜೀವಕೆ ಇಂದಿಗೂ ದೊರೆತಿಲ್ಲ. ಪ್ರೀತಿ, ವಿಶ್ವಾಸ, ಕರುಣೆ, ನಗು, ಸಂತೋಷ, ಮನದ ಭಾವನೆಗಳೆಲ್ಲವೂ ಬದಲಾಗಿ ಕಠೊರತನವು ನನ್ನ ಆವರಿಸಿಬಿಟ್ಟಿದೆ. ಈ ಪರಿಸ್ಥಿತಿಗೆ ನನ್ನ ಮನಃಸ್ಥಿತಿ ಕಾರಣವಿರಬಹುದೇ? ಇಂದಿಗೂ ಕಾರಣ ತಿಳಿದಿಲ್ಲ. ನೀ ಇದ್ದರೂ, ಇಲ್ಲದಿದ್ದರೂ ಜೀವನ ಸಾಗಲೇ ಬೇಕಲ್ಲವೇ? ಆದರೆ, ನಾನಂದುಕೊಂಡಂತೆ ಸಾಗದು. ಏಕೆಂದರೆ, ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ. ಇಂದಿಗೂ ನಿನ್ನೊಡನೆ ಕಳೆದ ಸಿಹಿ ನೆನಪುಗಳ ನೆನದು ಮನದಲ್ಲೇ ಸಂತಸ ಪಡುತಿರುವೆ. ನೀ ಇಲ್ಲದ ಈ ದಿನಗಳ ಹೇಗೆ ಕಳೆಯಲಿ ಹೇಳು.

ನೀ ಇದ್ದ ಆ ದಿನಗಳ ಮರೆಯಲು ಸಾಧ್ಯವೇ ಹೇಳು?

ನಂದನ್‌ ಕುಮಾರ್‌

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.