ಸಂದರ್ಶನಕ್ಕೆ ಹೊರಟವರಿಗೆ 5 ಸಂದೇಶ


Team Udayavani, Dec 24, 2019, 5:28 AM IST

sd-15

ಸಂದರ್ಶನ ಅನ್ನೋದು ಒಂಥರಾ ಗಂಡು, ಹೆಣ್ಣಿನ ಜಾತಕ ಪರೀಕ್ಷಿಸಿದಂತೆಯೇ. ಅಭ್ಯರ್ಥಿಗಳು ನಮ್ಮ ಕಂಪೆನಿಗೆ ಒಗ್ಗುತ್ತಾರೆಯೇ ಅಂತ ನೋಡುತ್ತಾರೆ. ಅವರ ಬೌದ್ಧಿಕ ಕ್ಷಮತೆ, ಮಾನಸಿಕ ಸ್ಥಿತಿ, ತಂಡವನ್ನು ಮುನ್ನಡೆಸುವ ರೀತಿ, ಒತ್ತಡವನ್ನು ನಿಭಾಯಿಸುವ ಪರಿ, ಟಾರ್ಗೆಟ್‌ಗಳನ್ನು ಮುಟ್ಟುವ ವೇಗ ಎಲ್ಲವನ್ನೂ ಲೆಕ್ಕ ಹಾಕುತ್ತಾರೆ. ಸಂದರ್ಶನದ ಪ್ರಶ್ನೆಗಳೆಲ್ಲವೂ ಇಂಥ ನಿಗೂಢ, ನಿರೀಕ್ಷಿತ ಕೆಲಸದ ಮೇಲೆಯೇ ಕೇಂದ್ರಿಕೃತವಾಗಿರುತ್ತದೆ. ಈ ಎಲ್ಲ ಮರ್ಮಗಳನ್ನು ಅರಿತರೆ ಸಂದರ್ಶನ ಅನ್ನೋದು ರಣರಂಗವೂ ಅಲ್ಲ. ಅಲ್ಲಿ ಕೇಳುವ ಪ್ರಶ್ನೆಗಳು ಬಾಣಗಳೂ ಅಲ್ಲ. ಅದು ಯುವ ಜನಾಂಗದ ಬದುಕಿನಲ್ಲೂ ಜೊತೆಯಾಗುವ ವಿಭಿನ್ನ ಅನುಭವ ಎನ್ನುವುದು ಅರಿವಾಗುತ್ತದೆ. ಬನ್ನಿ, ಸಂದರ್ಶನಕ್ಕೆ ಹೇಗೆ ಸಿದ್ಧವಾಗಬೇಕೆಂದು ಅರಿಯೋಣ…

1 ಪೂರ್ವತಯಾರಿ
ಸಂದರ್ಶನದಲ್ಲಿ ಪಾಲ್ಗೊಳ್ಳಲು ಧೈರ್ಯಬರಬೇಕು, ಸಂದರ್ಶಕರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸಬೇಕು ಅಂತಾದರೆ ಅದಕ್ಕೊಂದು ಪೂರ್ವ ತಯಾರಿ ಆಗಿರಬೇಕು. ಕಂಪನಿ, ಕೆಲಸದ ವಿವರಣೆ ಮತ್ತು ಸಾಧ್ಯವಾದರೆ ನೀವು ಭೇಟಿಯಾಗಲಿರುವ ವ್ಯಕ್ತಿಯ ಕುರಿತು ತಿಳಿದುಕೊಳ್ಳಿ.
ಸಂದರ್ಶನಕ್ಕೆ ಹಾಜರಾಗುವ ಮೊದಲು ಉದ್ಯೋಗದಾತರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದರ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿಯಿರಿ. ನಿಮ್ಮ ಅನುಭವವು ಕಂಪನಿಯ ಅಗತ್ಯಗಳನ್ನು ಹೇಗೆ ಪೂರೈಸುತ್ತದೆ ಎಂಬುದನ್ನು ತೋರಿಸಲು ಸಿದ್ಧರಾಗಿರಿ. ಸಂದರ್ಶನದ ಪ್ರಶ್ನೆ ಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಮೊದಲೇ ಅಂದಾಜು ಮಾಡಿಕೊಳ್ಳಿ. ಹು¨ªೆ ಮತ್ತು ಕಂಪನಿಯ ಬಗ್ಗೆ ತಿಳುವಳಿಕೆ ಇರಲಿ. ನೀವು ಕೆಲಸ ಪಡೆದ ನಂತರ ಇದೇ ರೀತಿ ವರ್ತಿಸುತ್ತೀರಿ ಎಂದು ಇದು ಉದ್ಯೋಗದಾತರಿಗೆ ಮನದಟ್ಟು ಮಾಡಿಕೊಡಬೇಕು. ಸಂದರ್ಶನಕ್ಕೆ ಸರಿಯಾದ ಸಮಯಕ್ಕೆ ತಲುಪಬೇಕು. ಇದರಿಂದ ನಿಮ್ಮ ಟೈಮ್‌ ಸೆನ್ಸ್‌ ಏನು ಅನ್ನೋದು ತಿಳಿಯುತ್ತದೆ ಜೊತೆಗೆ ಚಡಪಡಿಕೆ, ಗೊಂದಲ ಇರುವುದಿಲ್ಲ. ಜೊತೆಗೆ, ಭಾವೋದ್ವೇಗದಿಂದಲೂ ಮುಕ್ತರಾಗಬಹುದು.

2 ಉಡುಗೆ-ತೊಡುಗೆ
ಫ‌ಸ್ಟ್‌ ಇಂಪ್ರಷನ್‌ ಈಸ್‌ ಬೆಸ್ಟ್‌ ಅಂತಾರೆ. ಹೀಗಾಗಿ, ಉದ್ಯೋಗದಾತರ ಮೇಲೆ ನೀವು ಕೊಡುವ ಮೊದಲ ಇಂಪ್ರಷನ್‌ ಅತ್ಯಂತ ಮುಖ್ಯ. ಜ್ಞಾನದಷ್ಟೇ, ನೀವು ಧರಿಸುವ ಬಟ್ಟೆ ಕೂಡ ಮುಖ್ಯವಾಗಿರುವುದರಿಂದ, ಟಿಪ್‌ ಟಾಪಾಗಿ ಕಾಣಬೇಕು. ಯಾವ ಕಾರಣಕ್ಕೂ ಕೆದರಿದ ಕೂದಲು, ಟಿಷರ್ಟ್‌ಗಳನ್ನು ಧರಿಸುವುದು ಕ್ಷೇಮವಲ್ಲ. ಆಫೀಸ್‌ ವೇರ್‌ ಅಂತಲೇ ಇರುತ್ತದೆ. ಪುರುಷರಿಗೆ, ಸೂಟ್‌ ಜಾಕೆಟ್‌, ಟೈ ಹೊಂದಿರುವ ಷರ್ಟ್‌ ಅಥವಾ ಬಟನ್‌ ಡೌನ್‌ ಇರುವ ಸ್ವೆಟರ್‌ ಇದ್ದರೆ ಚೆನ್ನ. ಮಹಿಳೆಯರು. ಫಾರ್ಮಲ್‌ ಟಾಪ್‌, ಪ್ಯಾಂಟ್‌ ಹಾಕಿಕೊಂಡಿದ್ದರೆ ಉತ್ತಮ. ನಿಮ್ಮ ಉಡುಪಿನಲ್ಲಿ ಕೆಲವು ಆಧುನಿಕ ಶೈಲಿಯ ,ಟ್ರೆಂಡಿ ಕುರುಹುಗಳನ್ನು ಅಳವಡಿಸಿಕೊಳ್ಳಬಹುದು. ಇನ್ನೊಂದು ಎಚ್ಚರ ಏನೆಂದರೆ, ಸಂದರ್ಶಕರನ್ನು ಬೇರೆಡೆಗೆ ಸೆಳೆಯುವಂಥ ಬಿಳಿ ರೇಶ್ಮೆ ಬಟ್ಟೆಯೋ, ಕೆಂಪು, ಹಳದಿ ಷರರ್ಟ್‌ಗಳನ್ನೋ ಅಥವಾ ಪ್ರಕಾಶಮಾನವಾದ, ಮಿನುಗುವ ಬಟ್ಟೆ ಯನ್ನೋ, ಧರಿಸಬೇಡಿ. ಷರಟಿನ ಅಷ್ಟೂ ಗುಂಡಿಗಳನ್ನು ಹಾಕಿರಿ. ಗುಂಡಿಗಳು ಓಪನ್‌ ಆಗಿದ್ದರೆ ಬೇರೆ ಸಂದೇಶ ನೀಡುತ್ತದೆ. ನಿಮ್ಮ ಜೇಬಲ್ಲಿ ಪೆನ್‌ ಇರಲಿ. ಅದು ಡೀಸೆನ್ಸಿ ತೋರಿಸುತ್ತದೆ. ಪೂರ್ತಿ ತೋಳಿನ ಷರಟಿಗೆ, ಕೈ ಮುಂಭಾಗದ ಮೊದಲ ಗುಂಡಿಯನ್ನು ಹಾಕಿ. ಅದನ್ನು ಮಡಚಿ ಸಂದರ್ಶನಕ್ಕೆ ಹೋಗುವುದು ಸೂಕ್ತವಲ್ಲ. ಹಸನ್ಮುಖವಿರಲಿ, ಮೇಕಪ್‌ ಸಂದರ್ಶಕರನ್ನು ವಿಚಲಿತಗೊಳಿಸಬಾರದು. ಮೂಗಿಗೆ ರಾಚುವವಾಸನೆಯ ಸೆಂಟ್‌ ಬೇಡವೇಬೇಡ.

3 ವರ್ತನೆ
ನಿಮ್ಮ ವರ್ತನೆ ಹೇಗಿರುತ್ತದೆ ಅಂತ ತೋರಿಸಲು ಸಂದರ್ಶನಕ್ಕಿಂತ ಒಳ್ಳೆಯ ಸಂದರ್ಭ ಸಿಗೋಲ್ಲ. ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಪ್ರಶ್ನೆ ಕೇಳಿದೆ ಎತ್ತಲೋ ತಿರುಗಿ ಉತ್ತರ ಕೊಡುವುದು, ಉತ್ತರ ಗೊತ್ತಿಲ್ಲದೆ ಇದ್ದರೆ ವಿಚಲಿತ ಗೊಂಡು ತಲೆ ಕೆರೆದುಕೊಳ್ಳುವುದು, ತಪ್ಪು ಉತ್ತರ ನೀಡಿ ಆತಂಕಕ್ಕೆ ಒಳಗಾಗುವುದು… ಹೀಗೆಲ್ಲ ಮಾಡಲೇಬೇಡಿ. ಸರಿಯನ್ನೂ, ತಪ್ಪನ್ನೂ ಸಹಜವಾಗಿ ಸ್ವೀಕರಿಸಿ, ಅದನ್ನು ಮುಖದ ಭಾವನೆಗಳನ್ನು ಪ್ರಕಟಪಡಿಸಿದರೆ ನೀವು ಸಮಚಿತ್ತರಾಗಿದ್ದೀರಿ ಅನ್ನೋದು ತಿಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಂದರ್ಶನದಲ್ಲಿ ಸೆಲ್‌ಫೋನ್‌ ರಿಂಗಣಿಸಲು ಬಿಡಬೇಡಿ. ಬ್ಲೂಟೂತ್‌ ಧರಿಸಬೇಡಿ. ಫೋನ್‌ನಲ್ಲಿ ಗೇಮ್‌ಗಳನ್ನು ಆಡುವುದು, ನಿರಂತರವಾಗಿ ಸಂದೇಶ ಕಳುಹಿಸುವ ವರ್ತನೆ ಬೇಡ. ನಿಮ್ಮ ಸಮಯವನ್ನು ನೀವು ಹೇಗೆ ಕಳೆಯುತ್ತೀರಿ ಎಂದು ನೋಡಲು ಸಂದರ್ಶನದ ಪೂರ್ವವೂ ನಿಮ್ಮನ್ನು ವೀಕ್ಷಿಸಬಹುದು. ಆರಂಭದಲ್ಲಿ ಹಸ್ತಲಾಘವ ಮಾಡುವಾಗ ಕೈಯನ್ನು ಸಡಿಲ ಮಾಡಬೇಡಿ. ಇದು ಆತ್ಮವಿಶ್ವಾಸದ ಸೂಚಕ. ಗಟ್ಟಿಯಾಗಿ ಕೈಕುಲುಕಿ ಮಾತನಾಡಿ, ಕಿರುನಗೆ ಬೀರಿ, ಸ್ನೇಹಪರರಾಗಿ ಸಂಭಾಷಣೆಯಲ್ಲಿ ಪಾಲ್ಗೊಳ್ಳಿ .

4 ಸಕಾರಾತ್ಮಕ ಮನೋಭಾವ
ಸಂದರ್ಶನಕ್ಕೆ ಸಕಾರಾತ್ಮಕ ಮನೋಧರ್ಮದಲ್ಲೇ ಹೋಗಬೇಕು. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಇಂಗ್ಲೀಷ್‌ಮೇಲಿನ ಹಿಡಿತ ಕಡ್ಡಾಯ. ಗೊತ್ತಿಲ್ಲದ ಭಾಷೆಯನ್ನು ಅದೂ ನನಗೆ ತಿಳಿದಿದೆ ಅಂತ ಪ್ರದರ್ಶಿಸಬೇಡಿ. ಮಧ್ಯೆ ಆಕಳಿಸುವುದು, ಕಾಲು ಚಾಚಿ ಕೂರುವಂಥ ವರ್ತನೆ ಬೇಡವೇ ಬೇಡ. ಪ್ರಶ್ನೆಗೆ ಸಂದರ್ಶಕರ ಮುಖವನ್ನು ನೋಡಿಕೊಂಡು ಉತ್ತರಿಸುವುದು ಜಾಣತನ. ನೀವು ಏಕೆ ಕೆಲಸ ಬಿಡುತ್ತಿದ್ದೀರಿ ಅಂದಾಗ- ಹಿಂದಿನ ಉದ್ಯೋಗದಾತರನ್ನು, ಮೇಲಿನ ಅಧಿಕಾರಿಗಳನ್ನು ತೆಗಳಬೇಡಿ. ಕೆಲಸದ ಬಗ್ಗೆ ಪ್ರಶ್ನೆಗಳನ್ನು ಕೇಳಿ ತಮಗೆ ಆಸಕ್ತಿ ಇದೆ ಎಂದು ತೋರಿಸಿ. ನಿಮ್ಮ ಟೆಂಪರ್‌ವೆುಂಟ್‌ ಪರೀಕ್ಷಿಸಲೆಂದೇ ಕೆಲವು ಪ್ರಶ್ನೆಗಳನ್ನು ಕೇಳಬಹುದು. ಆಗ, ಯಾವುದೇ ಕಾರಣಕ್ಕೂ ನೀವು ತಾಳ್ಮೆ ಕಳೆದುಕೊಳ್ಳುವುದು ಸೂಕ್ತವಲ್ಲ. ರಕ್ಷಣಾತ್ಮಕವಾಗಿ ಉತ್ತರ ಕೊಟ್ಟರೆ, ಗೆಲುವು ನಿಮ್ಮದೇ. ನಿಮಗೆ ತಿಳಿಯದ ವಿಚಾರ ಹೇಳಿದರೆ, ಕುತೂಹಲವನ್ನು ಪ್ರಕಟಮಾಡಿ, ನಿರಾಸೆ ಪ್ರದರ್ಶಿಸಬೇಡಿ.

5 ಇಲ್ಲಿ ಸ್ವಲ್ಪ ಬದಲಿರಲಿ
ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ವ್ಯಾಕರಣ ಮತ್ತು ಶಿಷ್ಟಾಚಾರಗಳು ತಿಳಿದಿರುತ್ತವೆ. ಆದರೆ, ಮೂಲ ವಿಷಯಗಳನ್ನು ಮರೆತುಬಿಡುತ್ತಾರೆ. ಸಂದರ್ಶಕರು, ಮೂಲಭೂತ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದಾಗ ನೀವು ತಡವರಿಸಿದರೆ, ನಿಮ್ಮ ಅಡಿಪಾಯ ಸಾಕಷ್ಟು ಪ್ರಬಲವಾಗಿಲ್ಲ ಎಂದು ಅವರು ಭಾವಿಸುವ ಸಾಧ್ಯತೆ ಉಂಟು. ಐಟಿ ಕ್ಷೇತ್ರದಲ್ಲಿ ಡೆವಲಪರ್‌, ಟೆಸ್ಟಿಂಗ್‌ ,ಬ್ಯುಸಿನೆಸ್‌ ಅನಾಲಿಸ್ಟ್‌, ಪೊ›ಡಕ್ಷನ್‌ ಸಪೋರ್ಟ್‌ ಮುಂತಾದ ಹುದ್ದೆಗಳಿಗೆ ಮೂರು ಹಂತದ ಸಂದರ್ಶನ ಇರುತ್ತದೆ-ಪ್ರಾಥಮಿಕ ಹಂತ/ಟೆಕ್ನಿಕಲ್‌ ಹಂತ/ಹೆಚ್‌ ಆರ್‌ ಹಂತ. ಪ್ರಾಥಮಿಕ ಹಂತ ಯಶಸ್ವಿ ಆದರೆ ಟೆಕ್ನಿಕಲ್‌ ಹಂತಕ್ಕೆ ಬರಲು ಸೂಚಿಸುತ್ತಾರೆ. ಎಚ್‌ಆರ್‌ ವಿಭಾಗದಲ್ಲಿ ವೇತನದ ಬಗ್ಗೆ ಮಾನವ ಸಂಪನ್ಮೂಲ ಅಧಿಕಾರಿಗಳು ಚರ್ಚೆ ನಡೆಸುತ್ತಾರೆ. ಟೆಕ್ನಿಕಲ್‌ ಹಂತ ಕೆಲವೊಮ್ಮೆ ವಿಡಿಯೋ ಕಾನ್ಫರೆನ್ಸ್‌ ಮೂಲಕವೂ ನಡೆಯುತ್ತದೆ. ಹಾಗೆಯೇ, ಪ್ರಾಥಮಿಕ ಹಂತದ ಸಂದರ್ಶನವು ಟೆಲಿಫೋನ್‌ ಮೂಲಕವೂ ನಡೆಯಬಹುದು.

ಅಭ್ಯರ್ಥಿ ಇಷ್ಟವಾದಲ್ಲಿ ಮುಂದಿನ ಹಂತಕ್ಕೆ ಕಚೇರಿಗೆ ಬರಲು ಹೇಳುತ್ತಾರೆ. ಸೇಲ್ಸ್‌ ಮಾರ್ಕೆಟಿಂಗ್‌ ಸಂದರ್ಶನವಾದರೆ ಸ್ವಲ್ಪ ಭಿನ್ನವಾಗಿರುತ್ತದೆ. ಇಲ್ಲಿ ನಿಮ್ಮ ಮಾರಾಟ ಮಾಡುವ ಶೈಲಿ, ಸಂವಹನದ ರೀತಿಯನ್ನೆಲ್ಲಾ ಗಮನಿಸುತ್ತಾರೆ. ಯಾವುದೇ ಉತ್ಪನ್ನವನ್ನು ನಿರಾಕರಿಸಿದ ಗ್ರಾಹಕರನ್ನು ಮತ್ತೆ ಸೆಳೆಯುವ ನಿಮ್ಮ ತಂತ್ರದ ಬಗ್ಗೆ ಸಂದರ್ಶಕರಿಗೆ ಬಹಳ ಕುತೂಹಲ ಇರುತ್ತದೆ. ಅದನ್ನು ನೀವು ಪ್ರಸ್ತುತ ಪಡಿಸಬೇಕಾಗುತ್ತದೆ ಕೂಡ. ಸಂದರ್ಶನದ ಮೊದಲು ನಿಮ್ಮ ಸ್ಮರಣೆಯನ್ನು ರಿಫ್ರೆಶ್‌ ಮಾಡಿಕೊಳ್ಳಿ , ಇದರಿಂದ, ನಿಮ್ಮ ಸಾಧನೆಯನ್ನು ಪ್ರದರ್ಶಿಸಲು ಅನುಕೂಲವಾಗುತ್ತದೆ. ಪ್ರಮುಖವಾಗಿ ಸಂದರ್ಶನಗಳಲ್ಲಿ ಕಮ್ಯುನಿಕೇಷನ್‌, ತಂಡವನ್ನು ಮುನ್ನಡೆಸುವ ರೀತಿ, ಒತ್ತಡವನ್ನು ನಿಭಾಯಿಸುವ ಪರಿ, ಟಾರ್ಗೆಟ್‌ಗಳನ್ನು ಮುಟ್ಟುವ ವೇಗ…. ಇದೆಲ್ಲವನ್ನೂ ಲೆಕ್ಕ ಹಾಕುತ್ತಾರೆ. ಅಲ್ಲಿ ಕೇಳುವ ಪ್ರಶ್ನೆಗಳೆಲ್ಲವೂ ಇಂಥ ನಿಗೂಢ, ನಿರೀಕ್ಷಿತ ಕೆಲಸದ ಮೇಲೆಯೇ ಕೇಂದ್ರಿಕೃತವಾಗಿರುತ್ತದೆ.

ವಿಜಯ್‌ಕುಮಾರ್‌ ಎಸ್‌.ಅಂಟೀನ

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.