ವೀರ ಯೋಧರನ್ನು ದೇಶ ಗೌರವಿಸಲಿ
Team Udayavani, Dec 24, 2019, 3:28 PM IST
ಶಿವಮೊಗ್ಗ: ವೀರ ಯೋಧರಿಗೆ ಇಡೀ ದೇಶ ಗೌರವ ಸಮರ್ಪಣೆ ಮಾಡಬೇಕು. ಅವರ ಕುಟುಂಬಗಳಿಗೆ ನಾವೆಲ್ಲ ಋಣಿಗಳಾಗಿದ್ದೇವೆ. ದೇಶದ ರಕ್ಷಣೆ ಮಾಡುತ್ತಿರುವವರ ಶ್ರಮವನ್ನು ನಮ್ಮ ಸಾಧನೆ ಎಂದು ಯಾರೇ ಆಗಲಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಸೈನಿಕರ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಸಾಹಿತಿ ನಾ.ಡಿಸೋಜ ಹೇಳಿದರು.
ವಿದ್ಯಾರ್ಥಿ ಸಂಘಟನೆ ವತಿಯಿಂದ ಕುಂಚೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರ ಯೋಧ ಮತ್ತು ರೈತರ ಪುತ್ಥಳಿ ಅನಾವರಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಗಡಿಯಲ್ಲಿ ನಮ್ಮ ರಕ್ಷಣೆಗೆ ನಿಂತ ಯೋಧರು ಅವರ ಜೀವ ಒತ್ತೆ ಇಟ್ಟು ನಮ್ಮನ್ನು ರಕ್ಷಿಸುತ್ತಿದ್ದಾರೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಅದನ್ನು ಯಾರೇ ಮಾಡಿದರೂ ಅಕ್ಷಯ್ಯ ಅಪರಾಧ. ವೀರ ಯೋಧರಿಗೆ ಇಡೀ ದೇಶ ನಮನ ಸಮರ್ಪಿಸಬೇಕು. ಯೋಧರ ಕುಟುಂಬಗಳಿಗೆ ನಾವೆಲ್ಲರೂ ತಲೆಬಾಗಿ ಅಭಿನಂದಿಸಬೇಕು ಎಂದರು.
ಸಮಾಜದಲ್ಲಿ ಯಾರೇ ಆಗಲಿ, ಎಷ್ಟೇ ಪ್ರಭಾವಿಗಳೇ ಆಗಿರಲಿ ಯೋಧರ ದೇಶದ ರಕ್ಷಣೆ ವಿಚಾರದಲ್ಲಿ ಅವರಿಗೆ ನಾವೆಲ್ಲರೂ ಋಣಿಗಳು. ಅವರು ಪ್ರಾಣದ ಮೇಲೆ ಆಸೆ ತೊರೆದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ರೈತರ ಮತ್ತು ಸೈನಿಕರ ಪುತ್ಥಳಿ ಅನಾವರಣಗೊಳಿಸಿ ಕರ್ನಲ್ ರಾಮ್ಚಂದ್ರ ಮಾತನಾಡಿ, ದೇಶದ ರಕ್ಷಣೆಯಲ್ಲಿ ಗ್ರಾಮೀಣ ಯುವಕರ ಪಾತ್ರ ಮಹತ್ವದ್ದಾಗಿದೆ. ಸೈನಿಕರಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಾಗಿದ್ದಾರೆ ಎಂದರು.
ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪಕ ರಾಜ್ಯಧ್ಯಕ್ಷ ವಿನಯ್ ಕೆ.ಸಿ.ರಾಜಾವತ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಾರದ ಪೂರ್ಯಾನಾಯ್ಕ, ಜಿ.ಪಂ. ಸದಸ್ಯೆ ಸೌಮ್ಯ ಭೋಜ್ಯನಾಯ್ಕ, ಪತ್ರಕರ್ತ ನಾಗೇಶ್ ನಾಯ್ಕ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯೋಧರಾದ ನಾಗೇಶ್ ನಾಯ್ಕ, ಪರಮೇಶ್ ನಾಯ್ಕ, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆ ಮಾಡಿದ ಸಾಧಕರಿಗೆ ಯೂತ್ ಐಕಾನ್ ಪ್ರಶಸ್ತಿ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.