ಮದುವೆ ವಿಷಯದಲ್ಲಿ ಗುಟ್ಟು ಮಾಡಬೇಡಿ…

ಎಲ್ಲರೂ ಸೇರಿ ಮೋಸ ಮಾಡಿಬಿಟ್ಟರಾ?

Team Udayavani, Dec 25, 2019, 4:11 AM IST

sz-1

ಎಲ್ಲರೂ ಸೇರಿ ಮೋಸ ಮಾಡಿಬಿಟ್ಟರಾ?

ಅವತ್ತೂಂದಿನ, ಕೋರ್ಟಿನಿಂದ ಮನೆಯವರೆಲ್ಲಾ ಚಿಂತಿತರಾಗಿಯೇ ವಾಪಸ್‌ ಬಂದಿದ್ದರು. ಗಂಡ, ಅತ್ತೆ, ಭಾವ, ನಾದಿನಿಯರೆಲ್ಲ ಅತ್ತೆಯ ರೂಮಿನಲ್ಲಿ ಬಹಳ ಹೊತ್ತು ಗುಟ್ಟಾಗಿ ಚರ್ಚೆ ನಡೆಸಿದರು. ಸ್ವಾತಿ, ಕೇಸಿನ ಬಗ್ಗೆ ಮಾಹಿತಿ ತಿಳಿಯಲು ಪ್ರಯತ್ನಿಸಿದಾಗ, ಗಂಡ ಮತ್ತು ಅತ್ತೆ ಬಹಳ ಒರಟಾಗಿ “ಕೇಸಿಗೂ ನಿನಗೂ ಸಂಬಂಧವಿಲ್ಲ’ ಎಂದುಬಿಟ್ಟರು!

ಸ್ವಾತಿ-ಸುರೇಶ್‌ ಮದುವೆಯಲ್ಲಿನ ತಮ್ಮ ಮನಸ್ತಾಪದ ವಿಚಾರವಾಗಿ, ಸಮಾಲೋಚನೆಗೆ/ಸಲಹೆಗೆ ನನ್ನ ಮುಂದೆ ಕುಳಿತಿದ್ದರು. ಸುರೇಶ್‌ಗೆ ಈ ಮುಂಚೆ ಮದುವೆಯಾಗಿದ್ದು, ಮೊದಲನೇ ಮಡದಿ, ಸುರೇಶನ ಮನೆಯವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ, ಕೋರ್ಟಿನಲ್ಲಿ ದಾಖಲಿಸಿದ್ದ ಕೇಸು ಇನ್ನೂ ಇತ್ಯರ್ಥವಾಗಿರಲಿಲ್ಲ. ಈ ವಿಚಾರ ತಂದೆಗೆ ಗೊತ್ತಿದ್ದರೂ, ಮದುವೆಗೆ ಎರಡು ದಿನ ಮುಂಚೆ, ಮೆಹಂದಿ ಹಚ್ಚುವ ದಿನದ ತನಕವೂ ಮಗಳಿಂದ ಅದನ್ನು ಮುಚ್ಚಿಟ್ಟಿದ್ದರು. ಕಟ್ಟ ಕಡೆಯಲ್ಲಿ ವಿಚಾರ ಹೀಗೀಗೆ ಎಂದು ಸೂಕ್ಷ್ಮವಾಗಿ ತಿಳಿಸಿ, ಅವಳಿಗೆ ಇಷ್ಟವಿಲ್ಲದಿದ್ದರೆ, ಮದುವೆ ಕ್ಯಾನ್ಸಲ್‌ ಮಾಡುವುದಾಗಿ ಹೇಳಿದ್ದರು. ಅದನ್ನು ಕೇಳಿ ಸ್ವಾತಿಗೆ ಆಘಾತವಾಗಿದೆ.

ಅಳುತ್ತಾ ಸುರೇಶ್‌ಗೆ ಫೋನಾಯಿಸಿದಾಗ, ಆತ “ಭಯಪಡುವ ಅಗತ್ಯವಿಲ್ಲ’ ಎಂದು ಸಮಾಧಾನ ಮಾಡಿ¨ªಾರೆ. ಆದರೆ, ಭರವಸೆ ಎನ್ನುವುದು ಬಾಯಿ ಮಾತಿಗೆ ಹುಟ್ಟಿಕೊಳ್ಳುವ ಭಾವವಲ್ಲ. ಸ್ವಾತಿ, ಧೈರ್ಯ ತೆಗೆದುಕೊಂಡು ಮದುವೆಗೆ ಒಪ್ಪಿಕೊಂಡರೂ, ಬಲವಂತದಿಂದ ಮದುವೆಯಾದೆ ಎಂಬ ಭಾವದಲ್ಲಿ ಆಕೆಗೆ ನಂಬಿಕೆ ಕುಸಿದುಹೋಗಿತ್ತು. ನಿಶ್ಚಿತಾರ್ಥದ ನಂತರ ಮದುವೆಗೆ ಆರು ತಿಂಗಳ ಸಮಯವಿತ್ತು. ಆ ಅವಧಿಯಲ್ಲಿ ಸುರೇಶ್‌ ನಿಜಾಂಶ ತಿಳಿಸಿದ್ದರೆ ತಾನು ಮದುವೆಗೆ ಒಪ್ಪುತ್ತಿರಲಿಲ್ಲ. ಸತ್ಯಾಂಶವನ್ನು ಮುಚ್ಚಿಟ್ಟು, ತಂದೆ ಮತ್ತು ಹುಡುಗ ಇಬ್ಬರೂ ತನಗೆ ಮೋಸ ಮಾಡಿದ್ದಾರೆ ಎಂಬುದು ಸ್ವಾತಿಯ ಕೊರಗು.

ಅವತ್ತೂಂದಿನ, ಕೋರ್ಟಿನಿಂದ ಮನೆಯವರೆಲ್ಲಾ ಚಿಂತಿತರಾಗಿಯೇ ವಾಪಸ್‌ ಬಂದಿದ್ದರು. ಗಂಡ, ಅತ್ತೆ, ಭಾವ, ನಾದಿನಿಯರೆಲ್ಲ ಅತ್ತೆಯ ರೂಮಿನಲ್ಲಿ ಬಹಳ ಹೊತ್ತು ಗುಟ್ಟಾಗಿ ಚರ್ಚೆ ನಡೆಸಿದ್ದಾರೆ. ಸ್ವಾತಿ, ಕೇಸಿನ ಬಗ್ಗೆ ಮಾಹಿತಿ ತಿಳಿಯಲು ಪ್ರಯತ್ನಿಸಿದಾಗ, ಗಂಡ ಮತ್ತು ಅತ್ತೆ ಬಹಳ ಒರಟಾಗಿ “ಕೇಸಿಗೂ ನಿನಗೂ ಸಂಬಂಧವಿಲ್ಲ’ ಎಂದುಬಿಟ್ಟರು! ಸ್ವಾತಿಯೂ ಪಟ್ಟು ಬಿಡದೆ, ಮೊದಲ ಮದುವೆಯ ಕೋರ್ಟ್‌ ಮಾಹಿತಿಯ ಹಕ್ಕು ನನಗೇ ಹೆಚ್ಚು ಇರುವುದು ಎಂದು ವಾದಿಸಿದಾಗ, ಸುರೇಶ್‌ ಆಕೆಯ ಮೇಲೆ ಕೈ ಮಾಡಿದ್ದಾರೆ.

ಆಗ ಸ್ವಾತಿ, ಸುರೇಶ್‌ ಮತ್ತು ಮನೆಯವರು ತನಗೆ ಕಿರುಕುಳ ನೀಡುತ್ತಿದ್ದಾರೆಂದು ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು, ಸೊಸೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸುರೇಶನ ಮನೆಯವರಿಗೆ ತಿಳಿಸಿದ್ದಾರೆ. ಚಿಕ್ಕ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಸ್ಟೇಶನ್‌ ತನಕ ದೂರು ಕೊಡಲು ಬರಬೇಡ ಎಂದು ಸ್ವಾತಿಗೂ ಬುದ್ಧಿವಾದ ಹೇಳಿದ್ದಾರೆ.

ಮದುವೆ ವಿಷಯದಲ್ಲಿ ಏನನ್ನೂ ಮುಚ್ಚಿಡಬೇಡಿ. ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಕಳೆದುಕೊಳ್ಳಬೇಕೆಂದು, ಅನಿವಾರ್ಯವಾಗಿ ಯಾರೊಂದಿಗೋ ಮದುವೆ ಮಾಡಿದರೆ, ಹೆಣ್ಣುಮಕ್ಕಳಿಗೆ ಸಿಟ್ಟು ಬರುತ್ತದೆ. ತನಗೆ ಎಲ್ಲರೂ ಮೋಸ ಮಾಡುತ್ತಿದ್ದಾರೆ ಎಂದು ಅನ್ನಿಸತೊಡಗಿದರೆ, ಮನಸ್ಸು ಸ್ಥಿರತೆ ಕಳೆದುಕೊಳ್ಳುತ್ತದೆ.

ಇಲ್ಲಿ, ಸುರೇಶ್‌ಗೇ ಹೆಚ್ಚಿನ ನೆರವು ಬೇಕಾಗಿರುವುದು. ಸುರೇಶ್‌ಗೆ, ಸ್ವಾತಿಯ ಜೊತೆಗೆ ಹೆಚ್ಚಿನದಾಗಿ ಸಕಾರಾತ್ಮಕ ಸಂವಹನ ಮಾಡಲು ತಿಳಿಸಲಾಯಿತು. ಸ್ವಾತಿಯ ಸಂಘರ್ಷಗಳಿಗೆ ಕಾರಣವಾದ ಮೊದಲನೇ ಮದುವೆಯ ವ್ಯಾಜ್ಯದ ಬಗ್ಗೆ ಮಾಹಿತಿಯನ್ನು ತಿಳಿಸಲಾಯಿತು. ಸ್ವಾತಿಯಲ್ಲಿ ಆತಂಕ ಕಡಿಮೆಯಾಗಿ, ಬಿಕ್ಕಟ್ಟು ನಿವಾರಣೆಯಾಗಲು ಹಲವಾರು ಕೌಟುಂಬಿಕ ಚಿಕಿತ್ಸಕ ಸಮಾಲೋಚನೆಗಳು ನಡೆದವು. ಈಗ ಗಂಡ-ಹೆಂಡಿರ ನಡುವಿನ ಸಂಬಂಧ ಸಮತೋಲನದಲ್ಲಿದೆ. ವೈವಾಹಿಕ ಸಂಬಂಧದಲ್ಲಿ ಅಸಮಾಧಾನ ಉಂಟಾದಲ್ಲಿ ವಿವಾಹ ಸಲಹೆಗಾರರನ್ನು ಭೇಟಿಯಾಗುವುದು ಉತ್ತಮ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

rasaleele

Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್‌ ಅಡಗಿಸಿಟ್ಟು ವಿಡಿಯೋ!

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.