ಶೀತಲಾ… ಸುಂದರಾ…

ಚಳಿಗಾಲದಲ್ಲಿ ಚಿಣ್ಣರ ಆರೈಕೆ...

Team Udayavani, Dec 25, 2019, 5:23 AM IST

sz-15

ಸಿಹಿ, ಹುಳಿ, ಉಪ್ಪು… ಈ ಎಲ್ಲ ರುಚಿಯ ಆಹಾರ ಸೇವನೆಗೆ ಚಳಿಗಾಲ ಅತ್ಯಂತ ಪ್ರಶಸ್ತವಾದುದು. ಚಳಿಗಾಲದಲ್ಲಿ ಮನುಷ್ಯನಿಗೆ ಶಾರೀರಿಕ ಶಕ್ತಿ ಹಾಗೂ ರೋಗ ನಿರೋಧಕ ಗುಣ ಹೆಚ್ಚಾಗಿರುತ್ತದೆ. ಹಾಗಾಗಿ, ಮಕ್ಕಳು ಯಾವ್ಯಾವ ತಿಂಡಿ ತಿನ್ನಲು ಆಸೆಪಡುತ್ತಾರೋ, ಅದನ್ನೆಲ್ಲ ಮಾಡಿಕೊಡಬಹುದಾದ ಸಂದರ್ಭವಿದು…

ತಣ್ಣನೆಯ ಗಾಳಿಯನ್ನು ಉಣಬಡಿಸುವ, ಬೆಚ್ಚಗಾಗಿರುವ ಮನಸ್ಸಿಗೆ ಮುದ ನೀಡುವ, ಇಂದ್ರಿಯಗಳಿಗೆ ತಂಪೆರೆಯುವ ಚಳಿಗಾಲದಲ್ಲಿ ನಾವಿದ್ದೇವೆ. ಮನಸ್ಸು ಚಂಚಲವಾಗದಂತೆ ತಪಸ್ಸಿಗೆ ಕೂರಲೂ ತಂಪೆರೆಯುವ ಚಳಿಯೇ ಬೇಕು. ಬಿಸಿಲಿನ ತಾಪದಿಂದ ಕುದಿಯುವ ಮರುಭೂಮಿಯ ಬದಲಾಗಿ ತಂಪಾಗಿ ಕೊರೆಯುವ ಚಳಿಯಿರುವ ಹಿಮಾಲಯವನ್ನೇ ಆಶ್ರಯಿಸುವುದು ಇದಕ್ಕಾಗಿಯೇ ಇರಬೇಕು. ಚಳಿ ಎಂದರೆ ಎಷ್ಟು ಖುಷಿಯೋ, ತೀವ್ರವಾದ ಚಳಿಯಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳುವಲ್ಲೂ ಅಷ್ಟೇ ಜಾಗರೂಕತೆ ಇರಬೇಕು. ವಯಸ್ಸು ಹೆಚ್ಚಾಗುತ್ತಿದ್ದಂತೆ, ಹವಾಮಾನದಲ್ಲಿ ಉಂಟಾಗುವ ದಿಢೀರ್‌ ಏರಿಳಿತಗಳಿಗೆ ಹೊಂದಿಕೊಳ್ಳುವುದು ಶರೀರಕ್ಕೆ ಅಭ್ಯಾಸವಾಗುತ್ತಾ ಹೋಗುತ್ತದೆ. ಆದರೆ ಪುಟ್ಟ ಮಕ್ಕಳಿಗೆ ಇದರ ರೂಢಿ ಇನ್ನೂ ಆಗಿರುವುದಿಲ್ಲ. ಹೀಗಾಗಿ, ಮುತುವರ್ಜಿ ವಹಿಸಿ ಮಾಡಬೇಕಾದ ಪುಟ್ಟ ಮಕ್ಕಳ ಲಾಲನೆ ಪಾಲನೆ ಈ ಚಳಿಗಾಲದಲ್ಲಿ ಹೇಗಿರಬೇಕೆಂಬ ವಿಚಾರ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.

ಸೂರ್ಯ ಸರಿವ ಮರೆಗೆ
ವರ್ಷದ ಆರು ಋತುಗಳಲ್ಲಿ ಕೊನೆಯದು ಹೇಮಂತ. ನಂತರ ಎದುರಾಗುವ ವರ್ಷಾರಂಭದ ಋತು ಶಿಶಿರ. ಈ ಹೇಮಂತ- ಶಿಶಿರಗಳೆರಡೂ ಸೇರಿ ನಮ್ಮ ಚಳಿಗಾಲ. ಮಾರ್ಗಶಿರದಿಂದ ಮೊದಲ್ಗೊಂಡು ಪಾಲ್ಗುಣದ ಕೊನೆಯ ತನಕದ ನಾಲ್ಕು ತಿಂಗಳುಗಳು. ಶೀತಲ, ಒಣ ಗುಣವಿರುವ ಉತ್ತರ ದಿಕ್ಕಿನ ಗಾಳಿಯು ಬಲವಾಗಿ ಬೀಸುತ್ತ ಸೂರ್ಯನು ಭೂಮಿಯಿಂದ ಅತಿ ಹೆಚ್ಚು ದೂರ ಸರಿಯುವ ಕಾಲವಿದು. ಆದುದರಿಂದ ಹಗಲು ಕಡಿಮೆ, ರಾತ್ರಿಯ ಸಮಯ ದೀರ್ಘ‌ವಾಗಿರುತ್ತದೆ. ಭೂಮಿಯಲ್ಲಿರುವ ಚರಾಚರಗಳ ಮೇಲೆ ಸೂರ್ಯನ ಪ್ರಭಾವ ಕಡಿಮೆಯಾಗಿ ಚಂದ್ರನ ಪ್ರಭಾವ ಹೆಚ್ಚಿರುವ ಸಮಯವಿದು.

ಪೂರಕ ವಾತಾವರಣ
ಮನುಷ್ಯನ ಶಾರೀರಿಕ ಶಕ್ತಿ ಅತಿ ಹೆಚ್ಚು ಇರುವ ಕಾಲ ಇದಾಗಿದೆ. ಸಹಜವಾಗಿ ರೋಗಗಳನ್ನು ತಡೆಯುವ ಶಕ್ತಿಯಾದ ವ್ಯಾಧಿ ಕ್ಷಮತ್ವವೂ ಅತ್ಯುನ್ನತ ಮಟ್ಟದಲ್ಲಿರುತ್ತದೆ. ಪಚನಶಕ್ತಿಯೂ ಅತ್ಯಂತ ಪ್ರಬಲವಾಗಿದ್ದು ಅದಕ್ಕೆ ಸರಿಯಾಗಿ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯೂ ಅಗತ್ಯವಾಗಿರುವ ಕಾಲವಿದು. ಆಹಾರಕ್ಕಾಗಿ ನಾವು ಮಾಡುವ ಖರ್ಚು, ವರ್ಷದ ಬೇರೆ ತಿಂಗಳುಗಳಿಗೆ ಹೋಲಿಸಿದರೆ ಚಳಿಗಾಲದಲ್ಲೇ ಅತ್ಯಂತ ಹೆಚ್ಚಾಗಿರುತ್ತದೆ. ಇದಕ್ಕಾಗಿ ಬೇಸರಿಸಬೇಕಾಗಿಲ್ಲ. ಯಾಕೆಂದರೆ ಜನರೆಲ್ಲರ ಜೀರ್ಣಶಕ್ತಿ ಪ್ರಬಲವಾಗಿದ್ದಾಗ ಕಾಯಿಲೆಗಳು ಅತಿ ಕಡಿಮೆಯಿರುತ್ತದೆ! ಸಸ್ಯಗಳು ಔಷಧೀಯ ಗುಣಗಳಿಂದ ಸಂಪದ್ಭರಿತವಾಗಿರುವುದೂ ಇದೇ ಚಳಿಗಾಲದಲ್ಲಿ. ಈ ಚಳಿಗಾಲದಲ್ಲಿ ಬೆಳೆದ ಧವಸ ಧಾನ್ಯಗಳು, ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳೂ ಅತಿಹೆಚ್ಚು ಸತ್ವಯುತವಾಗಿದ್ದು ಗುಣಗಳ ಗಣಿಯಾಗಿರುತ್ತವೆ! ವ್ಯಕ್ತಿಯ ಬದುಕಿಗೆ ಎಲ್ಲೆಡೆಯಿಂದಲೂ ಪೂರಕವಾದ ವಾತಾವರಣವೆಂದೇ ಹೇಳಬೇಕು. ಅದಕ್ಕಾಗಿಯೇ, ಈ ಚುಮುಗುಟ್ಟುವ ಚಳಿಯಲ್ಲಿ ಬೆಳಗ್ಗೆ ಏಳಲು ಮನಸ್ಸಾಗದೆ ಬೆಚ್ಚನೆ ಇನ್ನಷ್ಟು ಮಲಗಿರಬೇಕೆಂಬ ಒತ್ತಾಸೆ ಮೂಡುತ್ತದೆ.

ಚಳಿಗಾಲದ ಆರಂಭದಲ್ಲಿ ಪಿತ್ತವು ಶಮನಗೊಂಡು ಕಫ‌ದ ಸಂಚಯ ಪ್ರಾರಂಭವಾಗಿರುತ್ತದೆ. ಹಾಗಿದ್ದರೂ, ಈ ಋತುವಿನ ವಿಶೇಷವೆಂದರೆ ವಾತವನ್ನು ಕಡಿಮೆ ಮಾಡುವ ಆಹಾರ ವಿಹಾರವನ್ನೂ ಅಳವಡಿಸಿಕೊಳ್ಳಲು ನಿರ್ದೇಶಿಸಲಾಗಿದೆ! ಆಹಾರ ಪದಾರ್ಥಗಳಲ್ಲಿ, ವಾತಾವರಣದಲ್ಲಿ ಹಾಗೂ ಶರೀರದಲ್ಲಿ ಕಫ‌ದ ಶೇಖರಣೆ ಆಗುವುದರಿಂದ ಪ್ರಮುಖವಾಗಿ ಕಫ‌ ದೇಹಪ್ರಕೃತಿ ಹೊಂದಿರುವ ಮಕ್ಕಳು ಆಹಾರ ವಿಹಾರಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಈ ನಾಲ್ಕು ತಿಂಗಳುಗಳಲ್ಲಿ ಕಫ‌ ಪ್ರಕೃತಿಗೆ ಅನುಗುಣವಾಗಿ ಆಹಾರ ದ್ರವ್ಯಗಳಿಗೆ ಒತ್ತು ನೀಡಿ ಸೇವಿಸುವುದರಿಂದ ಮುಂದೆ ಬರಬಹುದಾದ ರೋಗಗಳನ್ನೂ ತಡೆದು ಇಡೀ ವರುಷ ಕ್ಷೇಮವಾಗಿರಲು ಸಾಧ್ಯವಾಗುತ್ತದೆ.

ಸದಾ ಬೆಚ್ಚಗಿರಬೇಕು
ಚಳಿಗಾಲದಲ್ಲಿ ಕ್ಷೀರಬಲಾ ತೈಲ, ಅಶ್ವಗಂಧಬಲಾ ತೈಲಗಳಿಂದ ಅಭ್ಯಂಗ ಮಾಡಿದರೆ ಮಕ್ಕಳ ಲವಲವಿಕೆಗೆ ಪಾರವೇ ಇಲ್ಲ. ವಿಶೇಷವಾಗಿ, ತಲೆಗೆ ತ್ರಿಫ‌ಲಾದಿ ತೈಲವನ್ನು ಪ್ರತಿನಿತ್ಯ ಹಚ್ಚುವುದರಿಂದ ಕಣ್ಣಿಗೂ ಹಿತ. ಶರೀರದಿಂದ ಬೆವರಿಳಿಸುವ ಆಟಗಳು, ಚೂರ್ಣದ ಅಭ್ಯಂಗವೂ ಆರೋಗ್ಯಕರವಾಗಿರುತ್ತದೆ. ಅಗರುವಿನ ಧೂಪದ ಹೊಗೆಯು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಉಣ್ಣೆಯ ಬಟ್ಟೆ, ದಪ್ಪಗಿನ ಬಟ್ಟೆಯನ್ನು ಧರಿಸಬೇಕೆಂದು ಆಯುರ್ವೇದ ಹೇಳಿದೆ. ವ್ಯಾಯಾಮ, ದೈಹಿಕ ಕ್ರಿಯೆಗಳನ್ನು ಹೆಚ್ಚಿಸಿ ಹಾಗೂ ಚಪ್ಪಲಿ ಧರಿಸಿ ಪಾದದ ಆರೈಕೆ ಮಾಡಬೇಕು. ಉಷ್ಣ ಗೃಹವಾಸವೂ ಹಿತವೆಂದು ಆಯುರ್ವೇದ ಹೇಳಿದ್ದು, ಭಾರತದ ಹಿಂದಿನ ರಾಜರುಗಳೆಲ್ಲ ಚಳಿಗಾಲಕ್ಕೆ ಪ್ರತ್ಯೇಕ ಮನೆಯನ್ನು ಯಾಕೆ ಹೊಂದಿದ್ದರು ಎಂಬುದರ ಮರ್ಮವನ್ನು ಬಿಡಿಸಿ ಹೇಳುತ್ತದೆ!

ಅವಳಿ ಶಿಶುಗಳಿಗೆ ಹಿರಿಯರ ಪ್ರೀತಿ, ಗಾಳಿ, ಬೆಳಕು, ಆಹಾರ, ಪರಿಸರ, ವಾತಾವರಣ ಎಲ್ಲವೂ ಒಂದೇ ಆಗಿದ್ದರೂ ಒಂದು ಮಗು ಹನ್ನೆರಡು ಗಂಟೆ ನಿದ್ರಿಸಿದರೆ ಇನ್ನೊಂದು ಹದಿನೆಂಟು ಗಂಟೆ ನಿದ್ರಿಸುತ್ತದೆ. ಇದಕ್ಕೆ ಆ ಶಿಶುಗಳ ಶರೀರಪ್ರಕೃತಿಯೇ ಕಾರಣ. ಆದುದರಿಂದ ದೇಹಪ್ರಕೃತಿಗೆ ಅನುಗುಣವಾಗಿ ಮಕ್ಕಳ ಆಹಾರ ವಿಹಾರಗಳ ವಿಷಯದಲ್ಲೂ ವ್ಯತ್ಯಯ ಮಾಡುವ ಕಲೆಯನ್ನು ಮನೆಯ ಹಿರಿಯರು ಕಲಿಯಬೇಕು.

ಯಾವುದನ್ನು ತಿನ್ನಬಹುದು?
ಹೇಮಂತ ಋತುವಿನಲ್ಲಿ ಷಡ್ರಸಗಳ ಪೈಕಿ ಸಿಹಿರುಚಿಯು ನೀರು ಹಾಗೂ ಆಹಾರ ವಸ್ತುಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಶಿಶಿರ ಋತುವಿನಲ್ಲಿ ಕಹಿರಸದ ಪ್ರಾಬಲ್ಯ ಎಲ್ಲೆಡೆ ಕಂಡುಬರುತ್ತದೆ! ಚಳಿಗಾಲದಲ್ಲಿ ಸಿಹಿ, ಹುಳಿ, ಉಪ್ಪು ರುಚಿಯುಳ್ಳ ಆಹಾರ ಸೇವನೆ ಪ್ರಶಸ್ತವಾಗಿದ್ದು ಖಾರ, ಕಹಿ, ಒಗರು ರುಚಿಯ ಆಹಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಜಿಡ್ಡಿನ ಅಂಶವುಳ್ಳ ಬಿಸಿಯಾದ ಆಹಾರವನ್ನು ಉತ್ತಮ ಪ್ರಮಾಣದಲ್ಲಿ ಸೇವಿಸುವುದು ಹಾಗೂ ಕುಡಿಯಲು ಬಿಸಿನೀರು ಉಪಯೋಗಿಸುವುದು ಪಥ್ಯವಾಗಿದೆ. ಅನುಪಾನವಾಗಿ ಶುಂಠಿ ಹಾಗೂ ಹಿಪ್ಪಲಿಯು ಆರೋಗ್ಯದಾಯಕವಾಗಿದೆ.

ಸುಲಭವಾಗಿ ಜೀರ್ಣವಾಗುವ ಆಹಾರ, ಶೀತಲ ಅನ್ನಪಾನಾದಿಗಳು ಶರೀರಕ್ಕೆ ಹಿತಕರವಲ್ಲ. ಉದ್ದಿನಬೇಳೆ, ಹೊಸದಾಗಿ ಬೆಳೆದ ಜೋಳ, ಹೊಸ ಅಕ್ಕಿ, ಹೊಸ ಗೋಧಿಯಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳೂ ಬಳಕೆಗೆ ಯೋಗ್ಯವಾಗಿದೆ. ಕಬ್ಬು ಹಾಗೂ ಕಬ್ಬಿನ ಎಲ್ಲಾ ಉತ್ಪನ್ನಗಳು, ಜೇನುತುಪ್ಪ, ಹೆಸರುಕಾಳು, ಹಾಗೂ ಹಾಲಿನ ಉತ್ಪನ್ನಗಳು ದೇಹಕ್ಕೆ ಅನುಕೂಲವನ್ನು ಮಾಡುತ್ತವೆ. ಹಾಗಾಗಿ, ಸಿಹಿತಿನಿಸು ಮಾಡಿ ತಿನ್ನಲು ವರ್ಷದಲ್ಲೇ ಅತ್ಯುತ್ತಮ ಕಾಲವೆಂದರೆ ಚಳಿಗಾಲ! ತೈಲದ ಯಥೇತ್ಛ ಬಳಕೆಯನ್ನೂ ಮಾಡಬಹುದಾದ್ದರಿಂದ ಎಣ್ಣೆತಿಂಡಿ ತಿನ್ನಲು ಅನುಮತಿಯಿರುವ ಕಾಲ ಚಳಿಗಾಲವೇ! ಹಾಗಾಗಿ ಮಕ್ಕಳು ಯಾವೆಲ್ಲಾ ತಿಂಡಿ ತಿನಸುಗಳನ್ನು ಆಸೆ ಪಡುತ್ತಾರೋ ಅವೆಲ್ಲವನ್ನೂ ಮಾಡಿಕೊಡಲು ಹೇಳಿ ಮಾಡಿಸಿದ ಸಮಯವಿದು.

-ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞರು

ಟಾಪ್ ನ್ಯೂಸ್

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.