ಸಿಎಗಳಿಗೆ ನಿರುದ್ಯೋಗವೇ ಇಲ್ಲ


Team Udayavani, Dec 25, 2019, 4:38 AM IST

sz-27

ಅತ್ಯುನ್ನತ ಗೌರವ ಮತ್ತು ಅಧಿಕ ಸಂಪಾದನೆ ಸಾಧ್ಯವಿರುವ ಚಾರ್ಟರ್ಡ್‌ ಅಕೌಂಟೆಂಟ್‌(ಸಿಎ) ಉದ್ಯೋಗ ಆಧುನಿಕ ಕಾಲಘಟ್ಟದಲ್ಲಿ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾಗಿ ಸಿಎ ಕೋರ್ಸ್‌ಗೆ ಬೇಡಿಕೆಯೂ ಹೆಚ್ಚುತ್ತಿದೆ. “ಕಬ್ಬಿಣದ ಕಡಲೆ’ ಎಂದು ಸಿಎ ಕೋರ್ಸ್‌ನಿಂದ ದೂರ ನಿಲ್ಲುತ್ತಿದ್ದ ಸ್ಥಿತಿ ಈಗ ಬದಲಾಗಿದೆ. ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿಗಳು ಕೂಡ ಸಿಎ ಕೋರ್ಸ್‌ ಪೂರೈಸಲು ಆಸಕ್ತಿ ತೋರಿಸುತ್ತಿದ್ದಾರೆ. ಅಂತೆಯೇ ಅನೇಕ ಮಂದಿ ಯಶಸ್ವಿಯಾಗಿ ಸಿಎಗಳಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಿಎಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಹಣಕಾಸಿನ ನಿರ್ವಹಣೆಯಲ್ಲಿ ಸಿಎಗಳ ಪಾತ್ರವೇ ಪ್ರಧಾನ. ಇಂದು ಬಹುತೇಕ ವ್ಯವಹಾರಗಳಿಗೆ ಸಿಎಗಳ ಮಾರ್ಗದರ್ಶನ, ನೆರವು ಅಥವಾ ಸೇವೆ ಅನಿವಾರ್ಯ ಎಂಬಂತಾಗಿದೆ. ಸಿಎ ಉದ್ಯೋಗ ಎಷ್ಟು ಪ್ರತಿಷ್ಠಿತವೋ ಅಷ್ಟೇ ಸವಾಲುಗಳಿಂದ ಕೂಡಿದೆ. ಕಳೆದ 4 ವರ್ಷಗಳಿಂದ ಸಿಎ ಬೇಡಿಕೆ ಹೆಚ್ಚಾಗಿದೆ. ದೇಶದಲ್ಲಿ ವರ್ಷಕ್ಕೆ ಸುಮಾರು 10,000 ಕ್ಕೂ ಅಧಿಕ ಹೊಸ ಸಿಎಗಳಿಗೆ ಬೇಡಿಕೆ ಇದೆ ಎನ್ನುತ್ತವೆ ಅಧ್ಯಯನ ವರದಿಗಳು.

ಸಿಎ ಪೂರ್ಣಗೊಳಿಸುವ ಹಂತ
ಪೂರ್ಣಗೊಳಿಸುವ ಮೊದಲು ಸಿಪಿಟಿ(ಕಾಮನ್‌ ಪ್ರೊಫೀಸಿಯೆನ್ಶಿ ಟೆಸ್ಟ್‌), ಐಪಿಸಿಸಿ (ಇಂಟಗ್ರೇಟೆಡ್‌ ಪ್ರೊಫೆಸನಲ್‌ ಕಾಂಪಿಟೆನ್ಸ್‌ ಕೋರ್ಸ್‌), ಎಫ್ಸಿಇ(ಫೈನಲ್‌ ಕೋರ್ಸ್‌) ಎಂಬ ಮೂರು ಹಂತಗಳನ್ನು ಪೂರೈಸಬೇಕು. ಸಿಪಿಟಿ ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಟೆಸ್ಟ್‌, ಜನರಲ್‌ ಎಕನಾಮಿಕ್ಸ್‌, ಮರ್ಕಂಟೈಲ್‌ ಲಾ ಮತ್ತು ಅಕೌಂಟಿಂಗ್‌ ವಿಷಯಗಳನ್ನು ಒಳಗೊಂಡಿದೆ. ಐಪಿಸಿಸಿ ಹಂತದಲ್ಲಿ ವಿಷಯಗಳ ಕುರಿತು ಕಾರ್ಯನಿರ್ವಹಣಾ ಜ್ಞಾನವನ್ನು ಒದಗಿಸುತ್ತದೆ. ವಿಶೇಷವಾಗಿ ಲೆಕ್ಕಪರಿಶೋಧನೆಯ ಜ್ಞಾನವನ್ನು ವೃದ್ಧಿಸುತ್ತದೆ. ಸಿಎ ಫೈನಲ್‌ ಕೋರ್ಸ್‌ ಫೈನಾನ್ಶಿಯಲ್‌ ರಿಪೋರ್ಟಿಂಗ್‌, ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌, ಸ್ಟ್ರಾಟೆಜಿಕ್‌ ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌, ಪ್ರೊಫೆಸನಲ್‌ ಎಥಿಕ್ಸ್‌, ಇನ್‌ಫಾರ್ಮೇಶನ್‌ ಸಿಸ್ಟಂಸ್‌ ಕಂಟ್ರೋಲ್‌ ಮತ್ತು ಅಡ್ವಾನ್ಸ್‌ಡ್‌ ಆಡಿಟಿಂಗ್‌ ವಿಷಯವನ್ನು ಒಳಗೊಂಡಿರುತ್ತದೆ.

ಪಿಯುಸಿ ಪರೀಕ್ಷೆ ಆದ ಕೂಡಲೇ ಸಿಪಿಟಿ ಪರೀಕ್ಷೆ ಬರೆಯಬಹುದು. ಪಿಯುಸಿ ಫ‌ಲಿತಾಂಶ ಜೂನ್‌ ಜುಲೈನಲ್ಲಿ ಪ್ರಕಟವಾದರೆ ಅನಂತರ ಮೊದಲ ಪ್ರಯತ್ನವಾಗಿ ಡಿಸೆಂಬರ್‌ನಲ್ಲಿ ಸಿಪಿಟಿ ಬರೆಯಬಹುದು. ಅನಂತರ ಐಪಿಸಿಸಿ ಬರೆಯಬಹುದು. ಐಪಿಸಿಸಿ ಒಂದು ಗ್ರೂಪ್‌ ಪಾಸ್‌ ಆದ ಅನಂತರ ಆರ್ಟಿಕಲ್‌ಶಿಪ್‌ ಸೇರಬೇಕು. ಐಪಿಸಿಸಿ ಆದ ಅನಂತರ ಫೈನಲ್‌. ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಸಿಎ ಮುಗಿಸಲು ಕನಿಷ್ಠ 4 ವರ್ಷಗಳು ಬೇಕು. ಒಂದೇ ಪ್ರಯತ್ನದಲ್ಲಿ ಸಫ‌ಲರಾದರೆ 21 ಅಥವಾ 22ನೇ ವರ್ಷದಲ್ಲಿಯೂ ಸಿಎ ಆಗುವ ಅವಕಾಶವಿದೆ. ಪಿಯುಸಿಯಲ್ಲಿ ಯಾವುದೇ ವಿಷಯ ಅಧ್ಯಯನ ಮಾಡಿರಬಹುದು. ಬಿ.ಕಾಂನಲ್ಲಿ ಶೇ.50, ಬಿಎಸ್‌ಸಿ ಅಥವಾ ಬಿಬಿಎಂ, ಬಿ.ಎಯಲ್ಲಿ ಶೇ.50 ಅಂಕ ಗಳಿಸಿ ನೇರವಾಗಿ ಆರ್ಟಿಕಲ್‌ಶಿಪ್‌ ಕೂಡ ಮಾಡಬಹುದು. ಆಗ ಸಿಪಿಟಿಯ ಅಗತ್ಯವಿಲ್ಲ. ಅನಂತರ ಮೂರು ವರ್ಷಗಳು ಸಾಕು.

ವಿಫ‌ಲವಾದರೂ ಯಶಸ್ಸು
ಸಿಎ ಪಾಸ್‌ ಆಗದಿದ್ದರೂ ನಷ್ಟವಾಗುವುದಿಲ್ಲ. ಪ್ರಾಯೋಗಿಕ ಜ್ಞಾನ ದೊರೆಯುವುದರಿಂದ ಅವರಿಗೆ ನಿರುದ್ಯೋಗ ಕಾಡುವುದಿಲ್ಲ ಎನ್ನುತ್ತಾರೆ ನಗರದ ಹಿರಿಯ ಲೆಕ್ಕಪರಿಶೋಧಕ ಎಸ್‌.ಎಸ್‌.ನಾಯಕ್‌. ಸಿಎ ಕೋರ್ಸ್‌ ಕಠಿನವಾದರೂ ಅಸಾಧ್ಯವೇನಲ್ಲ. ಸಿಎ ಮಾಡಿ ಎಷ್ಟೇ ಜನ ಬಂದರು ಅವರಿಗೆ ಉದ್ಯೋಗದ ಕೊರತೆ ಇರುವುದಿಲ್ಲ. ಇಲ್ಲಿ ನಿರುದ್ಯೋಗ ಎಂಬುದೇ ಇಲ್ಲ. ಫೇಲಾದರೂ ಜಿಎಸ್‌ಟಿ ಫೈಲಿಂಗ್‌, ಅಕೌಂಟೆಂಟ್‌ ಕೆಲಸ ಮೊದಲಾದವುಗಳಲ್ಲಿ ಅವಕಾಶವಿದೆ. ಸಿಎ ಕೋರ್ಸ್‌ ಉತ್ಕೃಷ್ಟವಾದುದು ಎನ್ನುತ್ತಾರೆ ನಾಯಕ್‌.

ಕಡಿಮೆ ಖರ್ಚಿನ ಕೋರ್ಸ್‌
ಪದವಿ ಆದ ಮೇಲೆ 3 ವರ್ಷಗಳ ಆರ್ಟಿಕಲ್‌ಶಿಪ್‌ ಒಂದು ಗುರುಕುಲ ಪದ್ಧತಿಯಂತೆ. ಅವರಿಗೆ ಎಲ್ಲ ರೀತಿಯ ಅಗತ್ಯ ಜ್ಞಾನ ದೊರೆಯುತ್ತದೆ. ಸಿಎಗಳಿಗೆ ವಿದೇಶದಲ್ಲಿಯೂ ಬೇಡಿಕೆ ಇದೆ. ಬೇರೆ ದೇಶಗಳೊಂದಿಗೆ ಒಡಂಬಡಿಕೆಯೂ ಇದೆ. ಅಲ್ಲಿಯೂ ಮಾನ್ಯತೆ ಇದೆ. ಗಲ್ಫ್ ದೇಶಗಳಲ್ಲಿಯೂ ಭಾರತೀಯ ಲೆಕ್ಕಪರಿಶೋಧಕರಿಗೆ ಬೇಡಿಕೆ ಇದೆ. ಪಿಯುಸಿ ಆದ ಮೇಲೆ ಹಗಲು ಆರ್ಟಿಕಲ್‌ಶಿಪ್‌ ಮಾಡಿ ರಾತ್ರಿ ಕಾಲೇಜಿನಲ್ಲಿ ಪದವಿ ಮಾಡಬಹುದು. ಪದವಿ ಆದ ಅನಂತರ ಆರ್ಟಿಕಲ್‌ಶಿಪ್‌ ಮಾಡುವವರಿಗೆ ಕೋಚಿಂಗ್‌ ಇರುತ್ತದೆ. ವಾರದ ಕೊನೆಗೂ ಕೋಚಿಂಗ್‌ ಇರುತ್ತದೆ. ಮೇ ಮತ್ತು ನವೆಂಬರ್‌ನಲ್ಲಿ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಆಗುತ್ತದೆ. ಮೇಯ ಫ‌ಲಿತಾಂಶ ಜುಲೈ ಕೊನೆಗೆ. ನವೆಂಬರ್‌ನ ಫ‌ಲಿತಾಂಶ ಜನವರಿಗೆ ಬರುತ್ತದೆ. ಇದು ಅತ್ಯಂತ ಕಡಿಮೆ ಖರ್ಚಿನ ಕೋರ್ಸ್‌. ಶಿಷ್ಯವೇತನ ಕೂಡ ದೊರೆಯುತ್ತದೆ. ಸಿಎ ಕೋರ್ಸ್‌ಗೆ 3 ವರ್ಷದ ಕೋರ್ಸ್‌ಗೆ 60,000 ರೂ. ಖರ್ಚಾಗಬಹುದು ಎನ್ನುತ್ತಾರೆ ಸಿಎ ಎಸ್‌.ಎಸ್‌.ನಾಯಕ್‌.

ಹಣಕಾಸು ಆರೋಗ್ಯ ನೋಡಿ ಕೊಳ್ಳುವವರು
ವೈದ್ಯರು ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುತ್ತಾರೆ. ಸಿಎಗಳು ಉದ್ಯಮಿಗಳು, ದೇಶದ ಹಣಕಾಸಿನ ಆರೋಗ್ಯ ನೋಡಿಕೊಳ್ಳುತ್ತಾರೆ. ಸಿಎ ತೇರ್ಗಡೆಗೆ ನಿರಂತರ ಪರಿಶ್ರಮ, ಆಳವಾದ ಆಧ್ಯಯನ ಬೇಕು. ಬಾಯಿಪಾಠಕ್ಕಿಂತ ವಿಷಯದ ತಿಳಿವಳಿಕೆ ಅಗತ್ಯ. ಏಕಾಗ್ರತೆಯೂ ಮುಖ್ಯ. ವಾಣಿಜ್ಯ ವಿಷಯ ಕಲಿತವರಿಗೆ ಹೆಚ್ಚು ಅನುಕೂಲ. ಮಂಗಳೂರು ಶಾಖೆಯಲ್ಲಿ 700ಕ್ಕೂ ಅಧಿಕ ಮಂದಿ ಚಾರ್ಟರ್ಡ್‌ ಅಕೌಂಟೆಂಟ್‌ ತೇರ್ಗಡೆಯಾದವರು ನೋಂದಣಿಯಾಗಿದ್ದಾರೆ. 3,700 ಮಂದಿ ವಿದ್ಯಾರ್ಥಿಗಳು ನೋಂದಾಯಿಸಲ್ಪಟ್ಟಿದ್ದಾರೆ.
– ಸಿ.ಎ ಎಸ್‌.ಎಸ್‌. ನಾಯಕ್‌,
ಅಖೀಲ ಭಾರತ ಲೆಕ್ಕಪರಿಶೋಧಕರ ಸಂಸ್ಥೆ, ಮಂಗಳೂರು ಶಾಖೆಯ ಉಪಾಧ್ಯಕ್ಷ

-  ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

6-bng

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.