ಬುರ್ಜ್ ಖಲೀಫಾದ ವೀಕ್ಷಣಾ ಜಗಲಿ ಮಾರಾಟ!
Team Udayavani, Dec 25, 2019, 1:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದುಬಾೖ: ದುಬಾೖ ಎಮರ್ ಪ್ರಾಪರ್ಟೀಸ್ ತನ್ನ ವಿಶ್ವದಲ್ಲೇ ಅತಿ ಎತ್ತರ ಗಗನಚುಂಬಿ ಕಟ್ಟಡದ ವೀಕ್ಷಣಾ ಜಗಲಿಯನ್ನು 1 ಬಿಲಿಯನ್ ಡಾಲರ್‌ಗೆ (7,000 ಕೋಟಿ ರೂ.) ಮಾರಾಟ ಮಾಡಿದೆ ಎಂದು ಮೂಲಗಳು ತಿಳಿಸಿವೆ.
828 ಅಡಿ ಎತ್ತರದ ಬುರ್ಜ್ ಖಲೀಫಾ ವಿಶ್ವದ ಆಕರ್ಷಕ ಪ್ರವಾಸಿ ತಾಣವಾಗಿದೆ. 2018ರಲ್ಲಿ 15 ಕೋಟಿ ಮಂದಿ ಈ ವಿಶ್ವವಿಖ್ಯಾತ ಕಟ್ಟಡವನ್ನು ವೀಕ್ಷಿಸಿದ್ದರು. ಇದರ ತುತ್ತ ತುದಿಯಲ್ಲಿರುವ ವೀಕ್ಷಣಾ ಜಗಲಿಯಲ್ಲಿ ನಿಂತು ದುಬಾೖನ ಸೌಂದರ್ಯವನ್ನು ಸವಿಯಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ವರ್ಷ ಟಿಕೆಟ್ ದರದಿಂದ ಸುಮಾರು ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಇದು ನ್ಯೂಯಾರ್ಕ್‌ನ ಎಂಪೈರ್ ಕಟ್ಟಡಕ್ಕಿಂತ ಎರಡು ಪಟ್ಟು, ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಮೂರು ಪಟ್ಟು ಎತ್ತರ ಇದೆ. 300ಕ್ಕೂ ಅಧಿಕ ಬಹುಮಹಡಿ ಕಟ್ಟಡಗಳನ್ನು ಹೊಂದಿದೆ. ರಿಯಲ್ ಎಸ್ಟೇಟ್ ಕುಸಿತದಿಂದಾಗಿ ದುಬಾೖ ಎಮರ್ ಪ್ರಾಪರ್ಟೀಸ್ ಈಗ ಈ ವೀಕ್ಷಣಾ ಜಗಲಿಯನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ನವೆಂಬರ್‌ನಲ್ಲೇ ಮಾರಾಟ ಪ್ರಕ್ರಿಯೆ ಶುರುವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.