ಧ್ವನಿ-ಬೆಳಕು ವೈಭವಕ್ಕೆ ಸಿದ್ಧತೆ ಜೋರು
ಜ. 10ರಿಂದ ನಡೆಯಲಿರುವ ಕಾರ್ಯಕ್ರಮ | ಹಂಪಿ ಗಜ ಶಾಲೆ ಸ್ಮಾರಕದ ಆವರಣದಲ್ಲಿ ರಂಗ ವೇದಿಕೆ ಸಜ್ಜು
Team Udayavani, Dec 25, 2019, 12:54 PM IST
ಪಿ.ಸತ್ಯನಾರಾಯಣ
ಹೊಸಪೇಟೆ: ಐತಿಹಾಸಿಕ ಹಂಪಿಯಲ್ಲಿ ಜನವರಿ 11 ಮತ್ತು 12 ರಂದು ನಡೆಯಲಿರುವ ಹಂಪಿ ಉತ್ಸವಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಉತ್ಸವದ ಜನಾಕರ್ಷಣೆಯ ಭಾಗವಾದ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಹಂಪಿ ಗಜಶಾಲೆ ಸ್ಮಾರಕದ ಆವರಣದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ.
ಜ. 10ರಿಂದ 16ರವರೆಗೆ ರಾತ್ರಿ 7ರಿಂದ 9ರವರೆಗೆ ನಡೆಯಲಿರುವ ಧ್ವನಿ ಬೆಳಕು ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಾಣಕ್ಕಾಗಿ ಮಂಗಳವಾರ ಅಗತ್ಯ ಸಾಮಗ್ರಿಗಳೆಲ್ಲ ಬಂದಿದ್ದು, ಬುಧವಾರದಿಂದ ವೇದಿಕೆ ನಿರ್ಮಾಣ, ಲೈಟಿಂಗ್ ಅಳವಡಿಕೆ ಎಲ್ಲ ಚುರುಕುಗೊಳ್ಳಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಹೊಣೆ ಹೊತ್ತಿರುವ ನವದೆಹಲಿಯ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದಿಂದ ಧ್ವನಿ ಪೆಟ್ಟಿಗೆಗಳು, ವೇಷ-ಭೂಷಣ ಸಾಮಗ್ರಿ ಹಾಗೂ ವೇದಿಕೆ ನಿರ್ಮಾಣಕ್ಕಾಗಿ ಅಗತ್ಯವಿರುವ ನಾನಾ ಪರಿಕರಗಳನ್ನು ತರಲಾಗಿದೆ. ತಂತ್ರ ಜ್ಞರು ಹಾಗೂ ನುರಿತ ಕಾರ್ಮಿಕರು ಆಗಮಿಸಿದ್ದು, ಕಾರ್ಯ ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನೂರು ಜನ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಏಳು ದಿನಗಳ ಕಾಲ ಅವರಿಗೆ ತರಬೇತಿ ನೀಡಿ ಬಳಿಕ ಪ್ರದರ್ಶನ ನೀಡಲಾಗುತ್ತದೆ.
ಈ ಧ್ವನಿ ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಕಟ್ಟಿಕೊಡಲಿದೆ. ಮನರಂಜನೆ ಜತೆಗೆ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೋಡುಗರ ಕಣ್ಣೆದುರು ತೆರೆದಿಡಲಾಗುತ್ತದೆ. ಹೀಗಾಗಿ ಧ್ವನಿ ಮತ್ತು ಬೆಳಕು ವೈಭವ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ರಾತ್ರಿ ವೇಳೆ ಹಂಪಿ ಸ್ಮಾರಕಗಳ ಮೆರಗು ಹೆಚ್ಚಿಸಲು ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಹಂಪಿ ಬೈ-ನೈಟ್ ಬೆಳಕಿನ ವ್ಯವಸ್ಥೆಗೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಇನೋವೇಟಿವ್ ಕ್ರಿಯೇಷನ್ಸ್ ಹಂಪಿ
ಬೈ-ನೈಟ್ ನಿರ್ವಹಣೆ ಹೊಣೆ ಹೊತ್ತು ಕೆಲಸ ಮಾಡು ತ್ತಿ ದೆ. ಜ.7ರಿಂದ ಹಂಪಿ ಬೈ ನೈಟ್ ಪ್ರಾರಂಭವಾಗಲಿದೆ. 125ಕ್ಕೂ ಹೆಚ್ಚು ಕಲಾವಿದರೂ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಉತ್ಸವದ ಸಿದ್ಧತಾ ಕಾರ್ಯಗಳನ್ನು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್.ಲೋಕೇಶ್ ಹಾಗೂ ತಾಂತ್ರಿಕ ವಿಭಾಗದ ರವೀಂದ್ರ ಪರಿಶೀಲಿಸುತ್ತಿದ್ದಾರೆ.
ಹಂಪಿ ಉತ್ಸವ ಅಂಗವಾಗಿ ವಿಜಯನಗರ ವೈಭವ ಧ್ವನಿ ಬೆಳಕು ಹಾಗೂ ಹಂಪಿ ಬೈ-ನೈಟ್ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ಇದಕ್ಕೆ ಅಗತ್ಯವಾಗಿರುವ ಎಲ್ಲ ಸಾಮಾನು ಸರಂಜಾಮುಗಳು ಬಂದಿವೆ.
ಪಿ.ಎನ್.ಲೋಕೇಶ್,
ಅಧ್ಯ ಕ್ಷರು,
ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಅನುಷ್ಠಾನ ಸಮಿತಿ, ಹಂಪಿ
ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕಾಗಿ ನೂರು ಜನ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಿ ಕಲಾವಿದರ ಆಯ್ಕೆ ಮಾಡಿ ಅವರಿಗೆ ಏಳು ದಿನ ತರಬೇತಿ ನೀಡಲಾಗುವುದು.
ಎಲ್.ಡಿ.ಜೋಷಿ,
ಕಾರ್ಯದರ್ಶಿ, ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಅನುಷ್ಠಾನ ಸಮಿತಿ, ಹಂಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.