ಶಾಲಾ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದವ ಸಹಪಾಠಿಗಳ ಧೈರ್ಯ ಕಂಡು ಕಾಲ್ಕಿತ್ತ !
ಮಕ್ಕಳ ಸಮಯಪ್ರಜ್ಞೆಯಿಂದ ಉಳಿಯಿತು ವಿದ್ಯಾರ್ಥಿನಿಯ ಮಾನ-ಪ್ರಾಣ
Team Udayavani, Dec 25, 2019, 6:36 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸುಬ್ರಹ್ಮಣ್ಯ: ಮಕ್ಕಳು ಕೆಲವು ಬಾರಿ ಮಾಡುವ ಸಣ್ಣ ಕೆಲಸಗಳೂ ಬೆಲೆ ಕಟ್ಟಲಾಗದಷ್ಟು ಮಹತ್ವ ಪಡೆದಿರುತ್ತವೆ. ಮಕ್ಕಳ ಸಮಯಪ್ರಜ್ಞೆ ಕೆಲವೊಮ್ಮೆ ಒಂದು ಜೀವವನ್ನೇ ಉಳಿಸುವಲ್ಲಿ ನೆರವಾಗತ್ತದೆ. ಈ ಮಾತಿಗೆ ಪೂರಕವೆಂಬಂತೆ ಒಂದು ಘಟನೆ ಸುಬ್ರಹ್ಮಣ್ಯ ಸಮೀಪದ ಎಡಮಂಗಲದ ದೋಳ್ಪಾಡಿ ಎಂಬಲ್ಲಿ ನಡೆದಿದೆ.
ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಸರಕಾರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಡಿಸೆಂಬರ್ 14ರಂದು ಅತ್ಯಾಚಾರ ಪ್ರಯತ್ನ ನಡೆದಿತ್ತು. ಸಂತ್ರಸ್ತ ಬಾಲಕಿ ಶಾಲೆಯಿಂದ ಸಂಜೆ ಮನೆಗೆ ವಾಪಸ್ಸಾಗುತಿದ್ದ ವೇಳೆ ಮರಕ್ಕಡ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವ ವಿದ್ಯಾರ್ಥಿಯನ್ನು ತಡೆದು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಚಾರಕ್ಕೆ ಯತ್ನಿಸಿದ್ದ.
ಈ ಸಂದರ್ಭದಲ್ಲಿ ಬಾಲಕಿಯ ಜೊತೆಯಲ್ಲೇ ಆಕೆಯ ಹಿಂದಿನಿಂದ ತೆರಳುತಿದ್ದ ಎಂಟು ಮಂದಿ ಸಹಪಾಠಿಗಳು ಇದನ್ನು ಗಮನಿಸಿದರು. ಮತ್ತು ಅವರಲ್ಲಿ ಇಬ್ಬರು ಸಹೋದರರು ಆ ಕಠಿಣ ಸಂದರ್ಭದಲ್ಲಿ ಮೆರೆದ ಸಮಯ ಪ್ರಜ್ಞೆ ಆಕೆಯ ಪ್ರಾಣವನ್ನು ರಕ್ಷಿಸಿದೆ.
ಏನು ನಡೆಯಿತು ಆ ದಿನ?
ಡಿ.14ರಂದು ದೋಳ್ಪಾಡಿ ಸರಕಾರಿ ಶಾಲೆ ಮಕ್ಕಳು ಸಂಜೆ ಶಾಲೆ ಬಿಟ್ಟು ಮನೆಗೆ ವಾಪಸ್ಸಾಗುತಿದ್ದರು. ಅದೇ ಶಾಲೆಯ ಐದನೆ ತರಗತಿ ವಿದ್ಯಾರ್ಥಿನಿ ಸ್ವಲ್ಪ ಮುಂದಿನಿಂದ ಹೋಗುತ್ತಿದ್ದಳು. ಆಕೆಯ ಹಿಂದಿಂದ ಆಕೆಯ ಎಂಟು ಮಂದಿ ಸಹಪಾಠಿಗಳು ಗುಂಪಾಗಿ ತೆರಳುತಿದ್ದರು.
ಬಾಲಕಿಯಿದ್ದ ಸ್ಥಳಕ್ಕೆ ಆಕೆಯ ಸಹಪಾಠಿಗಳ ಗುಂಪು ತಲುಪಿದಾಗ ಬಾಲಕಿಯನ್ನು ವ್ಯಕ್ತಿಯೋರ್ವ ಮಾತಾಡಿಸಿ ಆಕೆಯನ್ನು ಎತ್ತಿಕೊಂಡು ರಸ್ತೆಯ ಎಡಭಾಗದ ಕೆಳಗಿನ ಗುಡ್ಡಕ್ಕೆ ಕರೆದೊಯ್ಯುದನ್ನು ಮಕ್ಕಳು ಗಮನಿಸಿದ್ದಾರೆ. ಈ ಘಟನೆಯಿಂದ ಹೆದರಿದ ಮಕ್ಕಳು ಆ ವ್ಯಕ್ತಿಯನ್ನು ಹಿಂಬಾಲಿಸಿ ರಸ್ತೆಯಿಂದ ಕೆಳಗಿಳಿದು ಘಟನಾ ಸ್ಥಳಕ್ಕೆ ಈ ಮಕ್ಕಳು ಹೋಗಿ ನೋಡುವ ಹೊತ್ತಿಗೆ ವ್ಯಕ್ತಿ ಆಕೆಯನ್ನು ಪೊದೆಯಲ್ಲಿ ಮಲಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ, ಬಾಯಿಗೆ ಬಟ್ಟೆ ತುರುಕುತಿದ್ದ.
ಸಂತ್ರಸ್ತೆ ವಿದ್ಯಾರ್ಥಿನಿ ವ್ಯಕ್ತಿಯ ದೌರ್ಜನ್ಯಕ್ಕೆ ನಲುಗಿ ಒದ್ದಾಡುತಿದ್ದದನ್ನು ಕಂಡ ಮಕ್ಕಳ ಗುಂಪಿನಲ್ಲಿದ್ದ 11 ವರ್ಷದ ಅಕ್ಷಯ್ ತುಳು ಭಾಷೆಯಲ್ಲಿ ‘ಅಪ್ಪಗ್ ಪಂಡ್ದ್, ಇತ್ತೆ ಅಪ್ಪನ್ ಲೆತೊಂದು ಬರ್ಪೆ, ಆಯಗ್ ಕಲ್ಪಾಪೆ…’ (ಅಪ್ಪನಿಗೆ ಹೇಳಿ ಈಗ ಅಪ್ಪನ್ನನ್ನು ಕರೆದುಕೊಂಡು ಬರ್ತೇನೆ ಮತ್ತು ಕಲಿಸ್ತೇನೆ ಅವನಿಗೆ…!) ಎಂದು ಹೇಳಿ ತನ್ನ ಸಹಪಾಠಿಗಳನ್ನು ಅಲ್ಲಿಯೇ ಇರಲು ಸೂಚಿಸಿ ಆತ ಮತ್ತು ಸಹೋದರ ಅನ್ವಿತಾ (ವಯಸ್ಸು 8) 300 ಮೀ ದೂರದಲ್ಲಿರುವ ಮನೆಗೆ ಓಡಿ ಹೋಗಿ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಪಕ್ಕದ ಕಾಡಿನಲ್ಲಿ ಸೊಪ್ಪು ಸಂಗ್ರಹಿಸುತಿದ್ದ ಮಕ್ಕಳಿಬ್ಬರ ತಾಯಿ ಹರ್ಷಪ್ರಭ ವಿಷಯ ತಿಳಿದು ಪಕ್ಕದ ಮನೆಯವರಿಗೆ ತಿಳಿಸಿ ಅವರನ್ನೆಲ್ಲಾ ಕರೆದುಕೊಂಡು ಘಟನಾ ಸ್ಥಳಕ್ಕೆ ಓಡಿ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ಬೊಬ್ಬೆ ಹಾಗೂ ಮಕ್ಕಳಿಬ್ಬರು ‘ತಂದೆಯನ್ನು ಕರೆದುಕೊಂಡು ಬರುತ್ತೇನೆ…’ ಎಂದು ಹೇಳಿದ್ದರಿಂದ ಬೆದರಿದ ಆರೋಪಿ ಕಂಗಾಲಾಗಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಬಾಲಕಿಯ ದೇಹದ ಮೇಲೆ ಪರಚಿದ ಗಾಯಗಳಾಗಿತ್ತು.
ಈ ವಿಷಯ ಊರಲ್ಲಿ ತಿಳಿಯುತ್ತಿದ್ದಂತೆ ಎಲ್ಲರೂ ಸೇರಿಕೊಂಡು ಪರಾರಿಯಾದ ಆರೋಪಿಯ ಹುಡುಕಾಟಕ್ಕೆ ಯತ್ನಿಸುತ್ತಾರೆ. ಸಂತ್ರಸ್ತ ಬಾಲಕಿಯ ಹೆತ್ತವರು ಕಡಬ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದರು.
ಹೆತ್ತವರ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಕಡಬ ಪೊಲೀಸರು ಎಡಮಂಗಲ ಗ್ರಾಮದ ಕೊಳಂಬೆ ನಿವಾಸಿ 34 ವರ್ಷದ ಶಿವರಾಮ್ ಎನ್ನುವ ಆರೋಪಿಯನ್ನು ಡಿಸೆಂಬರ್ 16 ಸೋಮವಾರದಂದು ಆತನ ಮನೆಯಿಂದಲೇ ಬಂಧಿಸುತ್ತಾರೆ. ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆ ವ್ಯತಿರಿಕ್ತ ಸನ್ನಿವೇಶದಲ್ಲಿಯೂ ಶಾಲಾ ಬಾಲಕರು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಡಿ.25ರಂದು ಸ್ಥಳಿಯವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಎಂಟು ಮಂದಿ ಮಕ್ಕಳನ್ನು ಅವರ ಈ ವಿಶಿಷ್ಟ ಸಾಧನೆಗಾಗಿ ಸಮ್ಮಾನಿಸಲಾಯಿತು. ಮುಗ್ಧ ಮನಸ್ಸಿನ ಮಕ್ಕಳ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹದಾಗಿದ್ದ ಸಂಭಾವ್ಯ ಅನಾಹುತವೊಂದು ತಪ್ಪಿದ್ದು ಸಂತ್ರಸ್ತ ಬಾಲಕಿಯ ಹೆತ್ತವರು ನಿಟ್ಟುಸಿರುಬಿಟುವಂತಾಗಿದೆ.
ಆಪತ್ತಿನ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸಮಯಪ್ರಜ್ಞೆ ಮೆರೆಯಬೇಕೆಂಬುದುನ್ನು ಈ ಪುಟಾಣಿಗಳು ತೋರಿಸಿಕೊಟ್ಟಿರುವುದು ವಿಶೇಷವೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.