ಸರ್ಕಾರಿ ಪದವಿ ಕಾಲೇಜುಗಳಲ್ಲಿನ್ನು ಲ್ಯಾಂಗ್ವೇಜ್ ಲ್ಯಾಬ್
Team Udayavani, Dec 26, 2019, 3:10 AM IST
ಬೆಂಗಳೂರು: ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಲ್ಯಾಬ್ ಮಾದರಿಯಲ್ಲೇ ಇನ್ನು ಮುಂದೆ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾಷಾ ಪ್ರಯೋಗಾಲಯ (ಲ್ಯಾಂಗ್ವೇಜ್ ಲ್ಯಾಬ್) ತೆರೆಯಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಿಜ್ಞಾನದ ವಿವಿಧ ಪ್ರಯೋಗಗಳಿಗಾಗಿ ವಿದ್ಯಾರ್ಥಿಗಳು ಲ್ಯಾಬ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆ ಹೆಚ್ಚಿಸಲು, ಅದರಲ್ಲೂ ಇಂಗ್ಲಿಷ್ ಸಂವಹನ ಮತ್ತು ಕೌಶಲ್ಯತೆ ವೃದ್ಧಿಗೆ ಲ್ಯಾಂಗ್ವೇಜ್ ಲ್ಯಾಬ್ ತೆರೆಯುವ ಪ್ರಕ್ರಿಯೆ ಆರಂಭವಾಗಿದೆ.
ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎಸ್ಸಿ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ವಿಜ್ಞಾನ ಲ್ಯಾಬ್ ಇರುತ್ತದೆ ಮತ್ತು ಅದನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. ವಾಣಿಜ್ಯ ವಿಭಾಗದ ಕೆಲವು ಕೋರ್ಸ್‌ಗಳಿಗೆ ಮತ್ತು ವಿಜ್ಞಾನ ವಿಭಾಗದ ಕೆಲವು ಕೋರ್ಸ್‌ಗಳಿಗೆ ಕಂಪ್ಯೂಟರ್ ಅಪ್ಲಿಕೇಷನ್ ಪಠ್ಯ ಇರುತ್ತದೆ. ಇದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಕೆಲವು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಬ್ ಉಪಯೋಗಿಸಲು ಪೂರಕವಾಗುತ್ತದೆ.
ಆದರೆ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಬ್ ಬಳಕೆ ಕಡಿಮೆ. ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಕೆಲವೊಂದು ಕೋರ್ಸ್‌ಗಷ್ಟೇ ಲ್ಯಾಬ್‌ಗಳ ಬಳಕೆ ಇರುತ್ತದೆ. ಹೀಗಾಗಿ, ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಮುಖ್ಯವಾಗಿಟ್ಟುಕೊಂಡು ಲ್ಯಾಂಗ್ವೇಜ್ ಲ್ಯಾಬ್ ಆರಂಭಿಸುತ್ತಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ರಾಜ್ಯದ ಕೆಲವೊಂದು ಕಾಲೇಜುಗಳಲ್ಲಿ ಈಗಾಗಲೇ “ಲ್ಯಾಂಗ್ವೇಜ್ ಲ್ಯಾಬ್’ ಆರಂಭಿಸುವ ಪ್ರಕ್ರಿಯೆ ಶುರುವಾಗಿದೆ. ಸರ್ಕಾರಿ ಕಾಲೇಜುಗಳು ಸ್ಥಳೀಯ ಸಂಘ ಸಂಸ್ಥೆ ಅಥವಾ ಇತರ ಮೂಲಗಳ ಸಹಯೋಗದೊಂದಿಗೆ “ಲ್ಯಾಂಗ್ವೇಜ್ ಲ್ಯಾಬ್’ ಆರಂಭಿಸುತ್ತಿದ್ದಾರೆ. ಆದರೆ, ಲ್ಯಾಬ್ ಹೇಗಿರಬೇಕು ಮತ್ತು ಅದರ ಕಾರ್ಯನಿರ್ವಹಣೆಯ ಮಾಹಿತಿಯನ್ನು ಇಲಾಖೆಯಿಂದಲೇ ನೀಡಲಾಗುತ್ತದೆ ಎಂದು ಅಧಿಕಾರಿ ವಿವರ ನೀಡಿದರು.
ಹೊಸ ಸಾಫ್ಟ್ವೇರ್: “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಭಾಷೆಯ ಅಧ್ಯಯನ ಮಾಡುತ್ತಾರೆ. ಆರಂಭಿಕ ಹಂತದಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಇಂಗ್ಲಿಷ್ ವ್ಯಾಕರಣ, ಇಂಗ್ಲಿಷ್‌ನಲ್ಲಿ ಸಂವಾದ ಮಾಡುವುದು, ವಾಕ್ಯಗಳ ಜೋಡಣೆ, ಕ್ಲಿಷ್ಟಕರ ಪದದ ಉಚ್ಛಾರಣೆ ಇತ್ಯಾದಿ ಎಲ್ಲವನ್ನು ಸಾಫ್ಟ್ವೇರ್ ಮೂಲಕ ಅತ್ಯಂತ ಸುಲಭವಾಗಿ ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದಾಗಿದೆ.
ರಾಜ್ಯದ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಇಂಗ್ಲಿಷ್ ಭಾಷೆಯ ತರಬೇತಿ ನೀಡುವ ಪ್ರಾದೇಶಿಕ (ದಕ್ಷಿಣ ಭಾರತ)ಇಂಗ್ಲಿಷ್ ಸಂಸ್ಥೆಯು ಹೊಸ ಸಾಫ್ಟ್ವೇರ್ ಸಿದ್ಧಪಡಿಸಿ, ಇಲಾಖೆಗೆ ನೀಡಿದೆ. ಆ ಸಾಫ್ಟ್ವೇರ್‌ಗಳನ್ನು ಕಾಲೇಜಿನ “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿರುವ ಕಂಪ್ಯೂಟರ್‌ಗಳಿಗೆ ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳು ಯಾರ ಸಹಾಯವೂ ಇಲ್ಲದೇ ಅತ್ಯಂತ ಸುಲಭವಾಗಿ ಇಂಗ್ಲಿಷ್ ಭಾಷೆ ಕಲಿಯಲು ಇದು ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಆಸಕ್ತಿಯಂತೆ ವಿಸ್ತರಣೆ: ಸದ್ಯ “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ ಮತ್ತು ಅವರ ಬೇಡಿಕೆಗೆ ಅನುಗುಣವಾಗಿ, ಭವಿಷ್ಯದಲ್ಲಿ ಉದ್ಯೋಗಕ್ಕೂ ಪೂರಕವಾಗುವಂತೆ ವಿವಿಧ ವಿದೇಶಿ ಭಾಷೆಗಳನ್ನು ಜೋಡಿಸುವ ಯೋಚನೆಯಿದೆ. ಆದರೆ, ವಿದ್ಯಾರ್ಥಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಮತ್ತು ಬೇಡಿಕೆ ಬರುತ್ತದೆ ಎಂಬುದರ ಮೇಲೆ ಇದು ನಿರ್ಧರವಾಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಹೊಸ ಐದು ಕೋರ್ಸ್‌ಗಾಗಿ ಚರ್ಚೆ: ಕೌಶಲ್ಯಾಧಾರಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೌಶಲ್ಯಯುಕ್ತ ಅಪ್ರಂಟಿಷಿಪ್ ಆಧಾರಿತ 5 ಸ್ನಾತಕ ಹಾಗೂ 1 ಸ್ನಾತಕೋತ್ತರ ಕೋರ್ಸ್‌ಗಳನ್ನು ಬಿಕಾಂ, ಬಿಬಿಎಂ ಪದವಿಗೆ ಪರಿಚಯಿ ಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ರಾಜ್ಯದ 50 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರ ಸಭೆಯನ್ನು ನಾಳೆ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.