![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 26, 2019, 5:18 PM IST
ಹಾವೇರಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಶಾಂತಿಧೂತ ಏಸು ಕ್ರಿಸ್ತನ ಜಯಂತಿ ಅಂಗವಾಗಿ ಜಿಲ್ಲೆಯಾದ್ಯಂತ ಬುಧವಾರ ಕ್ರಿಸ್ ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ-ಸಂಭ್ರಮದಿಂದ ಆಚರಿಸಿದರು.ಕ್ರೈಸ್ತ ಸಮಾಜದ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟ್
ಪಂಥಗಳ ಅನಿಯಾಯಿಗಳು ಚರ್ಚ್‌ಗಳಲ್ಲಿ ಮೊಂಬತ್ತಿಗಳನ್ನು ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಜೋಸೆಫ್ ಹಾಗೂ ಮೇರಿ ಅವರಿಗೆ ನಮಿಸಿದರು.
ಕೆಲವರು ಮನೆಗಳಲ್ಲಿಯೇ ಗೋದಲಿ ನಿರ್ಮಿಸಿ, ವಿದ್ಯುದಲಂಕಾರ ಮಾಡಿ ಯೇಸು ಜಯಂತಿಯ ಸಂಭ್ರಮ ಮೆರೆದರು. ಕ್ರೈಸ್ತ ಬಾಂಧವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಿಹಿ ವಿತರಿಸಿ ಸಂಭ್ರಮಿಸಿದರು. ನಗರದ ಸೇಂಟ್ ಜಾನ್ಸ್ ಚರ್ಚ್‌ನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ನಗರದ ದೇವಧರ ಆಸ್ಪತ್ರೆ ಆವರಣದಲ್ಲಿನ ಗುರು ಕೃಪಾ ಚರ್ಚ್‌ನಲ್ಲಿ ಬಿಶಫ್ (ಫಾದರ್) ನೇತೃತ್ವದಲ್ಲಿ ಕ್ರೈಸ್ತ್ ಸಮಾಜ ಬಾಂಧವರು ಮೇಣದ ಬತ್ತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ನಿಮಿತ್ತ ನಗರದ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ನಲ್ಲಿ ನಿರ್ಮಿಸಿದ್ದ ಕ್ರಿಸ್‌ಮಸ್ ಟ್ರೀ ಗಮನ ಸೆಳೆದವು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

You seem to have an Ad Blocker on.
To continue reading, please turn it off or whitelist Udayavani.