ಹಂಪಿ ಉತ್ಸವ ಜನಪರವನ್ನಾಗಿಸಲು ಶ್ರಮಿಸಿ: ಜಿಲ್ಲಾಧಿಕಾರಿ


Team Udayavani, Dec 26, 2019, 6:32 PM IST

26-December-28

ಬಳ್ಳಾರಿ: ಜ. 10 ಮತ್ತು 11ರಂದು ನಡೆಯಲಿರುವ ಹಂಪಿ ಉತ್ಸವದ ಯಶಸ್ಸಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿಗಳು ಇದುವರೆಗಿನ ಕೈಗೊಂಡಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹಂಪಿ ಉತ್ಸವವನ್ನು ಜನರ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಂಪಿ ಉತ್ಸವಕ್ಕೆ ಸಂಬಂಧಿ ಸಿದ ಸಿದ್ಧತಾ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಛಾಯಾಚಿತ್ರ, ಕ್ರೀಡೆ, ಮಳಿಗೆಗಳು, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮಗಳ ಅರ್ಜಿಗಳನ್ನು ಕೂಡಲೇ ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಪ್ರಚುರಪಡಿಸಬೇಕು. ತೀರ್ಪುಗಾರರಾಗಿ ಭಾಗವಹಿಸುವವರ ಸಂಬಂಧಿ ಗಳು ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದರೇ ಅಂತಹ ಸ್ಪರ್ಧಿಗಳು ಆ ತೀರ್ಪುಗಾರ ಸ್ಥಾನದಿಂದ ಹಿಂದೆ ಸರಿಯಬೇಕು ಎಂದರು.

ಹಂಪಿ ಉತ್ಸವ ಮುಗಿದ ನಂತರ ಉತ್ಸವದಲ್ಲಿ ಭಾಗವಹಿಸಿದ್ದೇವೆ. ಹಣ ನೀಡಿ ಎಂದು ಯಾರು ಜಿಲ್ಲಾಧಿಕಾರಿಗಳ ಕಚೇರಿಯತ್ತ ಅಲೆದಾಡಿಸುವುದು ಮಾಡಬಾರದು. ಯಾವ್ಯಾವ ಸಮಿತಿಗಳಿಗೆ ಎಷ್ಟು ಹಣ ಬೇಕೋ ಅದರ ಅಂದಾಜು ವೆಚ್ಚ ಸಲ್ಲಿಸಬೇಕು ಎಂದು ತಿಳಿಸಿದರು.

ನಾಲ್ಕು ವೇದಿಕೆಗಳ ನಿರ್ಮಾಣ: ಗಾಯತ್ರಿಪೀಠದ ಹತ್ತಿರ ನಿರ್ಮಿಸಲಾಗುವ ಶ್ರೀ ಕೃಷ್ಣದೇವರಾಯ ವೇದಿಕೆ, ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪತಿ ದೇವಸ್ಥಾನ ಬಳಿ ಸೇರಿ ಒಟ್ಟು ನಾಲ್ಕು ವೇದಿಕೆಗಳನ್ನು ಈ ಬಾರಿ ನಿರ್ಮಿಸಲಾಗುತ್ತಿದೆ. ವೇದಿಕೆಗಳಿಗೆ ಉಸ್ತುವಾರಿ ವಹಿಸಿ ನೋಡಲ್‌ ಅಧಿ ಕಾರಿಗಳನ್ನು ನೇಮಿಸಲಾಗಿದೆ.

ಅವರು ಆ ವೇದಿಕೆಗಳ ನೋಡಲ್‌ ಅಧಿಕಾರಿಗಳು ಟ್ರೋಫಿ, ಪ್ರಮಾಣಪತ್ರಗಳು ಎಷ್ಟು ಬೇಕು ಎಂಬುದರ ಅಂಕಿ-ಸಂಖ್ಯೆಯ ವಿವರ ಒದಗಿಸಬೇಕು. ಪ್ರತಿಯೊಂದು ದಿನ ನಿಗದಿತ ವೇಳೆಗೆ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಳ್ಳಬೇಕು. ಕಾಣೆಯಾದ ಮಕ್ಕಳ ಸಹಾಯಕ್ಕಾಗಿ ಕಂಟ್ರೋಲ್‌ ರೂಂ ವ್ಯವಸ್ಥೆ ಮಾಡತಕ್ಕದ್ದು ಎಂಬುದು ಸೇರಿದಂತೆ ವೇದಿಕೆಗಳ ಉಸ್ತುವಾರಿಗಳಿಗೆ ವಹಿಸಲಾದ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ತುಂಗಾರತಿ ಮಹೋತ್ಸವಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಳ್ಳಬೇಕು. ವಸಂತ ವೈಭವ ಹೊಸಪೇಟೆಯ ವಡಕರಾಯ ದೇವಸ್ಥಾನದಿಂದ ಆರಂಭವಾಗಿ ಕ್ರೀಡಾಂಗಣದವರೆಗೆ ನಡೆಯಲಿದ್ದು, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಲಿದ್ದಾರೆ. ನೂರಾರು ಕಲಾತಂಡಗಳು ಹಾಗೂ ಸಾವಿರಾರು ಜನರು ಈ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಧ್ವನಿ ಬೆಳಕಿನಲ್ಲಿ ಕರ್ನಾಟಕ ವೈಭವ: ಲೋಟಸ್‌ ಮಹಲ್‌ ಹತ್ತಿರದ ಆನೆ ಸಾಲುಮಂಟಪದ ಬಳಿ ಈ ಬಾರಿ ಧ್ವನಿ ಮತ್ತು ಬೆಳಕಿನಲ್ಲಿ ಕರ್ನಾಟಕ ವೈಭವ ಅನಾವರಣಗೊಳ್ಳಲಿದೆ. ಇದಕ್ಕೆ ಬೇಕಾದ ಖುರ್ಚಿಗಳ ವ್ಯವಸ್ಥೆ ಸೇರಿ ಇನ್ನಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿ ನಕುಲ್‌ ಸೂಚಿಸಿದರು.

ಶಿಲಾಶಿಲ್ಪ ಶಿಬಿರ, ಚಿತ್ರಕಲಾ ಶಿಬಿರ, ಆಗಸದಲ್ಲಿ ಹಂಪಿ, ಮತ್ಸ್ಯಮೇಳ, ಛಾಯಾಚಿತ್ರ ಸ್ಪರ್ಧೆ, ಸಾಹಸ ಕ್ರೀಡೆಗಳು, ವಿಚಾರ ಸಂಕಿರಣ, ಕ್ರೀಡೆಗಳು, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಪುಸ್ತಕ ಪ್ರದರ್ಶನ, ರಂಗೋಲಿ, ಮೆಹಂದಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಜವಾಬ್ದಾರಿ ಹೊತ್ತ ಎಲ್ಲ ಅಧಿಕಾರಿಗಳು ಅಚ್ಚುಕಟ್ಟಾಗಿ ಮಾಡುವಂತೆ ತಿಳಿಸಿದರು.

150 ಮಳಿಗೆಗಳ ನಿರ್ಮಾಣ: ಎದುರು ಬಸವಣ್ಣ ಮಂಟಪದ ಹತ್ತಿರವಿರುವ ವಿಶಾಲ ಮೈದಾನದಲ್ಲಿ ಈ ಬಾರಿ 150 ಮಳಿಗೆಗಳನ್ನು ಹಾಕಲಾಗುತ್ತಿದ್ದು, ಅದರಲ್ಲಿ 50 ಮಳಿಗೆಗಳನ್ನು ಪುಸ್ತಕ ಪ್ರಕಾಶನದವರಿಗೆ ಕಾಯ್ದಿರಿಸಲಾಗಿದೆ. ಉಳಿದ ಮಳಿಗೆಗಳಿಗೆ ತಲಾ 2 ಸಾವಿರದಂತೆ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಡಿಸಿ ನಕುಲ್‌ ತಿಳಿಸಿದರು. ಇದರ ಎದುರುಗಡೆಯೇ ಕಳೆದ ಬಾರಿಯಂತೇ ಈ ಬಾರಿಯೂ ಸಹ ಮರಳಿನಲ್ಲಿ ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆಗಳ ವೈಭವ ಅನಾವರಣವಾಗಲಿದೆ.ಇದಕ್ಕಾಗಿ ಒಡಿಸ್ಸಾದಿಂದ ಖ್ಯಾತ ಮರಳುತಜ್ಞರು ಜ. 3ರಿಂದ ಆಗಮಿಸಲಿದ್ದು, ತಮ್ಮ ಕೆಲಸ ಶುರು ಮಾಡಲಿದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕು. ಹೊಸಪೇಟೆ, ಕಮಲಾಪುರದಿಂದ ಹಂಪಿಯ ಕಡೆ ನಿರಂತರ ಬಸ್‌ಗಳ ಸಂಚಾರದ ವ್ಯವಸ್ಥೆ, ಕಂಟ್ರೋಲ್‌ರೂಂಗಳ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಸಭೆಯಲ್ಲಿ ವಿವರಿಸಿದರು.

ಹಂಪಿ ಉತ್ಸವವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದು, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು. ಸಮಿತಿ ನೋಡಲ್‌ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಅಪರ ಜಿಲ್ಲಾ ಧಿಕಾರಿ ಮಂಜುನಾಥ, ಸಹಾಯಕ ಆಯುಕ್ತರಾದ ಶೇಖ್‌ ತನ್ವೀರ್‌ ಅಸೀಫ್‌, ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಸಮಿತಿಗಳ ನೋಡಲ್‌ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.