ಅಂತೂ ಆಸೆ ಈಡೇರಿತು
ಟಾಲಿವುಡ್ ಅಂಗಳದಲ್ಲಿ ರಚಿತಾ ಥೈತಕ
Team Udayavani, Dec 27, 2019, 5:17 AM IST
“ರಚಿತಾ ರಾಮ್ ತೆಲುಗು ಚಿತ್ರರಂಗಕ್ಕೆ ಹೋಗುತ್ತಾರಂತೆ…’
– ಇಂಥದ್ದೊಂದು ಮಾತು ಕಳೆದ ಐದಾರು ವರ್ಷಗಳಿಂದ, ಆಗಾಗ್ಗೆ ರಚಿತಾ ಬಗ್ಗೆ ಕೇಳಿ ಬರುತ್ತಲೇ ಇತ್ತು. ಇನ್ನು ರಚಿತಾ ಕೂಡ ಈಗ ಹೋಗಬಹುದು, ಆಗ ಹೋಗಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದರೂ, ಯಾವ ಚಿತ್ರಗಳೂ ಸೆಟ್ಟೇರಿರಲಿಲ್ಲ. ಆದರೆ ಹೊಸ ವರ್ಷದ ಸಂದರ್ಭದಲ್ಲೆ, ಕೊನೆಗೂ ಆ ಮಾತು ನಿಜವಾಗಿದೆ. ಹೌದು, ರಚಿತಾ ರಾಮ್ ಸದ್ಯ “ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಹೆಸರಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗುತ್ತಿರುವುದು ವಿಶೇಷ.
ಇನ್ನು ಈ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸಾಧು ಕೋಕಿಲ, ಶಿವರಾಜ್.ಕೆ.ಆರ್ ಪೇಟೆ, ಪ್ರಗತಿ, ರಾಜೇಂದ್ರ ಪ್ರಸಾದ್, ಅಜೇಯ್, ನರೇಶ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಹಲವು ಮೆಗಾ ಸೀರಿಯಲ್ಗಳನ್ನು ನಿರ್ದೇಶಿಸಿ, ಅನುಭವವಿರುವ ಪುಲಿ ವಾಸು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ರಿಜ್ವಾನ್ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ರಿಜ್ವಾನ್ ಹಾಗೂ ಖುಷಿ “ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರವನ್ನು ನಿರ್ಮಿಸುತ್ತಿದ್ದು, ತಂದೆ-ಮಗಳ ಬಾಂಧವ್ಯದ ಕಥಾ ಹಂದರ ಚಿತ್ರದಲ್ಲಿದೆಯಂತೆಇನ್ನು ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್, ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಸುಮಾರು 60 ದಿನಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಎಸ್.ಎಸ್ ತಮನ್ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶ್ಯಾಂ.ಕೆ.ನಾಯ್ಡು ಛಾಯಾಗ್ರಹಣ, ಮಾರ್ತಾಂಡ್.ಕೆ.ವೆಂಕಟೇಶ್ ಸಂಕಲನ ಕಾರ್ಯವಿದೆ. ಚಿತ್ರದ ಮೂರು ಸಾಹಸ ಸನ್ನಿವೇಶಗಳಿಗೆ ಸ್ವಾಮಿ, ಡ್ರಾಗನ್ ಪ್ರಕಾಶ್ ಸಾಹಸ ಸಂಯೋಜಿಸುತ್ತಿದ್ದಾರೆ.
ಒಟ್ಟಾರೆ ಟಾಲಿವುಡ್ಗೆ ಹೋಗುವ ಕನಸು ಕಾಣುತ್ತಿದ್ದ ರಚಿತಾ ರಾಮ್, ಅಂತೂ ಕನ್ನಡ-ತೆಲುಗು ದ್ವಿ ಭಾಷೆಯ ಚಿತ್ರದ ಮೂಲಕ ಟಾಲಿವುಡ್ಗೆ ಅಡಿಯಿಡುತ್ತಿದ್ದು, ತೆಲುಗು ಸಿನಿಮಾ ಮಂದಿಗೆ ಎಷ್ಟರ ಮಟ್ಟಿಗೆ ರಚಿತಾ ಇಷ್ಟವಾಗುತ್ತಾರೆ ಅನ್ನೋದು ಮುಂದಿನ ವರ್ಷ ಮಧ್ಯ ಭಾಗದಲ್ಲಿ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.