ಉದಯವಾಣಿ ಸುವರ್ಣ ಮಹೋತ್ಸವದ ಲಾಂಛನ ಅನಾವರಣ
ಕರಾವಳಿ ಕರ್ನಾಟಕದ ನಂಬರ್ 1 ದೈನಿಕ”ಉದಯವಾಣಿ’ ಸುವರ್ಣ ಮಹೋತ್ಸವದ ಘಟ್ಟದಲ್ಲಿದ್ದು,50ನೆಯ ವರ್ಷಾಚರಣೆಯ ಲಾಂಛನವನ್ನು ಶ್ರೀಕೃಷ್ಣ ಮಠದ ಆವರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನಾವರಣಗೊಳಿಸಿ ಪತ್ರಿಕೆಯ ಉತ್ತರೋತ್ತರ ಅಭಿವೃದ್ಧಿಗೆ ಶುಭ ಕೋರಿದರು.
ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥಶ್ರೀಪಾದರು, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನಿಲ್ಕುಮಾರ್, ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಸಿಇಒ ವಿನೋದಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ: ಆಸ್ಟ್ರೋ ಮೋಹನ್