ಹೊಸ ವರ್ಷಕ್ಕೆ ದುಬಾರಿಯಾಗಲಿದೆ ರೈಲು ಪ್ರಯಾಣ ; ಟಿಕೆಟ್, ಆಹಾರ ತುಟ್ಟಿ
Team Udayavani, Dec 26, 2019, 10:46 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಭಾರತೀಯ ರೈಲ್ವೇ ವರ್ಷಾಂತ್ಯದಲ್ಲಿ ರೈಲು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಎಲ್ಲಾ ಶ್ರೇಣಿಯ ಟಿಕೆಟ್ ಬೆಲೆಯನ್ನು ಸದ್ಯದಲ್ಲೇ ಹೆಚ್ಚಳ ಮಾಡುವ ಸುಳಿವನ್ನು ನೀಡಿದೆ. ರೈಲು ಪ್ರಯಾಣ ದರ ಪ್ರತಿ ಕಿ.ಮೀ.ಗೆ 5 ರಿಂದ 40 ಪೈಸೆ ದುಬಾರಿಯಾಗುವ ನಿರೀಕ್ಷೆ ಇದೆ.
ಇನ್ನು, ಮುಂಬಯಿ, ಚೆನ್ನೈ ಸೇರಿದಂತೆ ಹಲವು ನಗರಗಳ ಸಬ್ ಅರ್ಬನ್ ರೈಲುಗಳ ಟಿಕೆಟ್ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಈಗಾಗಲೇ ರೈಲ್ವೆಯ ಭೋಜನ, ಉಪಹಾರ ದರವನ್ನು ಹೆಚ್ಚಳ ಮಾಡಲಾಗಿದೆ.
ಆಹಾರ ದರಗಳಲ್ಲಿಯೂ ಹೆಚ್ಚಳ
ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀಡಲಾಗುವ ಊಟ, ಉಪಾಹಾರಗಳ ದರವನ್ನು ಐಆರ್‌ಸಿಟಿಸಿ ಪರಿಷ್ಕರಿಸಿದ್ದು, ಸಸ್ಯಾಹಾರಿ ಉಪಾಹಾರ ದರವನ್ನು 35 ರೂ.ಗೆ ಮತ್ತು ಮಾಂಸಾಹಾರಿ ಉಪಹಾರ ಬೆಲೆಯನ್ನು 45 ರೂ.ಗೆ ನಿಗದಿ ಮಾಡಿದೆ.
ಜೊತೆಯಲ್ಲಿ ಊಟದ ದರವನ್ನು 70 ರೂ. ನಿಗದಿ ಮಾಡಿದ್ದು, ಚಿಕನ್ ಬಿರಿಯಾನಿ ಬೆಲೆ 100 ರೂ. ಸಸ್ಯಾಹಾರಿ ಬಿರಿಯಾನಿ 70 ರೂ.ಗೆ ಮತ್ತು ಎಗ್ ಬಿರಿಯಾನಿ 80 ರೂ.ಗೆ ಲಭ್ಯವಾಗಲಿದೆ. ಈ ಎಲ್ಲ ದರಗಳು ಜಿಎಸ್‌ಟಿಯನ್ನು ಒಳಗೊಂಡಿರುವ ಪರಿಷ್ಕೃತ ದರಗಳಾಗಿವೆ ಎಂದು ಇಲಾಖೆ ತಿಳಿಸಿದೆ.
ರಾಜಧಾನಿ, ಶತಾಬ್ದಿಯಲ್ಲಿ ದರ ಎಷ್ಟು?
ರಾಜಧಾನಿ, ಶತಾಬ್ದಿ, ತುರಂತೊ ರೈಲುಗಳ (ಎಸಿ) ಉಪಹಾರಗಳ ದರ ಪಟ್ಟಿ 105-140 ರೂ.ಗಳವರೆಗೆ ಇರಲಿದೆ. ತುರಂತೊ ರೈಲುಗಳ ಸ್ಲಿಪರ್ ಕ್ಲಾಸ್ ಗಳಲ್ಲಿ ಪ್ರಯಾಣಿಕರಿಗೆ 65 ರೂ.ಗೆ ಉಪಹಾರ ಮತ್ತು 120 ರೂ.ಗೆ ಭೋಜನ ಮತ್ತು 50 ರೂ.ಗೆ ಸಾಯಂಕಾಲದ ಚಹಾ ಸಿಗಲಿದೆ.
ರೈಲ್ವೇ ಮಂಡಳಿಯ ನಾನಾ ವಿಭಾಗಗಳನ್ನು ವಿಲೀನಗೊಳಿಸಿ ಒಂದೇ ರೈಲ್ವೆ ನಿರ್ವಹಣೆ ವ್ಯವಸ್ಥೆಗೆ ತರುವ ಬಗ್ಗೆ ಇಲಾಖೆ ನಿರ್ಧಾರ ಮಾಡಿದ್ದು, ರೈಲ್ವೆಯ ಸಂಚಾರ, ನಿರ್ಮಾಣ, ಎಂಜಿನಿಯರಿಂಗ್ ವಿಭಾಗಗಳ ಬದಲಿಗೆ ಮಂಡಳಿಯು ರೈಲ್ವೆ ಕಾರ್ಯಾಚರಣೆ, ಬಿಸಿನೆಸ್ ಅಭಿವೃದ್ಧಿ, ಹಣಕಾಸು ಸೇರಿದಂತೆ 5 ವಲಯಗಳನ್ನಾಗಿ ಮಾರ್ಪಡು ಮಾಡಲಿದೆ. ಈ ಹಿನ್ನಲೆ ರೈಲ್ವೆ ಮಂಡಳಿಯ ಸದಸ್ಯರ ಸಂಖ್ಯೆ ಎಂಟರಿಂದ ಐದಕ್ಕೆ ಇಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.