ಇಂದಿನಿಂದ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್
Team Udayavani, Dec 27, 2019, 11:58 AM IST
ದೊಡ್ಡಬಳ್ಳಾಪುರ: ಇಲ್ಲಿನ ಅನಿಬೆಸೆಂಟ್ ಪಾರ್ಕ್‌ನಲ್ಲಿ ಡಿ.27 ರಿಂದ ಜ.2ರ ವರೆಗೆ 28ನೇ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ನಡೆಯಲಿದ್ದು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ 5ಸಾವಿರ ಜನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿ.27 ರ ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನರಾಯಣ್, ಕಂದಾಯ ಸಚಿವ ಆರ್.ಅಶೋಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.
ಜಾಂಬೋರೇಟ್ ಆಚರಣೆ : ಈ ಬಾರಿಯ ಜಾಂಬೋರೇಟ್‌ನಲ್ಲಿ ಪ್ರತಿಭಾ ಪ್ರದರ್ಶನ, ಸಾಹಸಮಯ ಚಟುವಟಿಕೆ, ಸರ್ವ ಧರ್ಮ ಸಮನ್ವಯತೆ, ಚಾರಣ, ಗ್ಲೋಬಲ್ ವಿಲೇಜ್, ಸಮುದಾಯ ಸೇವಾ ಚಟುವಟಿಕೆ, ಏಕತೆ ಪ್ರದರ್ಶನ, ಯುವ ವೇದಿಕೆ, ಜಾ ನಪದ ಮೇಳ ಮೊದಲಾದ ಪ್ರದರ್ಶನಗಳಿವೆ. ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗಾಗಿ ಗಾಂಧೀಜಿ ಅವರ ಕುರಿತಾದ ವಿಶೇಷ ವಸ್ತು ಪ್ರದರ್ಶನ ನಡೆಯಲಿದೆ. ಸಾಹಸ ಚಟುವಟಿಕೆಗಳು ನಡೆಯಲಿವೆ. ಪ್ರತಿದಿನ ಸಂಜೆ ವೇಳೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 45 ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದ್ದು ವಿವಿಧ ಕೌಶಲ್ಯ ತರಬೇತಿ ನೀಡಲಾಗುವುದು. ವಿವಿಧ ಧರ್ಮಗಳ ವಿಚಾರಗಳ ಬಗ್ಗೆ ಪರಿಚಯ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. 25 ಸಾವಿರ ಬೀಜದ ಉಂಡೆಗಳ ತಯಾರಿಕೆ ನಡೆಯಲಿದೆ. ಅನಿಬೆಸೆಂಟ್ ಪಾರ್ಕ್‌ನಲ್ಲಿ ಮಳೆ ನೀರು ಇಂಗು ಗುಂಡಿ ತೋಡಲಾಗುವುದು, ಮಾಕಳಿ ದುರ್ಗಕ್ಕೆ ಚಾರಣ ನಡೆಯಲಿದೆ. ಪ್ರತಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಹ ಭಾಗವಹಿಸುವ ಅವಕಾಶ ಇರುತ್ತದೆ. ಇದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಮೈತ್ರಿ ವೃದ್ಧಿಸುತ್ತದೆ. ಶಿಬಿರಾರ್ಥಿಗಳು ಶಾರೀರಿಕ, ಬೌದ್ಧಿಕ ಹಾಗೂ ನೈತಿಕ ಮೌಲ್ಯ ತಿಳಿದುಕೊಳ್ಳುವ ಅವಕಾಶ ಜಾಂಬೋರೇಟ್‌ಗಳಲ್ಲಿ ದೊರೆಯುತ್ತದೆ.
ಬೆಳಗಿನ ವ್ಯಾಯಾಮ, ಕವಾಯಿತು, ಪಥ ಸಂಚಲನೆ, ಸಾಹಸಮಯ ಚಟುವಟಿಕೆ, ಸಾಮೂಹಿಕ ಪ್ರದರ್ಶನ ಇತ್ಯಾದಿಗಳ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಲ್ಲಿ ಶಾರೀರಿಕ ಚೆ„ತನ್ಯ ವೃದ್ಧಿಸುತ್ತದೆ. ಸ್ವತ್ಛವಾದ ಹಸಿರು ಪರಿಸರದ ವಾತಾವರಣದಲ್ಲಿ ವಾಸ್ತವ್ಯ ಹೂಡುವುದರಿಂದ ಆರೋಗ್ಯಕರ ಚೈತನ್ಯವಿರುತ್ತದೆ. ರಸಪ್ರಶ್ನೆ, ಪ್ರತಿಭಾ ಪ್ರದರ್ಶನ, ಸ್ಕೌಟ್ ಕೌಶಲ್ಯಗಳ ಪ್ರದರ್ಶನ, ಇತ್ಯಾದಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸವುಂಟಾಗುತ್ತದೆ ಎಂದು ಕಾರ್ಯ ಕ್ರಮದ ನೋಡಲ್ ಅಧಿಕಾರಿ ಮಧುಸೂದನ್ ತಿಳಿಸಿದ್ದಾರೆ.
ಏನಿದು ಜಾಂಬೋರೇಟ್?: ಜಾಂಬೋರೀ ಎಂಬ ಆಂಗ್ಲ ಶಬ್ದಕ್ಕೆ ಕನ್ನಡದಲ್ಲಿ ಸಂಭ್ರಮಾಚರಣೆ, ಸಂತೋಷದ ಕೂಟ, ದೊಡ್ಡ ಜಾತ್ರೆ ಎಂಬ ಅರ್ಥಗಳಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಜಾಂಬೋರೇಟ್ ಸ್ಕೌಟಿಂಗ್ ಇಂದು ಆಟ. ಒಂದು ಶಿಕ್ಷಣ. ಸ್ಕೌಟಿಂಗ್ ಮತ್ತು ಗೈಡಿಂಗ್ ವಿದ್ಯಾರ್ಥಿ ಸಮುದಾಯ ಅಳವಡಿಸಿಕೊಳ್ಳುವ ಒಂದು ವಿಧಾನ. ವಿದ್ಯಾರ್ಥಿ ಸಮುದಾಯದ ಗುಂಪುಗಳು ಒಂದೆಡೆ ಕಲೆತು ಪಠ್ಯೇತರ ಚಟುವಟಿಕೆಗಳಾದ ಆಟ, ಹಾಡು, ಒಗಟು, ಪ್ರಕೃತಿ ಪರಿಸರ ಅಧ್ಯಯನ ಸೇರಿದಂತೆ ತಮ್ಮಲ್ಲಿರುವ ಜ್ಞಾನ ಕೌಶಲ್ಯಗಳನ್ನು ಪರಸ್ಪರ ವಿಸ್ತರಿಸಿಕೊಳ್ಳುವುದೇ ಜಾಂಬೋರೇಟ್‌ನ ವಿಶೇಷ. ಈ ಅರ್ಥದಲ್ಲಿ
ಸ್ಕೌಟಿಂಗ್ ಸಹ ಒಂದು ಆಟ. ನಿಯಮಗಳಿಗನುಸಾರವಾಗಿ ನುರಿತ ಶಿಕ್ಷಕರ ಉತ್ತಮ ಮಾರ್ಗದರ್ಶನದಲ್ಲಿ ಕ್ರೀಡಾ ಮನೋಭಾವದಿಂದ ಆಡಿದಾಗ ಸ್ಕೌಟಿಂಗ್ ಆನಂದದಾಯಕವಾಗಿರುತ್ತದೆ. ಜಾಂಬೋರೇಟ್‌ಗಳಲ್ಲಿ ಪ್ರತಿಯೊಂದು ಕಾರ್ಯವೂ ಸ್ಕೌಟ್ ನಿಯಮಗಳಿಗೆ ಒಳಪಟ್ಟು ವೇಳಾಪಟ್ಟಿಯಂತೆ ಕಾರ್ಯಗತಗೊಳ್ಳುತ್ತದೆ.
ಇಲ್ಲಿನ ಅನಿಬೆಸೆಂಟ್ ಪಾರ್ಕ್‌ನಲ್ಲಿ ಡಿ.27 ರಿಂದ ಜ.2ರ ವರೆಗೆ 28ನೇ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ನಡೆಯಲಿದ್ದು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ 5ಸಾವಿರ ಜನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿ.27 ರ ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನರಾಯಣ್, ಕಂದಾಯ ಸಚಿವ ಆರ್.ಅಶೋಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.
ಜಾಂಬೋರೇಟ್ ಆಚರಣೆ : ಈ ಬಾರಿಯ ಜಾಂಬೋರೇಟ್‌ನಲ್ಲಿ ಪ್ರತಿಭಾ ಪ್ರದರ್ಶನ, ಸಾಹಸಮಯ ಚಟುವಟಿಕೆ, ಸರ್ವ ಧರ್ಮ ಸಮನ್ವಯತೆ, ಚಾರಣ, ಗ್ಲೋಬಲ್ ವಿಲೇಜ್, ಸಮುದಾಯ ಸೇವಾ ಚಟುವಟಿಕೆ, ಏಕತೆ ಪ್ರದರ್ಶನ, ಯುವ ವೇದಿಕೆ, ಜಾ ನಪದ ಮೇಳ ಮೊದಲಾದ ಪ್ರದರ್ಶನಗಳಿವೆ. ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗಾಗಿ ಗಾಂಧೀಜಿ ಅವರ ಕುರಿತಾದ ವಿಶೇಷ ವಸ್ತು ಪ್ರದರ್ಶನ ನಡೆಯಲಿದೆ. ಸಾಹಸ ಚಟುವಟಿಕೆಗಳು ನಡೆಯಲಿವೆ. ಪ್ರತಿದಿನ ಸಂಜೆ ವೇಳೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 45 ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದ್ದು ವಿವಿಧ ಕೌಶಲ್ಯ ತರಬೇತಿ ನೀಡಲಾಗುವುದು. ವಿವಿಧ ಧರ್ಮಗಳ ವಿಚಾರಗಳ ಬಗ್ಗೆ ಪರಿಚಯ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. 25 ಸಾವಿರ ಬೀಜದ ಉಂಡೆಗಳ ತಯಾರಿಕೆ ನಡೆಯಲಿದೆ. ಅನಿಬೆಸೆಂಟ್ ಪಾರ್ಕ್‌ನಲ್ಲಿ ಮಳೆ ನೀರು ಇಂಗು ಗುಂಡಿ ತೋಡಲಾಗುವುದು, ಮಾಕಳಿ ದುರ್ಗಕ್ಕೆ ಚಾರಣ ನಡೆಯಲಿದೆ. ಪ್ರತಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಹ ಭಾಗವಹಿಸುವ ಅವಕಾಶ ಇರುತ್ತದೆ. ಇದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಮೈತ್ರಿ ವೃದ್ಧಿಸುತ್ತದೆ. ಶಿಬಿರಾರ್ಥಿಗಳು ಶಾರೀರಿಕ, ಬೌದ್ಧಿಕ ಹಾಗೂ ನೈತಿಕ ಮೌಲ್ಯ ತಿಳಿದುಕೊಳ್ಳುವ ಅವಕಾಶ ಜಾಂಬೋರೇಟ್‌ಗಳಲ್ಲಿ ದೊರೆಯುತ್ತದೆ.
ಬೆಳಗಿನ ವ್ಯಾಯಾಮ, ಕವಾಯಿತು, ಪಥ ಸಂಚಲನೆ, ಸಾಹಸಮಯ ಚಟುವಟಿಕೆ, ಸಾಮೂಹಿಕ ಪ್ರದರ್ಶನ ಇತ್ಯಾದಿಗಳ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಲ್ಲಿ ಶಾರೀರಿಕ ಚೆ„ತನ್ಯ ವೃದ್ಧಿಸುತ್ತದೆ. ಸ್ವತ್ಛವಾದ ಹಸಿರು ಪರಿಸರದ ವಾತಾವರಣದಲ್ಲಿ ವಾಸ್ತವ್ಯ ಹೂಡುವುದರಿಂದ ಆರೋಗ್ಯಕರ ಚೈತನ್ಯವಿರುತ್ತದೆ. ರಸಪ್ರಶ್ನೆ, ಪ್ರತಿಭಾ ಪ್ರದರ್ಶನ, ಸ್ಕೌಟ್ ಕೌಶಲ್ಯಗಳ ಪ್ರದರ್ಶನ, ಇತ್ಯಾದಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸವುಂಟಾಗುತ್ತದೆ ಎಂದು ಕಾರ್ಯ ಕ್ರಮದ ನೋಡಲ್ ಅಧಿಕಾರಿ ಮಧುಸೂದನ್ ತಿಳಿಸಿದ್ದಾರೆ.
ಏನಿದು ಜಾಂಬೋರೇಟ್?: ಜಾಂಬೋರೀ ಎಂಬ ಆಂಗ್ಲ ಶಬ್ದಕ್ಕೆ ಕನ್ನಡದಲ್ಲಿ ಸಂಭ್ರಮಾಚರಣೆ, ಸಂತೋಷದ ಕೂಟ, ದೊಡ್ಡ ಜಾತ್ರೆ ಎಂಬ ಅರ್ಥಗಳಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಜಾಂಬೋರೇಟ್ ಸ್ಕೌಟಿಂಗ್ ಇಂದು ಆಟ. ಒಂದು ಶಿಕ್ಷಣ. ಸ್ಕೌಟಿಂಗ್ ಮತ್ತು ಗೈಡಿಂಗ್ ವಿದ್ಯಾರ್ಥಿ ಸಮುದಾಯ ಅಳವಡಿಸಿಕೊಳ್ಳುವ ಒಂದು ವಿಧಾನ. ವಿದ್ಯಾರ್ಥಿ ಸಮುದಾಯದ ಗುಂಪುಗಳು ಒಂದೆಡೆ ಕಲೆತು ಪಠ್ಯೇತರ ಚಟುವಟಿಕೆಗಳಾದ ಆಟ, ಹಾಡು, ಒಗಟು, ಪ್ರಕೃತಿ ಪರಿಸರ ಅಧ್ಯಯನ ಸೇರಿದಂತೆ ತಮ್ಮಲ್ಲಿರುವ ಜ್ಞಾನ ಕೌಶಲ್ಯಗಳನ್ನು ಪರಸ್ಪರ ವಿಸ್ತರಿಸಿಕೊಳ್ಳುವುದೇ ಜಾಂಬೋರೇಟ್‌ನ ವಿಶೇಷ. ಈ ಅರ್ಥದಲ್ಲಿ
ಸ್ಕೌಟಿಂಗ್ ಸಹ ಒಂದು ಆಟ. ನಿಯಮಗಳಿಗನುಸಾರವಾಗಿ ನುರಿತ ಶಿಕ್ಷಕರ ಉತ್ತಮ ಮಾರ್ಗದರ್ಶನದಲ್ಲಿ ಕ್ರೀಡಾ ಮನೋಭಾವದಿಂದ ಆಡಿದಾಗ ಸ್ಕೌಟಿಂಗ್ ಆನಂದದಾಯಕವಾಗಿರುತ್ತದೆ. ಜಾಂಬೋರೇಟ್‌ಗಳಲ್ಲಿ ಪ್ರತಿಯೊಂದು ಕಾರ್ಯವೂ ಸ್ಕೌಟ್ ನಿಯಮಗಳಿಗೆ ಒಳಪಟ್ಟು ವೇಳಾಪಟ್ಟಿಯಂತೆ ಕಾರ್ಯಗತಗೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.