ಖಗೋಳ ಕೌತುಕ ಕಣ್ತುಂಬಿಕೊಂಡ್ರು..


Team Udayavani, Dec 27, 2019, 1:11 PM IST

27-December-15

ರಾಯಚೂರು: ಗುರುವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಕಾದು ಕುಳಿತ ಜಿಲ್ಲೆಯ ಜನರಿಗೆ ಮೋಡ ಕವಿದ ವಾತಾವರಣ ತುಸು ಅಡ್ಡಿಯಾಯಿತು. ಬೆಳಗ್ಗೆಯಿಂದಲೇ ಜನ ಸೂರ್ಯಗ್ರಹಣ ವೀಕ್ಷಣೆಗಾಗಿ ಕಾದು ಕುಳಿತಿದ್ದರೂ, ಗಂಟೆಗಟ್ಟಲೇ ಕಾದು ಮೋಡ ಸರಿಯದ ಕಾರಣ ಬೇಸರಗೊಂಡರು. ಕ್ರಮೇಣ ಮೋಡ ಮರೆಯಾಗಿ ಗ್ರಹಣ ಕಣ್ತುಂಬಿಕೊಂಡರು.

ಬೆಳಗ್ಗೆ 8:08 ಗಂಟೆಯಿಂದ ಬೆಳಗ್ಗೆ 11:08 ಗಂಟೆಯವರೆಗೂ ಗ್ರಹಣವಿತ್ತು. ಆದರೆ, ಬೆಳಗ್ಗೆ ಜಿಲ್ಲಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣದ ಜತೆಗೆ ಮಂಜು ಆವರಿಸಿತ್ತು. ಜನ ಗ್ರಹಣ ವೀಕ್ಷಣೆಗೆ ಮುಂದಾದರೂ ಕಾಣಲಿಲ್ಲ. ಟಿವಿಗಳಲ್ಲೇ ಬೇರೆ ಭಾಗದಲ್ಲಿ ಸಂಭವಿಸುತ್ತಿದ್ದ ಗ್ರಹಣ ನೋಡಿ ಖುಷಿ ಪಟ್ಟರು.

ಇನ್ನು ಗ್ರಹಣದ ಬಿಸಿ ಜನರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬೆಳಗ್ಗೆ 11 ಗಂಟೆಯವರೆಗೂ ಬಹುತೇಕ ಜನ ರಸ್ತೆಗೆ ಇಳಿಯಲಿಲ್ಲ. ಸರ್ಕಾರದ ಆದೇಶ ಇಲ್ಲದಿದ್ದರೂ ಗ್ರಹಣದ ನಿಮಿತ್ತ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲಾಗಿತ್ತು. ಆದರೆ, ಕೆಲ ಶಾಲೆಗಳಲ್ಲಿ ಮಾತ್ರ ವಿಜ್ಞಾನ ಶಿಕ್ಷಕರು ಸ್ವ ಪ್ರೇರಣೆಯಿಂದ ಮಕ್ಕಳಿಗೆ ಗ್ರಹಣದ ಕುರಿತು ವಿಶೇಷ ಪಾಠ ಮಾಡಿ ಗಮನ ಸೆಳೆದರು.

ಗ್ರಹಣದ ನಿಮಿತ್ತ ದೇವಸ್ಥಾನಗಳಲ್ಲಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಪೂಜೆ ಪುನಸ್ಕಾರ, ಹೋಮ ಹವನಗಳನ್ನು ನಡೆಸಲಾಯಿತು. ಬೆಳಗಿನ ಪೂಜೆ ರದ್ದುಗೊಳಿಸಲಾಗಿತ್ತು. ಗ್ರಹಣ ಬಿಟ್ಟ ಬಳಿಕ ದೇವಸ್ಥಾನಗಳನ್ನು ಶುದ್ಧೀಕರಿಸಿ ಬಳಿಕ ವಿಶೇಷ ಪೂಜೆ ನೆರವೇರಿಸಲಾಯಿತು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗ್ರಹಣದ ನಿಮಿತ್ತ ಬೆಳಗಿನ ಪೂಜೆ ನಡೆಯಲಿಲ್ಲ. ಗ್ರಹಣ ಬಿಟ್ಟ ನಂತರ ಮಠ ಸ್ವಚ್ಛಗೊಳಿಸಿ ವಿಶೇಷ ಪೂಜೆ ಹಾಗೂ ಹೋಮ ನಡೆಸಲಾಯಿತು. ಗುರುವಾರವಾದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಗ್ರಹಣ ಮುಗಿದ ಬಳಿಕ ರಾಯರ ದರ್ಶನ ಪಡೆದರು. ಇನ್ನು ದೇವಸುಗೂರಿನ ಸೂಗೂರೇಶ್ವರ ಸ್ವಾಮಿ ದೇವಸ್ಥಾನದಲ್ಲೂ ದರ್ಶನಕ್ಕೆ ಅವಕಾಶವಿತ್ತು.

ಗ್ರಹಣದ ಬಳಿಕ ವಿಶೇಷ ಪೂಜೆ ನಡೆಯಿತು. ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ಅವಕಾಶ ನೀಡಿತ್ತು. ಅದರ ಜತೆಗೆ ವಿಜ್ಞಾನ ಶಿಕ್ಷಕರು, ಪ್ರಗತಿಪರ ಚಿಂತಕರು, ಅಧಿಕಾರಿಗಳು
ಗ್ರಹಣದ ವೇಳೆ ಉಪಹಾರ ಸೇವಿಸುವ ಮೂಲಕ ಮೌಡ್ಯ ನಿವಾರಣೆಗೆ ಜಾಗೃತಿ ಮೂಡಿಸಿದರು.

ಹಳ್ಳಿಗಳಲ್ಲಿ ಗ್ರಹಣದ ವೇಳೆ ಪಾತ್ರೆಯಲ್ಲಿ ಒನಕೆ ನಿಲ್ಲಿಸಿದ್ದು ಕಂಡುಬಂತು. ಗೋನಾಳ ಗ್ರಾಮದಲ್ಲಿ ಇದೇ ರೀತಿ ಮಾಡಲಾಗಿತ್ತು. ಗ್ರಹಣ ಬಿಟ್ಟ ನಂತರ ಒನಕೆ ತನ್ನಿಂತಾನೆ ಕೆಳಗೆ ಬಿದ್ದಿದ್ದು ಕಂಡು ಜನ ಅಚ್ಚರಿಗೊಳಗಾದರು. ಗುರುವಾರ ಎಳ್ಳ ಅಮಾವಾಸ್ಯೆ ಇರುವುದರಿಂದ ರೈತಾಪಿ ವರ್ಗ ಹೊಲಗಳಿಗೆ ಸರಗ ಚೆಲ್ಲಲು ಕಾದು ಕುಳಿತಿದ್ದರು. ಗ್ರಹಣ ಬಿಟ್ಟ ಮೇಲೆ ಸ್ನಾನ ಮುಗಿಸಿ ಅಡುಗೆ ಮಾಡಿ ಭೂತಾಯಿಗೆ ಸರಗ ಚೆಲ್ಲಲಾಯಿತು.

ಗ್ರಹಣ ವೀಕ್ಷಣೆ ವ್ಯವಸ್ಥೆ: ನಗರದ ಮಾವಿನಕರೆ ಉದ್ಯಾನವನದ ಬಳಿ ಎಐಡಿಎಸ್‌ಒ ಸಂಘಟನೆಯಿಂದ ಗುರುವಾರ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬ್ರೇಕ್‌ ಥ್ರೂ ಸೈನ್ಸ್‌ ಸೊಸೈಟಿಯಿಂದ ಸನ್‌ ಫಿಲ್ಟರ್‌ ಕನ್ನಡಕ ನೀಡಿ ಅದರ ಮೂಲಕ ಗ್ರಹಣ ನೋಡಲು ಸೂಚಿಸಲಾಯಿತು.

ಗ್ರಹಣ ಕುರಿತು ಜನರಲ್ಲಿರುವ ಮೌಡ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಳದಲ್ಲೇ ಉಪಾಹಾರ ನೀಡಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೀರ್‌ಸಾಬ್‌, ಸಹ ಕಾರ್ಯದರ್ಶಿ ಹೇಮಂತ, ಕಾರ್ತಿಕ, ಎಐಡಿವೈಒನ ಚನ್ನಬಸವ ಜಾನೇಕಲ್‌, ವಿನೋದಕುಮಾರ, ಪ್ರಕಾಶ,
ಮೆಹಬೂಬ್‌ ಸೇರಿದಂತೆ ಅನೇಕರಿದ್ದರು.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ: ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ಅನುವು ಮಾಡಲಾಗಿತ್ತು. ಗ್ರಹಣ ಶುರುವಾಗುತ್ತಿದ್ದಂತೆ ಕೇಂದ್ರಕ್ಕೆ ಆಗಮಿಸಿದ ಜನ ಅಪರೂಪದ ಖಗೋಳ ವಿದ್ಯಮಾನ ವೀಕ್ಷಿಸಿದರು. ಹಂತ ಹಂತವಾಗಿ ಮೋಡಗಳು ತಿಳಿಯಾಗುತ್ತಿದ್ದಂತೆ ಸೂರ್ಯನ ಗೋಚರವಾಯಿತು. ಗ್ರಹಣದ ಮಧ್ಯಕಾಲವನ್ನು ಜನ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು. ಟೆಲಿಸ್ಕೋಪ್‌, ಸೋಲಾರ್‌ ಫಿಲ್ಟರ್‌ ಕನ್ನಡಕ ಮೂಲಕ ಜನ ಗ್ರಹಣ ವೀಕ್ಷಿಸಿದರು.

ಅದರ ಜತೆಗೆ ನೆಹರು ತಾರಾಲಯದಿಂದ ನೀಡಿದ ಗ್ರಹಣದ ಕಿಟ್‌ನ ಪಿನ್‌ ಹೋಲ್‌ ಕ್ಯಾಮೆರಾದ ಮೂಲಕ ಗ್ರಹಣದ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ಮನ್ಸಲಾಪುರದ ನೇತಾಜಿ ಶಾಲೆ: ತಾಲೂಕಿನ ಮನ್ಸಲಾಪುರದ ನೇತಾಜಿ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಹಣ ವೀಕ್ಷಿಸಿದರು. ಶಿಕ್ಷಕರು ಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಹನುಮಂತ ಸಾಗರ, ಸಹ ಶಿಕ್ಷಕ ಜಲಾಲ್‌ ಸೇರಿದಂತೆ ವಿದ್ಯಾರ್ಥಿಗಳಿದ್ದರು.

ಟಾಪ್ ನ್ಯೂಸ್

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.