ಜಿಲ್ಲೆಯಲ್ಲಿ 41 ಶುದ್ಧ ನೀರಿನ ಘಟಕ ಸ್ಥಗಿತ


Team Udayavani, Dec 28, 2019, 3:00 AM IST

jilleyalli

ಚಾಮರಾಜನಗರ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಯೋಜನೆಯಲ್ಲಿ ಜಿಲ್ಲೆಯಲ್ಲಿ 211 ಘಟಕಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 149 ಕಾರ್ಯಾರಂಭವಾಗಿ 108 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಪೂರೈಕೆ ಮಾಡುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವ ಯೋಜನೆಯನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿತು. ಸರ್ಕಾರದ ಉದ್ದೇಶಿತ ಆಶಯ ಇನ್ನೂ ಸಾಕಾರಗೊಂಡಿಲ್ಲ. ಜಿಲ್ಲೆಯ ಹಲವೆಡೆ ಈ ಘಟಕಗಳೇ ಇಲ್ಲ. ಇರುವ ಹಲವು ಕಡೆ ಘಟಕಗಳು ಕೆಟ್ಟು ನಿಂತಿವೆ. ಇನ್ನೂ ಕೆಲವು ಕಡೆ ಕುಂಟುತ್ತಾ ನಿರ್ಮಾಣ ಕಾಮಗಾರಿ ನಡೆದಿದೆ. ಹಲವೆಡೆ ಸಿದ್ಧಗೊಂಡು ಉದ್ಘಾಟನೆಯಾಗಿಲ್ಲ.

ನಿರ್ಮಾಣದ ಹಂತದಲ್ಲಿವೆ 62 ಘಟಕ: ಜಿಲ್ಲೆಗೆ ಒಟ್ಟು 211 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ. ಇದರಲ್ಲಿ 62 ಘಟಕಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. 149 ಘಟಕಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಇವುಗಳಲ್ಲಿ ಸುಸ್ಥಿತಿಯಲ್ಲಿದ್ದು, ಕಾರ್ಯನಿರ್ವಹಿಸುತ್ತಿರುವುದು 108 ಘಟಕಗಳು ಮಾತ್ರ. ಇನ್ನು 41 ಘಟಕಗಳು ಕೆಟ್ಟು ನಿಂತಿವೆ.

ವಿವಿಧೆಡೆ ಉದ್ಘಾಟನೆಗೆ ಸಿದ್ಧ: ಚಾಮರಾಜನಗರ ತಾಲೂಕಿನಲ್ಲಿ 110 ಘಟಕಗಳು ಮಂಜೂರಾಗಿದ್ದು, ಇದರಲ್ಲಿ 7 ಕಾಮಗಾರಿ ಹಂತದಲ್ಲಿವೆ. 20 ಉದ್ಘಾಟನೆಗೆ ಸಿದ್ಧವಾಗಿವೆ. 70 ಕಾರ್ಯಾರಂಭ ಮಾಡಿವೆ. ಇವುಗಳಲ್ಲಿ 41 ಕೆಲಸ ನಿರ್ವಹಿಸುತ್ತಿದ್ದು, 29 ರಿಪೇರಿಗೆ ಬಂದಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ 33 ಘಟಕಗಳು ಮಂಜೂರಾಗಿದ್ದು, 31 ಕಾರ್ಯಾರಂಭಿಸಿವೆ. 28 ಸುಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, 03 ಕೆಟ್ಟು ಹೋಗಿವೆ.

ಕೊಳ್ಳೇಗಾಲ ತಾಲೂಕಿನಲ್ಲಿ 47 ಘಟಕಗಳು ಮಂಜೂರಾಗಿದ್ದು, ಇದರಲ್ಲಿ 05ರ ಕಾಮಗಾರಿ ಪ್ರಗತಿಯಲ್ಲಿದೆ. 05 ಉದ್ಘಾಟನೆಗೆ ಸಿದ್ಧವಾಗಿವೆ. 33 ಕಾರ್ಯಾರಂಭಿಸಿದ್ದು, 28 ಸುಸ್ಥಿತಿಯಲ್ಲಿವೆ. 05 ಕೆಟ್ಟು ಹೋಗಿವೆ. ಯಳಂದೂರು ತಾಲೂಕಿನಲ್ಲಿ 21 ಘಟಕಗಳು ಮಂಜೂರಾಗಿದ್ದು, 02 ಕಾಮಗಾರಿ ಹಂತದಲ್ಲಿವೆ. 03 ಉದ್ಘಾಟನೆಗೆ ಸಿದ್ಧವಾಗಿವೆ. 15 ಕಾರ್ಯಾರಂಭಿಸಿದ್ದು, ಇದರಲ್ಲಿ 11 ಕೆಲಸ ನಿರ್ವಹಿಸುತ್ತಿವೆ. ಇನ್ನು 04 ಕೆಟ್ಟು ನಿಂತಿವೆ.

60 ಘಟಕ ನಿರ್ಮಿಸುವ ಗುರಿ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) 60 ಘಟಕಗಳನ್ನು ನಿರ್ಮಿಸುವ ಗುರಿ ಹೊಂದಿತ್ತು. ಇದರಲ್ಲಿ 56 ನ್ನು ನಿರ್ಮಿಸಿ ನಿರ್ವಹಣೆ ಮಾಡಿದೆ. ಇದರಲ್ಲಿ 27 ಕೆಲಸ ನಿರ್ವಹಿಸುತ್ತಿದ್ದು, 29 ಕೆಟ್ಟು ಹೋಗಿವೆ. ಗ್ರಾಮೀಣ ನೀರು ಸರಬರಾಜು ವ್ಯಾಪ್ತಿಗೆ 91 ಘಟಕಗಳನ್ನು ನೀಡಲಾಗಿದೆ.

ಇದರಲ್ಲಿ 14 ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. 23 ಉದ್ಘಾಟನೆಗೆ ಸಿದ್ಧವಾಗಿವೆ. 34 ಕಾರ್ಯಾರಂಭ ಮಾಡಿದ್ದು, 25 ಕೆಲಸ ನಿರ್ವಹಿಸುತ್ತಿವೆ. 09 ಕೆಟ್ಟು ಹೋಗಿವೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ನಿರ್ವಹಿಸುತ್ತಿದ್ದ 56 ಘಟಕಗಳನ್ನು ಇದೀಗ ಗ್ರಾಮೀಣ ನೀರು ಸರಬರಾಜು ಯೋಜನೆಯ ವ್ಯಾಪ್ತಿಗೆ ವಹಿಸಲಾಗಿದೆ.

ಸಹಕಾರ ಸಂಘಗಳ ನಿರ್ವಹಣೆ: ವಿಶೇಷವೆಂದರೆ ಜಿಲ್ಲೆಯಲ್ಲಿ ಸಹಕಾರ ಸಂಘಗಳು 59 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುತ್ತಿವೆ. ಇವುಗಳಲ್ಲಿ 59 ಸಹ ಸುಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿವೆ! ಖಾಸಗಿ ಸಹಕಾರ ಸಂಘಗಳ ನಿರ್ವಹಣೆಯ ಎಲ್ಲ ಘಟಕಗಳು ಸುಸ್ಥಿತಿಯಲ್ಲಿವೆ. ಸರ್ಕಾರಿ ನಿರ್ವಹಣೆಯಲ್ಲಿ ಅನೇಕ ಘಟಕಗಳು ಕೆಟ್ಟು ನಿಂತಿವೆ.

ಸೌಲಭ್ಯ ಇದ್ದರೂ ಜನರಿಗೆ ಪ್ರಯೋಜನವಾಗಿಲ್ಲ: ಜನ ಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಅನೇಕ ಘಟಕಗಳು ಕೆಟ್ಟು ನಿಂತಿರುವುದರಿಂದ ಸೌಲಭ್ಯ ಇದ್ದರೂ ಜನರು ಅದರ ಪ್ರಯೋಜನ ಪಡೆಯಲು ಸಾಧ್ಯವಾಗದಂತಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಇನ್ನೂ ಮರೀಚಿಕೆಯಾಗಿದೆ. ಯಳಂದೂರು ತಾಲೂಕಿನ ಹೊನ್ನೂರು, ಯರಿಯೂರು, ಮದ್ದೂರು, ಮಾಂಬಳ್ಳಿ, ಯರಗಂಬಳ್ಳಿ, ಅಂಬಳೆ-2 ಗ್ರಾಮಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಕಾಮಗಾರಿಯು 2018ರ ನವೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಿತ್ತು.

ಇದರಲ್ಲಿ ಹೊನ್ನೂರಿನಲ್ಲಿ 3 ಮಾಂಬಳ್ಳಿ 1 ಕೆಸ್ತೂರು 1, ಮದ್ದೂರಿನಲ್ಲಿ 2, ಅಗರ ಗ್ರಾಮದಲ್ಲಿ ಒಂದು ಘಟಕಗಳ ಉದ್ಘಾಟನೆಯೂ ಆಗಿದೆ. ಯರಿಯೂರು ಗ್ರಾಮದಲ್ಲೂ 2 ಘಟಕಗಳು ನಿರ್ಮಾಣವಾಗಿವೆ ಆದರೆ ಕೆಲವೇ ದಿನಗಳಲ್ಲಿ ಇದು ಕೆಟ್ಟು ನಿಂತಿವೆ. ಇದನ್ನು ದುರಸ್ತಿ ಪಡಿಸಿದ್ದರೂ, ಮತ್ತೆ ಇದು ಕೆಟ್ಟು ಹೋಗುತ್ತಿದ್ದು ಸಾರ್ವಜನಿಕರು ಪರಿಪಾಟಲು ಪಡುವ ಸ್ಥಿತಿ ಇದೆ.

ಹನೂರು ಪಟ್ಟಣದಲ್ಲಿ 2 ಶುದ್ಧ ನೀರಿನ ಘಟಕಗಳಿವೆ. ಇದರಲ್ಲಿ ಪಟ್ಟಣ ಪಂಚಾಯ್ತಿ ನಿರ್ವಹಣೆಯ ಒಂದು ಕೆಟ್ಟು ನಿಂತಿದ್ದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಣೆ ಮಾಡುತ್ತಿರುವ ಇನ್ನೊಂದು ಘಟಕ ಸುಸ್ಥಿತಿಯಲ್ಲಿದೆ. ರಾಮಾಪುರ ಸಮೀಪ ಗೆಜ್ಜಲನತ್ತದಲ್ಲಿ ಕೆಆರ್‌ಐಡಿಲ್‌ನಿಂದ ಆರಂಭಗೊಂಡ ಘಟಕ 2 ತಿಂಗಳಾದ ನಂತರ ಕೆಟ್ಟುನಿಂತಿದೆ.

ಘಟಕ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ: ವಿವಿಧೆಡೆ ಹಲವು ತಿಂಗಳ ಹಿಂದೆಯೇ ಕಾಮಗಾರಿಯು ಪ್ರಾರಂಭವಾಗಿದ್ದರೂ. ಇನ್ನೂ ಕೆಲವೆಡೆ ಯಾವ ಘಟಕವು ಕೂಡ ಸಮಪರ್ಕವಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ದವಾಗಿಲ್ಲ. ಕಾಮಗಾರಿಯು ಅರೆಬರೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಆದಷ್ಟು ಬೇಗ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪೂರೈಕೆಯಾಗುವ ನೀರು ಶುದ್ಧವಾಗಿಲ್ಲ. ಇದರಲ್ಲಿ ಪ್ಲೋರೈಡ್‌ ಅಂಶ ಹೆಚ್ಚಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಂತದಲ್ಲೇ ಇದೆ. ಕೆಲವೆಡೆ ಇದರ ನಿರ್ವಹಣೆ ಸರಿಯಾಗಿಲ್ಲದೆ ಕೆಟ್ಟು ನಿಂತಿದೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು.
-ಸಿದ್ಧರಾಜು, ಹೊನ್ನೂರು

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇನ್ನೊಂದು ತಿಂಗಳೊಳಗೆ ಎಲ್ಲ ಘಟಕಗಳೂ ದುರಸ್ತಿಯಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ನಾವು ಸಹ ಅದಕ್ಕಾಗಿ ಬೇಕಾದ ಬಜೆಟ್‌ ಸಿದ್ಧಪಡಿಸಿ ಕಳುಹಿಸಿಕೊಡುತ್ತಿದ್ದೇವೆ.
-ಬಿ.ಎಚ್‌. ನಾರಾಯಣರಾವ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

* ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿ ಆನೆ ದಾಳಿ:ವಿಡಿಯೋ ವೈರಲ್

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.