ರಿಲಯನ್ಸ್ ಫೌಂಡೇಶನ್‌ನಿಂದ ಕ್ರಿಸ್‌ಮಸ್ ಸಂಭ್ರಮ
Team Udayavani, Dec 28, 2019, 3:10 AM IST
ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು 4000 ಬಡ ಮಕ್ಕಳಿಗಾಗಿ ನೂತನ ಜಿಯೋ ವೊಂಡರ್‌ಲ್ಯಾಂಡ್‌ನಲ್ಲಿ ಅದ್ಧೂರಿ ಕ್ರಿಸ್ ಮಸ್ ಸಂಭ್ರಮ ವನ್ನು ಆಯೋಜನೆ ಮಾಡಿದ್ದರು. ಮಕ್ಕಳು ಈ ಸಮಯದಲ್ಲಿ ಕುಣಿದು- ಕುಪ್ಪಳಿಸಿದ್ದಾರೆ, ಸಂಭ್ರಮವನ್ನು ಆನಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬೈನ ಹೊಸ ಹಬ್ಬದ ಉತ್ಸಾಹ ನಿರ್ಮಾಣವಾಗಿದ್ದು, ಜಿಯೋ ವಂಡರ್‌ಲ್ಯಾಂಡ್ ಮುಂಬೈ ನಗರದ ವಾರ್ಷಿಕ ಮೆಗಾ- ಉತ್ಸಾಹ ಕಾರ್ಯಕ್ರಮದಲ್ಲಿ ಒಂದಾಗಲಿದೆ.
ಅಂತಾರಾಷ್ಟ್ರೀಯ ಕಾರ್ನಿವೆಲ್‌ಗಳಿಗೆ ಸಮನಾದ ರೀತಿಯಲ್ಲಿಯೇ ಜಿಯೋ ವಂಡರ್‌ಲ್ಯಾಂಡ್ ನಿರ್ಮಾಣವಾಗಿದ್ದು, ಇಲ್ಲಿ ಮಕ್ಕಳಿಗೆ ಡ್ರೋನ್ ಶೋಗಳು, ಮ್ಯಾಜಿಕ್ ಆಕ್ಟ್ಗಳು, ಫೆರ್ರಿಸ್ ವೀಲ್, ವಿವಿಧ ಪಾರ್ಕ್‌ಗಳು, ಸಾಂತಾ ಕ್ಲಾಸ್, ಫೋಟೋ ಬೂತ್‌ಗಳು ಮತ್ತು ಇನ್ನಿತರ ಮನರಂಜನೆಯ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು, ಇದಲ್ಲದೇ ಹ್ಯಾಮ್ಲಿಸ್ ಫ್ಯಾಮಿಲಿಯ ಹ್ಯಾಮ್ಲೆ ಮತ್ತು ಹ್ಯಾಟ್ಟಿ ಬಿರ್ ಸೇರಿ ವಿಶೇಷ ಪಾತ್ರಗಳ ಮೆರವಣಿಗೆ ಹೆಚ್ಚುವರಿ ಮೆರಗು ತಂದಿತು. ಇದೇ ವೇಳೆ ನಿತಾ ಅಂಬಾನಿ ಮತ್ತು ಸಾಂತಾ ಮಕ್ಕಳಿಗೆ ವಿಶೇಷ ಉಡುಗೊರೆ ವಿತರಿಸಿದರು.
ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತ ನಾಡಿ, ಇದು ಅತ್ಯಂತ ಸಂತೋಷದ ಕ್ಷಣವಾಗಿದೆ. ಮಕ್ಕಳೊಂದಿಗೆ ಖುಷಿ ಯನ್ನು ಹಂಚಿಕೊಳ್ಳ ಬೇಕು. ಮಕ್ಕಳು ಸಮಗ್ರ ಜೀವನ ದೃಷ್ಟಿಕೋನಕ್ಕೆ ಅರ್ಹ ರಾಗಿದ್ದಾರೆ ಮತ್ತು ಹಬ್ಬದ ಋತುವಿನ ಸಂತೋಷ ಸೇರಿದಂತೆ ಪ್ರತಿ ಮಗುವು ಆಡುವ ಹಕ್ಕನ್ನು ಹೊಂದಿರಬೇಕು. ಇದಕ್ಕಾಗಿಯೇ ರಿಲಯನ್ಸ… ಫೌಂಡೇಶನ್ 4000 ಬಡ ಮಕ್ಕಳಿಗೆ ಹೊಸ ಜಿಯೋ ವಂಡರ್‌ಲ್ಯಾಂಡ್ ಅನುಭವದ ಅವಕಾಶ ಮಾಡಿಕೊಟ್ಟಿದೆ ಎಂದರು.
ನೀತಾ ಅಂಬಾನಿ ಅವರೊಂದಿಗೆ ಇಶಾ ಅಂಬಾನಿ ಪಿರಮಾಲ್ ಅವರು ಜಿಯೋ ವಂಡರ್‌ಲ್ಯಾಂಡ್ ಪ್ರಾರಂಭ ವನ್ನು ನೆನಪಿನಲ್ಲಿ ಇರಿಸುವ ಸಲುವಾಗಿ ಭಾರತದ ಅತಿ ಎತ್ತರದ ಸುಸ್ಥಿರ ಕ್ರಿಸ್ಮಸ್ ವೃಕ್ಷದ ದೀಪಗಳನ್ನು ಬೆಳಗಿಸುವುದು ಮೂಲಕ ಚಾಲನೆ ನೀಡಿದರು. ರಿಸೈಕಲ್ 4 ಲೈಫ್ ಕ್ರಿಸ್‌ಮಸ್ ಟ್ರೀ’ ಎನ್ನುವ ಸಂದೇಶವನ್ನು ಸಾರಿಸಿದರು. ನೀತಾ ಅಂಬಾನಿ ಅವರ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇಶನ್ 2012 ರಿಂದ ಹಿಂದುಳಿದ ಮಕ್ಕಳಿಗಾಗಿ ಕ್ರಿಸ್‌ಮಸ್ ಆಚರಣೆಯನ್ನು ಆಯೋಜಿಸುತ್ತಿದೆ. ರಿಲಯನ್ಸ್ ಫೌಂಡೇಶನ್ ಹ್ಯಾಮ್ಲಿಸ್ ಟಾಯ್ ಡೋನೆಷನ್ ಡ್ರೈವ್ ಅನ್ನು ಸಹ ಬೆಂಬಲಿಸುತ್ತದೆ. ಈ ವರ್ಷ ಭಾರತದಾದ್ಯಂತ 5000ಕ್ಕೂ ಹೆಚ್ಚು ಆಟಿಕೆಗಳನ್ನು ಮಕ್ಕಳಿಗೆ ವಿತರಿಸಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.