ನಗರದಲ್ಲಿದ್ದುಕೊಂಡು ಕೃಷಿ ಮಾಡುವ ಶ್ರೀನಿವಾಸ ಆಚಾರ್ಯ
ಹಡಿಲು ಭೂಮಿಯನ್ನು ಗೇಣಿಗೆ ಪಡೆದು ಬೇಸಾಯ
Team Udayavani, Dec 28, 2019, 7:30 AM IST
ಹೆಸರು: ಶ್ರೀನಿವಾಸ ಆಚಾರ್ಯ
ಏನೇನು ಕೃಷಿ:
ಭತ್ತ, ಬಾಳೆ, ತೆಂಗು, ಅಡಿಕೆ, ತರಕಾರಿ
ಎಷ್ಟು ವರ್ಷ: 32
ಕೃಷಿ ಪ್ರದೇಶ: 3.5 ಎಕ್ರೆ
ಉಡುಪಿ: ಕೃಷಿ ಭೂಮಿಗಳಲ್ಲಿ ಇಂದು ಬಹುಮಹಡಿ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತಿರುವ ಸಂದರ್ಭದಲ್ಲಿ ನಗರದ ಹೃದಯ ಭಾಗದಲ್ಲಿದ್ದುಕೊಂಡು ಕೃಷಿ ಭೂಮಿಯಲ್ಲಿ ವರ್ಷ ಪೂರ್ತಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ. ಕೃಷಿಯಿಂದ ದೂರು ಉಳಿಯುತ್ತಿರುವ ಇಂದಿನ ಯುವ ಜನರಿಗೆ ಇವರ ಜೀವನ ಮಾದರಿಯಾಗಿದೆ.
ನಗರದ ಕೃಷಿಕ
ಉಡುಪಿ ತಾಲೂಕಿನ ಬೈಲೂರು 76 ಬಡಗಬೆಟ್ಟು ನಿವಾಸಿ ಶ್ರೀನಿವಾಸ ಆಚಾರ್ಯ ಮೂಲತಃ ಕೃಷಿಕರು. ಅವರ ಕುಟುಂಬಸ್ಥರು ಸುಮಾರು 100 ಎಕ್ರೆಗಿಂತ ಅಧಿಕ ಭೂಮಿಯನ್ನು ಹೊಂದಿದ್ದರು. ಬಾಲ್ಯದಿಂದಲೇ ಕೃಷಿಯ ಕಡೆ ಒಲವು ಮೂಡಿದ ಹಿನ್ನೆಲೆಯಲ್ಲಿ ತಂದೆಯೊಂದಿಗೆ ಬೀಜ ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ತೋಟ ಪ್ರಯೋಗ ಶಾಲೆ!
ಸಾಮಾನ್ಯವಾಗಿ ಅಡಿಕೆ ಮರಕ್ಕೆ ಕಾಳು ಮೆಣಸಿನ ಬಳ್ಳಿ ಹಾಕುವುದು ಸಹಜ ಆದರೆ ಶ್ರೀನಿವಾಸ ಅವರು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ತೆಂಗಿನ ಮರಕ್ಕೆ ಕಾಳು ಮೆಣಸಿನ ಬಳ್ಳಿ ಬಿಡುವ ಹೊಸ ಪ್ರಯೋಗಕ್ಕೆ ಕೈ ಹಾಕಿ ಯಶಸ್ಸು ಗಳಿಸಿದ್ದಾರೆ. ಈ ವಿಧಾನದಿಂದ ಮೆಣಸಿನ ಬಳ್ಳಿಗೆ ಪ್ರತ್ಯೇಕ ಪೋಷಣೆ ಹಾಗೂ ನಿರ್ವಹಣೆ ಅಗತ್ಯವೂ ಇಲ್ಲ. ಬೇರೆ ಊರಿನ ಕೃಷಿಕರು ಈ ಕುರಿತು ಅಧ್ಯಯನ ಮಾಡಿ ತೆರಳಿದ್ದಾರೆ.
ಮಿಶ್ರ ಬೆಳೆ ಹರಿಕಾರ
ಶ್ರೀನಿವಾಸ ಆಚಾರ್ಯ 1 ಎಕ್ರೆ ಜಾಗದಲ್ಲಿ ಭತ್ತ ಕೃಷಿ ಮಾಡುತ್ತಿದ್ದು, ಸುಮಾರು ಎರಡೂವರೆ ಎಕ್ರೆ ಜಾಗದಲ್ಲಿ 89 ತೆಂಗಿನ ಮರ ಹಾಗೂ ನೇಂದ್ರ, ರಸ, ಬೂದು ಸೇರಿದಂತೆ ವಿವಿಧ ಬಗೆಯ 1,000 ಬಾಳೆ ಗಿಡಗಳ ಜತೆಗೆ ಮಿಶ್ರ ಬೆಳೆಗಳಾದ ಸುವರ್ಣಗಡ್ಡೆ ಸೇರಿದಂತೆ ವಿವಿಧ ಬೆಳೆ ಬೆಳೆಸುತ್ತಿದ್ದಾರೆ. 5 ಸಂಪಿಗೆ ಮರಗಳನ್ನು ಬೆಳೆಸಿದ್ದು, ಈ ಮರದಿಂದ ವಾರ್ಷಿಕ ಸುಮಾರು 8 ರಿಂದ 15 ಸಾವಿರ ವರೆಗೆ ಆದಾಯ ಗಳಿಸುತ್ತಿದ್ದಾರೆ. ತೆಂಗಿನ ಕಾಯಿ ಬದಲಾಗಿ ಎಳನೀರಿನ ಕಾಯಿ ತೆಗೆದು ಮಾರಾಟ ಮಾಡುತ್ತಾರೆ. ಇದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎನ್ನುತ್ತಾರೆ. ತೆಂಗಿನ ಮರವೇರಲು ಏಣಿಯನ್ನು ಬಳಸುತ್ತಾರೆ.
ಶ್ರೀನಿವಾಸ ಆಚಾರ್ಯ ಅವರು ಕೃಷಿ ಚಟುವಟಿಕೆ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಯಾಂತ್ರೀಕೃತ ಕೃಷಿಗೆ ಒತ್ತು ನೀಡಿದ್ದಾರೆ. ಮೂರೂವರೆ ಎಕ್ರೆ ಭೂಮಿಯಲ್ಲಿ ಅಡಿಕೆ, ತೆಂಗು, ಭತ್ತ, ಬಾಳೆ, ಮಾವು ಸಹಿತ ವಿವಿಧ ಬಗೆಯ ಮಿಶ್ರ ಬೆಳೆ ತೆಗೆಯುತ್ತಿದ್ದಾರೆ. ಮನೆ ಸುತ್ತಮುತ್ತಲಿನ ಪಾಳು ಹೊಲದಲ್ಲಿ ಅದರ ಮಾಲಕರ ಅನುಮತಿ ಪಡೆದು ಬೇಸಾಯ ಮಾಡುತ್ತಿದ್ದಾರೆ.”
ಸಾವಯವ ಗೊಬ್ಬರ ಬಳಕೆ
ತೆಂಗಿನ ತೋಟ ಸೇರಿದಂತೆ ತರಕಾರಿ, ಭತ್ತದ ಕೃಷಿ ಸೇರಿದಂತೆ ವಿವಿಧ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದ ಕಾರಣ ಹತ್ತೂರ ಜನರು ತರಕಾರಿ ಹಾಗೂ ಬಾಳೆಹಣ್ಣುಗಳನ್ನು ನೇರವಾಗಿ ಇವರ ಮನೆಗೆ ಬಂದು ಖರೀದಿ ಮಾಡುತ್ತಾರೆ. ಇನ್ನೂ ಕೆಲವು ಅಂಗಡಿಗಳ ಮಾಲಕರು ಬಂದು ಖರೀದಿಸಿ ಹೋಗುತ್ತಾರೆ. ಉಳಿದ ವಸ್ತುಗಳನ್ನು ಖಾಯಂ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ಮಾದರಿ ಕೃಷಿಕ
ಶ್ರೀನಿವಾಸ ಆಚಾರ್ಯ ಅವರು ಬಿ.ಎ. ಪದವೀದರರು. ಶಿಕ್ಷಣ ಮುಗಿಸಿದ ಕೂಡಲೇ ಹಲವು ಉದ್ಯೋಗಗಳು ಇವರನ್ನು ಅರಸಿ ಬಂದಿದ್ದವು. ಆದರೆ ಇವರು ಅದರತ್ತ ಮುಖಮಾಡದೆ ಕೃಷಿಯಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. 1ಎಕ್ರೆ ಭೂಮಿಯಲ್ಲಿ ವಾರ್ಷಿಕ ಸುಮಾರು 20 ಕ್ವಿಂಟಾಲ್ ಭತ್ತದ ಬೆಳೆ ತೆಗೆಯುತ್ತಾರೆ. ಕೃಷಿ ಚಟುವಟಿಕೆಗೆ ಪತ್ನಿ ಜಯಲಕ್ಷ್ಮೀ ಅವರ ಜತೆಗೆ ಮಕ್ಕಳು ಸಹ ಕೈ ಜೋಡಿಸಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ಸಾಧನೆ ತೋರಿದ್ದಾರೆ. ಇವರಿಗೆ ಜಿಲ್ಲಾಮಟ್ಟದ ಶೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ.
ಪರ್ಯಾಯ ಬೆಳೆಗಳನ್ನು ಬೆಳೆಯಿರಿ
ಕೂಲಿ ಕಾರ್ಮಿಕರು ಹಾಗೂ ಒಂದೇ ಬೆಳೆಯನ್ನು ನಂಬಿಕೊಂಡು ಇದ್ದರೆ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯ ಇಲ್ಲ. ಅನುಕೂಲಕ್ಕೆ ತಕ್ಕಂತೆ ಕೃಷಿಯನ್ನು ಯಾಂತ್ರೀಕೃತಗೊಳಿಸಿದರೆ ಉತ್ತಮ ಲಾಭಗಳಿಸಲು ಸಾಧ್ಯ. ಯಾರೂ ಕೂಡ ಭೂಮಿಯನ್ನು ಹಡಿಲು ಹಾಕಬೇಡಿ. ಭತ್ತ ಕಷ್ಟವಾದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಪ್ರಯತ್ನಕ್ಕೆ ಮುಂದಾಗಬೇಕು. ಹಡಿಲು ಬಿದ್ದಿರುವ ಭೂಮಿಯನ್ನು ಅದರ ಮಾಲಕರ ಬಳಿ ವಿಚಾರಿಸಿ ಗೇಣಿಗೆ ಪಡೆದು ಕೃಷಿ ಮಾಡಿ. ಇದರಿಂದ ಒಂದು ಕೃಷಿ ಭೂಮಿ ನಾಶವಾಗುವುದನ್ನು ತಪ್ಪಿಸಬಹುದು.
ಶ್ರೀನಿವಾಸ ಆಚಾರ್ಯ, ಕೃಷಿಕ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.