ಅಂಡರ್-19 ಏಕದಿನ ಕ್ರಿಕೆಟ್ : ದ.ಆಫ್ರಿಕಾಕ್ಕೆ ಆಘಾತವಿಕ್ಕಿದ ಭಾರತ
Team Udayavani, Dec 27, 2019, 11:52 PM IST
ಈಸ್ಟ್ ಲಂಡನ್ (ದಕ್ಷಿಣ ಆಫ್ರಿಕಾ): ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತದ ಕಿರಿಯರ ತಂಡ ಭರ್ಜರಿ ತಯಾರಿ ನಡೆಸಿದೆ. ಇಲ್ಲಿನ “ಬಫಲೊ ಪಾರ್ಕ್’ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್ಗಳಿಂದ ಭರ್ಜರಿಯಾಗಿ ಮಣಿಸಿದೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 48.3 ಓವರ್ಗಳಲ್ಲಿ 187 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟಾಯಿತು. ಗುರಿ ಬೆನ್ನತ್ತಿದ ಭಾರತ 42.3 ಓವರ್ಗಳಲ್ಲಿ ಕೇವಲ ಒಂದೇ ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಅಮೋಘ ಆರಂಭ
ಭಾರತದ ಆರಂಭಕಾರರಾದ ದಿವ್ಯಾಂಶ್ ಸಕ್ಸೇನಾ (ಅಜೇಯ 86) ಮತ್ತು ತಿಲಕ್ ವರ್ಮ (59) 30.5 ಓವರ್ಗಳ ಜತೆಯಾಟದಲ್ಲಿ 121 ರನ್ ಪೇರಿಸಿ ಗೆಲುವಿನ ಹಾದಿ ಯನ್ನು ಸುಗಮಗೊಳಿಸಿದರು. ಕುಮಾರ ಕುಶಾಗ್ರ 43 ರನ್ ಮಾಡಿ ಅಜೇಯರಾಗಿ ಉಳಿದರು.
ಭಾರತ ಸಾಂಕ ದಾಳಿಯ ಮೂಲಕ ಹರಿಣಗಳ ಮೇಲೆರಗಿತು. ರವಿ ಬಿಶ್ನೋಯಿ 3 ವಿಕೆಟ್ ಉರುಳಿಸಿದರೆ, ಉಡುಪಿ ಮೂಲದ ಶುಭಾಂಗ್ ಹೆಗ್ಡೆ, ಕಾರ್ತಿಕ್ ತ್ಯಾಗಿ ಮತ್ತು ಅಥರ್ವ ಅಂಕೋಲೆಕರ್ ತಲಾ 2 ವಿಕೆಟ್ ಕಿತ್ತರು. ಆತಿಥೇಯರ ಪರ ಲ್ಯೂಕ್ ಬ್ಯೂಫೋರ್ಟ್ 64 ರನ್ ಹೊಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ದ. ಆಫ್ರಿಕಾ- 48.3 ಓವರ್ಗಳಲ್ಲಿ 187 (ಬ್ಯೂಫೋರ್ಟ್ 64, ಲೀಸ್ 27, ಬಿಶ್ನೋಯಿ 36ಕ್ಕೆ 3, ತ್ಯಾಗಿ 28ಕ್ಕೆ 2, ಶುಭಾಂಗ್ ಹೆಗ್ಡೆ 32ಕ್ಕೆ 2, ಅಂಕೋಲೆಕರ್ 35ಕ್ಕೆ 2). ಭಾರತ-42.3 ಓವರ್ಗಳಲ್ಲಿ ಒಂದು ವಿಕೆಟಿಗೆ 190 (ಸಕ್ಸೆನಾ ಅಜೇಯ 86, ತಿಲಕ್ 59, ಕುಶಾಗ್ರ ಅಜೇಯ 43).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.