ಸಾಹಿತ್ಯದ ನಿಜ ಪರಿಚಾರಕ


Team Udayavani, Dec 29, 2019, 4:14 AM IST

81

ಉಡುಪಿ ಜಿಲ್ಲೆಯ ಕಾರ್ಕಳವನ್ನು ಕಾರ್ಯಸ್ಥಾನವಾಗಿರಿಸಿಕೊಂಡು ಸಾಹಿತ್ಯ ಸಮ್ಮೇಳನಗಳ ಸಂಘಟನೆ, ಪ್ರಸಿದ್ಧ ಸಾಹಿತಿಗಳ ಉಪನ್ಯಾಸಗಳ ಆಯೋಜನೆ, ವಿದ್ವತೂ³ರ್ಣ ಪುಸ್ತಕಗಳ ಪ್ರಕಟಣೆ- ಹೀಗೆ ಹಲವು ಬಗೆಗಳಲ್ಲಿ ಕ್ರಿಯಾಶೀಲರಾಗಿದ್ದ ಎಂ. ರಾಮಚಂದ್ರ ಇತ್ತೀಚೆಗೆ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಜಿ. ಪಿ. ರಾಜರತ್ನಂ ಹೆಸರಿನ “ಸಾಹಿತ್ಯ ಪರಿಚಾರಕ ಪ್ರಶಸ್ತಿ’ ಘೋಷಣೆಯಾಗಿತ್ತು. ಅದನ್ನು ಸ್ವೀಕರಿಸುವ ಮೊದಲೇ ಅವರು ನಿರ್ಗಮಿಸಿದ್ದಾರೆ.

ಇಂದು ನಮ್ಮ ಮುಂದೆ ಶುಭ್ರಶ್ವೇತವಸನಧಾರಿ ಹಸನ್ಮುಖೀ ಸಾಹಿತ್ಯಾರಾಧಕ ಪ್ರೊ. ಎಂ. ರಾಮಚಂದ್ರರು ಇಲ್ಲ. ಡಿಸೆಂಬರ್‌ 20ರಂದು ಉಷಃಕಾಲಕ್ಕೆ ಒಂದಿಷ್ಟು ಪೂರ್ವದಲ್ಲಿ ನಮ್ಮನ್ನಗಲಿದರು. ಒಂದು ವಾರದ ಮೊದಲು ಅವರು ಹೇಳಿದ ಒಂದು ಮಾತು ಹೀಗಿತ್ತು : “”ಬರುವ 19ನೇ ತಾರೀಕಿನ ಅನಂತರ ನಾನು ನಿಮಗೆ ಕಾಣಸಿಗುವುದಿಲ್ಲ”.  ಪ್ರೊ. ರಾಮಚಂದ್ರರು ಮೇಲಿನ ಮಾತನ್ನು ಹೇಳಿದ ಸಂದರ್ಭ ಬೇರೆಯಾದರೂ ಇಂದು ನೆನಪಿಸಿಕೊಳ್ಳುವಾಗ ದೈವವೇ ಅವರ ಬಾಯಿಯಿಂದ ಈ ಮಾತನ್ನಾಡಿಸಿತೆ? ಎಂಬ ಸಂದೇಹ ಬಾರದಿರದು.

ಯಾವುದೇ ಕೆಲಸವನ್ನಾದರೂ ಪೂರ್ವಯೋಜನೆಯಿಂದ ಹಂತ ಹಂತವಾಗಿ ಅಳವಡಿಸಿಕೊಂಡು ಸೊಗಸಾಗಿ ಮಾಡಿಮುಗಿಸಬೇಕೆಂಬುದು ಪ್ರೊ. ರಾಮಚಂದ್ರರ ಇಂಗಿತ. ಈ ಪುಸ್ತಕಗಳಿಗೂ ಯೋಗ್ಯರಿಂದ ಮುನ್ನುಡಿಯನ್ನು ಬರೆಯಿಸಿಕೊಳ್ಳಬೇಕೆಂದು ಸಂಕಲ್ಪಿಸಿ ಡಾ. ಎಸ್‌. ಎಲ್‌. ಭೈರಪ್ಪ ಮತ್ತು ಪ್ರೊ. ಅ. ರಾ. ಮಿತ್ರ ಅವರನ್ನು ಕೇಳಿಕೊಂಡ ಪ್ರಕಾರ ಮುನ್ನುಡಿಗಳು ಕೈಗೆ ಬಂದಿದ್ದುವು. ಆದರೆ, ಪುಸ್ತಕ ಪ್ರಕಟವಾಗುವ ಮುನ್ನ ಅವರು ತೆರಳಿದರು.

ಒಂದು ದಿನ ಮುಂಚಿತವಾಗಿ ಕರ್ನಾಟಕ ಪುಸ್ತಕ ಪ್ರಾಧಿಕಾರವು ಪ್ರೊ. ರಾಮಚಂದ್ರರಿಗೆ ಸಾಹಿತ್ಯ ಪರಿಚಾರಿಕೆಗಾಗಿ ನೀಡುವ ರಾಜರತ್ನಂ ಅವರ ಹೆಸರಿನ ಪ್ರಶಸ್ತಿಯನ್ನು ಘೋಷಿಸಿತು. ಪ್ರಶಸ್ತಿ-ಪುರಸ್ಕಾರ-ಸಮ್ಮಾನಗಳ ಅಪೇಕ್ಷೆಯಿಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಸತತ ಕ್ರಿಯಾಶೀಲರಾಗಿದ್ದ ರಾಮಚಂದ್ರರಿಗೆ ರಾಜರತ್ನಂ ಅವರ ಬಗೆಗೆ ತುಂಬ ಗೌರವವಿತ್ತು. ಅವರ ಕಾರ್ಯದರ್ಶಿತ್ವದಲ್ಲಿ 1971ರಲ್ಲಿ ಕಾರ್ಕಳದಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲೆಯ ಮೊದಲನೆಯ ಸಾಹಿತ್ಯ ಸಮ್ಮೇಳನಕ್ಕೆ ರಾಜರತ್ನಂ ಅವರನ್ನೇ ಅಧ್ಯಕ್ಷರನ್ನಾಗಿ ಕರೆಯಲಾಗಿತ್ತು. ರಾಜರತ್ನಂ ಅವರ “ಸಾಹಿತ್ಯಪರಿಚಾರಕ’ ಎಂಬ ಮಾತು ಅವರಿಗೆ ತುಂಬ ಪ್ರಿಯವಾದುದಾಗಿತ್ತು. ರಾಜರತ್ನಂ ಅವರು ತಮ್ಮನ್ನು ತಾವು ಆ ಹೆಸರಿನಿಂದಲೇ ಗುರುತಿಸಿಕೊಂಡಂತೆ ರಾಮಚಂದ್ರರೂ ಅದೇ ಹೆಸರಿನಿಂದ ಗುರುತಿಸಿಕೊಳ್ಳಲು ಸಂತೋಷಪಡುತ್ತಿದ್ದರು. ಜನವರಿ 2020ರಲ್ಲಿ ಬೆಂಗಳೂರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗುವ ನಿಶ್ಚಯವನ್ನೂ ಅವರು ಮಾಡಿದ್ದರು. ಈ ಪ್ರಶಸ್ತಿ ಘೋಷಣೆಯ ಸಂತೋಷವನ್ನು ಮಾತ್ರ ಅವರು ಅನುಭವಿಸುವಂತಾದುದು ದೈವಲೀಲೆ.

ಪ್ರೊ. ರಾಮಚಂದ್ರರಿಗೆ ಸೇಡಿಯಾಪು ಕೃಷ್ಣ ಭಟ್ಟರು ಪಾಠ ಮಾಡಿದ ಗುರುಗಳು. ಜೀವನದ ಕೊನೆಯವರೆಗೆ ಅವರ ಗುರುಭಕ್ತಿ ವಿಶೇಷವಾಗಿತ್ತು. ರಾಜರತ್ನಂ ಅವರು ಅವರ ಸಾಹಿತ್ಯಸೇವೆಗೆ ಮಾದರಿಯಾಗಿದ್ದರು. ಏರ್ಯ ಲಕ್ಷ್ಮೀನಾರಾಯಣ ಆಳ್ವರು ಚಟುವಟಿಕೆಗಳಿಗೆ ಸ್ಫೂರ್ತಿಯಾಗಿದ್ದರು. ಡಾ. ವೀರೇಂದ್ರ ಹೆಗ್ಗಡೆಯವರು ಅವರ ಗೌರವಾದರಗಳಿಗೆ ಪಾತ್ರವಾಗಿದ್ದರು. ಧರ್ಮಸ್ಥಳದ ಎಲ್ಲ ಚಟುವಟಿಕೆಗಳಿಗೆ ರಾಮಚಂದ್ರರು ಒದಗಿಬರುತ್ತಿದ್ದರು. ಕನ್ನಡ ನವೋದಯದ ಹಿರಿಯ ಸಾಹಿತಿಗಳೆಲ್ಲರ ಸಂಪರ್ಕ ಅವರಿಗಿತ್ತು. ಕಾರ್ಕಳದ ಭುವನೇಂದ್ರ ಕಾಲೇಜಿಗೆ ಕನ್ನಡ ನಾಡಿನ ಎಲ್ಲ ಹಿರಿಯ ಲೇಖಕರನ್ನು ಅವರು ಆಹ್ವಾನಿಸಿ ಕರೆತಂದಿದ್ದರು. 1997ರಲ್ಲಿ ಕಾಲೇಜಿನ ಪ್ರಾಧ್ಯಾಪಕತ್ವದಿಂದ ವಿಶ್ರಾಂತರಾದ ಮೇಲೆ 1997ರಲ್ಲಿ “ಕಾರ್ಕಳ ಸಾಹಿತ್ಯಸಂಘವನ್ನು ಸ್ಥಾಪಿಸಿ ನಿರಂತರವಾದ ಕಾರ್ಯಕ್ರಮಗಳನ್ನು ನಡೆಸಿದರು.ಸ್ಥಾಪಕಕಾರ್ಯದರ್ಶಿಯಾಗಿಯೂ2001ರಿಂದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದರು. ಸಾಹಿತ್ಯಾಸಕ್ತ ಮತ್ತು ಚಿಂತನಾಸಕ್ತರ ಒಂದು ಬಳಗವನ್ನು ಕಾರ್ಕಳದಲ್ಲಿ ಸೃಷ್ಟಿಸಿದರು. ಇದರೊಂದಿಗೆ ಪತ್ರಿಕೆಗಳಿಗೆ ವರದಿ, ಪತ್ರಿಕಾ ಲೇಖನಗಳು, ಹಿರಿಯ ಸಾಹಿತಿಗಳ ಬಗೆಗಿನ ಅಭಿನಂದನ ಮತ್ತು ಸಂಸ್ಮರಣ ಲೇಖನಗಳು, ಉಪನ್ಯಾಸಗಳು ನಡೆಯುತ್ತಲೇ ಇದ್ದುವು.

ವಿದ್ಯಾವಂತನ ವಿನಯ
ತಮಗೆ 60 ವರ್ಷವಾದಾಗ ಕೃತಿ-ಆಕೃತಿ ಎಂಬ ಒಂದು ಕಿರುಹೊತ್ತಗೆಯನ್ನು ಸಿದ್ಧಪಡಿಸಿ ಅದರಲ್ಲಿ ಹಿರಿಯರು ಅವರಿಗೆ ಬರೆದ ಪತ್ರಗಳನ್ನೂ ಅವರ ಕೃತಿಗಳ ಬಗೆಗಿನ ಕೆಲವು ಪರಿಚಯ ಲೇಖನಗಳನ್ನೂ ಸೇರಿಸಿದ್ದರು.ಮಣಿಪಾಲ ಸಾಹಿತ್ಯಸಂಘವು ಈ ಕಿರುಹೊತ್ತಗೆಯನ್ನು ಪ್ರಕಟಿಸಿತು. ಅದರಲ್ಲಿನ ಕೃತಾರ್ಥ-ಕೃತಜ್ಞ ಎಂಬ ಲೇಖನದ ಕೊನೆಗೆ ಅವರು ಬರೆದ ಮಾತುಗಳು ಹೀಗಿವೆ : ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಎಂಬುದೊಂದು ಕಾವ್ಯೋಕ್ತಿ. ನಾನು ಶಿವಯೋಗಿಯಲ್ಲ; ಮನುಷ್ಯಸಾಮಾನ್ಯ, ನಿವೃತ್ತ ಅಧ್ಯಾಪಕ. ಆದರೆ, ನಿವೃತ್ತ ಜೀವನವನ್ನು ಉಪಯುಕ್ತ ಕ್ಷೇತ್ರಗಳಲ್ಲಿ ಸಾರ್ಥಕಗೊಳಿಸಬೇಕೆಂಬುದೇ ನನ್ನ ಸಂಕಲ್ಪ. ಅದು ಕಾರ್ಯರೂಪವನ್ನು ತಾಳುವಂತಾಗಲು ಹಿರಿಯರ, ಹಿತವಂದಿಗರ, ಗೆಳೆಯರ ಹರಕೆ ಅಕ್ಕರೆ ಹಾರೈಕೆಗಳು. ನನ್ನ ಕಣೆ ಕಾಮನರಕ್ಷೆ, ಬೆನೆ ಭೀಮನ ರಕ್ಷೆ, ಮುಂಗೈ ಮುರಾರಿ ರಕ್ಷೆಯಾಗಿ ಒದಗಿಬರಲಿ ಎಂದು ಕೋರುತ್ತೇನೆ.

ಗುರು ಸೇಡಿಯಾಪು ಅವರು ಶಿಷ್ಯ ರಾಮಚಂದ್ರರಿಗೆ ಬರೆದ ಪತ್ರದಲ್ಲಿ ಪ್ರಿಯಚಂದ್ರಮಾ ಎಂಬ ಸಂಬೋಧನೆಯಿರುತ್ತಿತ್ತು. ಗುರುಕೃಪೆಯ ಈ ನೂತನ ನಾಮಧೇಯವನ್ನು ಆಶೀರ್ವಾದ ರೂಪದಲ್ಲಿ ರಾಮಚಂದ್ರರು ಪಡೆದರು. ಗುರು ಸೇಡಿಯಾಪು ಅವರ ಸಂಸ್ಮರಣ ಕಾರ್ಯಕ್ರಮಗಳನ್ನು ಮಾತ್ರವಲ್ಲ ಕನ್ನಡ ಸಾಹಿತ್ಯದ ಹಿರಿಯ ಗುರುಗಳೆಲ್ಲರ ಅಭಿನಂದನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ರಾಮಚಂದ್ರರು ದುಡಿದರು. ಇದು ಅವರಿಗೆ ತುಂಬ ಪ್ರಿಯವಾದ ಕೆಲಸವಾಗಿತ್ತು. ಗುರು ಸೇಡಿಯಾಪು ಅವರ 106 ಪತ್ರಗಳನ್ನು ಒಟ್ಟು ಸೇರಿಸಿ ಪತ್ರಾವಳಿ ಎಂಬ ಕೃತಿಯನ್ನು 1991ರಲ್ಲಿ ಪ್ರಕಟಿಸಿದ್ದರು. ರಾಮಚಂದ್ರರ ಮೊದಲನೆಯ ಪುಸ್ತಕ ಸೇಡಿಯಾಪು ಅವರ ಬಗೆಗೇ ಆಗಿತ್ತು (1965). 20ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಮತ್ತು ಸಂಪಾದಿಸಿ ಸಾಹಿತ್ಯಲೋಕಕ್ಕೆ ನೀಡಿದ ರಾಮಚಂದ್ರರು ಸಿದ್ಧಗೊಳ್ಳುತ್ತಿದ್ದ ತಮ್ಮ ಎರಡು ಕೃತಿಗಳಿಗೆ ಮೊದಲ ಮಾತುಗಳನ್ನು ಬರೆಯುವ ಅವಕಾಶವನ್ನು ವಿಧಿ ಅವರಿಗೆ ನೀಡಲಿಲ್ಲ.

ಪ್ರೊ. ರಾಮಚಂದ್ರರು ಅಧ್ಯಾಪಕರಾಗಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದವರು; ಸಾಹಿತ್ಯರಚನೆ ಮತ್ತು ವಿಮರ್ಶೆಯ ಬಗೆಗೆ ತಮ್ಮದೇ ದೃಷ್ಟಿಕೋನವನ್ನಿರಿಸಿಕೊಂಡವರು; ಸಾಹಿತ್ಯದ ಪಂಥ-ಪಂಗಡಗಳಿಂದ ಮೀರಿ ನಿಂತವರು; ಸಾಹಿತಿಗಳ ನಿರಂತರ ಸಂಪರ್ಕದಲ್ಲಿದ್ದವರು; ತಮ್ಮ ಪರಿಸರದ ಜನತೆ ಸಾಹಿತ್ಯದ ಸುಗಂಧದಿಂದ ಸಂಭ್ರಮಿತರಾಗಬೇಕೆಂದೂ ಉತ್ಸಾಹಿತರಾಗಬೇಕೆಂದೂ ತನ್ಮೂಲಕ ನೆಮ್ಮದಿಯ ಬಾಳನ್ನು ಕಾಣಬೇಕೆಂದೂ ಬಯಸಿದವರು. ತಮ್ಮ ಅನುಭವಗಳನ್ನು ನೆನಪಿನ ಸುರಗಿ ಎಂಬ ಕೃತಿಯಲ್ಲಿ ದಾಖಲಿಸಿದ್ದರೂ ಸಾಹಿತ್ಯಲೋಕದ ಇನ್ನಷ್ಟು ವೈಶಿಷ್ಟ್ಯಪೂರ್ಣವಾದ ಅನುಭವಗಳನ್ನು ದಾಖಲಿಸಬೇಕೆಂಬ ನಮ್ಮ ಉಡುಗೆಯ ಶುಭ್ರ ಶುಚಿತ್ವದಂತೆ ಮಾತು- ಸಾಹಿತ್ಯ-ನಡೆನುಡಿಗಳೂ ಶುಭ್ರವಾಗಿರುವಂತೆ ಕೊನೆಯವರೆಗೆ ಜಾಗರೂಕರಾಗಿ ನಡೆದ ಅವರ ವ್ಯಕ್ತಿತ್ವ ನಿಜಕ್ಕೂ ಹಿರಿದು.

ಪಾದೇಕಲ್ಲು ವಿಷ್ಣು ಭಟ್ಟ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.