ಕಡೂರಲ್ಲಿ ಬೀದಿನಾಯಿಗಳ ಗುರ್ರ್ !
ಮಕ್ಕಳು-ಮಹಿಳೆಯರು ಹಾಗೂ ನಾಗರಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ
Team Udayavani, Dec 28, 2019, 1:00 PM IST
ಕಡೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನ ಓಡಾಡುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ. ಅದರಲ್ಲೂ ಮಕ್ಕಳು-ಮಹಿಳೆಯರಂತೂ ಕೈಯಲ್ಲಿ ಜೀವ ಹಿಡಿದುಕೊಂಡು ಭಯದಲ್ಲೇ ಓಡಾಡಬೇಕಿದೆ.
ಪಟ್ಟಣದ ಛತ್ರದ ಬೀದಿ, ಬಸವೇಶ್ವರ ವೃತ್ತ, ಎಪಿಎಂಸಿ, ಮರವಂಜಿ ವೃತ್ತ, ಹಳೇ ಸಂತೆ ಮೈದಾನ ಸೇರಿದಂತೆ ಇತರೆ ಬಡಾವಣೆ ಮತ್ತು ಬೀದಿಗಳಲ್ಲಿ ಅಲ್ಲಲ್ಲಿ ಗುಂಪು-ಗುಂಪಾಗಿ ಸಾಗುವ ಶ್ವಾನಗಳ ಹಿಂಡು ದಾರಿಯಲ್ಲಿ ಸಾಗುವವರನ್ನು ಕಂಡ ಕೂಡಲೇ ಬೊಗಳುತ್ತ ಕಚ್ಚಲು ಮುಂದಾಗುತ್ತವೆ. ಇದರಿಂದ ಜನ ನಾಯಿಗಳಿವೆಯೇ ಇಲ್ಲವೇ ಎಂಬುದನ್ನು ನೋಡುತ್ತ ಭಯದಲ್ಲೇ ಓಡಾಡುವಂತಾಗಿದೆ.
ಕಡೂರು ಪಟ್ಟಣ ಹಾಗೂ ಗ್ರಾಮಾಂತರ ಭಾಗದಿಂದ ನಾಯಿ ಕಡಿತಕ್ಕೊಳಗಾದ ಕನಿಷ್ಠ 5 ರಿಂದ 8 ಮಂದಿ ಪ್ರತಿದಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದು, ನಾಯಿ ಕಾಟ ಎಷ್ಟು ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಾಯಿ ಕಡಿತಕ್ಕೊಳಗಾದವರು ಕನಿಷ್ಠ 5 ರಿಂದ ಗರಿಷ್ಠ 9 ಇಂಜೆಕ್ಷನ್ ತೆಗೆದುಕೊಳ್ಳಲೇಬೇಕಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಕೊರತೆ ಇಲ್ಲವಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯುತ್ತಿದೆ. ಶ್ವಾನ ಕಾಟದಿಂದ ಪೋಷಕರು ಮಕ್ಕಳನ್ನು ರಸ್ತೆಗೆ ಬಿಡಲು
ಹೆದರುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಅಂಗಡಿಗಳಿಗೆ ತೆರಳಲು ಮಕ್ಕಳಲ್ಲ, ಹಿರಿಯರೂ ಸಹ ಹಿಂಜರಿಯುತ್ತಿದ್ದಾರೆ.
ಯಾವ ರಸ್ತೆ ನೋಡಿದರೂ ಗುರ್.. ಎನ್ನುವ , ಬೊಗಳುತ್ತ ಒಮ್ಮೆಲೇ ಕಚ್ಚಲು ಬರುವ ನಾಯಿಗಳು ಅಡ್ಡಾಡುತ್ತಲೇ ಇರುತ್ತವೆ. ಎರಡು ಸಾವಿರ ಶ್ವಾನ: ಕಡೂರು ಪಟ್ಟಣದಲ್ಲಿ ಅಂದಾಜು ಎರಡು ಸಾವಿರ ನಾಯಿಗಳಿವೆ ಎಂದು ಹೇಳಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಬಹುತೇಕ ಬೀದಿಗಳಲ್ಲಿ ಜಮಾಯಿಸುವ ನಾಯಿಗಳು ಅರಚುತ್ತಾ, ಬೊಗಳುತ್ತಾ ತಿರುಗುತ್ತವೆ. ಇದರಿಂದ ರೈಲು ಮತ್ತು ಬಸ್ ಮೂಲಕ ಬೇರೆ ಊರಿಗೆ ತೆರಳುವವರು, ಜಾಗಿಂಗ್ ಹಾಗೂ
ವಾಕಿಂಗ್ ಮಾಡುವವರು, ಹಾಲು ಮತ್ತು ದಿನಪತ್ರಿಕೆ ಹಂಚುವವರು ಹೀಗೆ ನಿತ್ಯ ನೂರಾರು ಜನ ನಾಯಿಗಳಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಕೋರ್ಟ್ ತೀರ್ಪಿನ ಅನ್ವಯ ನಾಯಿಗಳನ್ನು ಹಿಡಿದು ಸಾಯಿಸಲು
ಅವಕಾಶವಿಲ್ಲ. ಬದಲಿಗೆ ಅವುಗಳನ್ನು ಹಿಡಿದು ಸಂತಾನ ಹರಣ
ಚುಚ್ಚುಮದ್ದು ನೀಡಬೇಕು. ಆದರೆ ಈ ಕಾರ್ಯಕ್ಕೆ ಮುಂದಾಗಬೇಕಾದ ಪುರಸಭೆ ಮೌನವಾಗಿದೆ. ಆದಷ್ಟು ಬೇಗ ಬೀದಿ ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ
ದೊರಕಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
ಪಟ್ಟಣದ ಆಸ್ಪತ್ರೆಗೆ ನಿತ್ಯ 4-5 ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯಲು ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿಲ್ಲ. ಗಾಯದ ಪ್ರಮಾಣ ಮತ್ತು ಹುಚ್ಚು ನಾಯಿಯೇ ಎಂಬುದನ್ನು ಖಚಿತಪಡಿಸಿಕೊಂಡು ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.
ಡಾ| ಉಮೇಶ್,
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಮಿತಿ ಮೀರಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ನಾಯಿಗಳನ್ನು ಹಿಡಿದು
ಅವುಗಳಿಗೆ ಸಂತಾನ ಹರಣ ಲಸಿಕೆ ನೀಡಿದಲ್ಲಿ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ ತಜ್ಞರ ಅವಶ್ಯಕತೆ
ಇದ್ದು, ಸಂಬಂಧಪಟ್ಟ ಅಧಿಕಾರಿಗಳು ನಾಯಿ ಹಿಡಿಯುವ ತಜ್ಞರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಬೇಕು.
ವೆಂಕಟೇಶ್ ಗಾಣಿಗ,
ಸ್ಥಳೀಯ ವ್ಯಾಪಾರಿ
ಎ.ಜೆ. ಪ್ರಕಾಶ್‌ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.