ಹೆಸ್ಕಾಂ ಕಚೇರಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದ ರೈತ
Team Udayavani, Dec 28, 2019, 1:15 PM IST
ಹಾವೇರಿ: ಹೊಲದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆಗೆದಿರುವುದು ಹಾಗೂ ಜಮೀನಿನಲ್ಲಿರುವ ಪಂಪ್ ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತನೋರ್ವ ಹೆಸ್ಕಾಂ ಕಚೇರಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಕುರುಬಗೊಂಡ ಗ್ರಾಮದ ಭರಮಗೌಡ ರಾಯಣ್ಣನವರ ಪ್ರತಿಭಟನೆ ಮಾಡಿದ ರೈತ. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರು ಬಂದು ಹೆಸ್ಕಾಂ ಕಚೇರಿ ಆವರಣ ಗೇಟಿಗೆ ಬಾಗಿಲು ಹಾಕಿ ಪ್ರತಿಭಟನೆ ಆರಂಭಿಸಿದರು. ಇದರಿಂದ ಆಗ ತಾನೇ ಕಚೇರಿಗೆ ಆಗಮಿಸುತ್ತಿದ್ದ ಕಚೇರಿಯ ಸಿಬ್ಬಂದಿ, ಅಧಿಕಾರಿಗಳು ಗೇಟಿನ ಹೊರಗೇ ನಿಲ್ಲಬೇಕಾಯಿತು. ಅಧಿಕಾರಿ, ಸಿಬ್ಬಂದಿಗಳು ಎಷ್ಟೇ ಮನವೊಲಿಸಿದರೂ ರೈತ ಗೇಟು ತೆಗೆಯಲು ಒಪ್ಪಲಿಲ್ಲ. ಆಗ ಕಚೇರಿ ಸಿಬ್ಬಂದಿಗಳೇ ಬಲವಂತದಿಂದ ಆತನನ್ನು ಪಕ್ಕಕ್ಕಿ ತಳ್ಳಿ ಗೇಟ್ ತೆಗೆದು ಒಳ ನಡೆದರು.
ರೈತನೊಂದಿಗೆ ಅಧಿಕಾರಿ, ಸಿಬ್ಬಂದಿಗಳು ವಾಗ್ವಾದ ನಡೆಸುತ್ತಿದ್ದಂತೆ ನೂರಾರು ಜನರು ಜಮಾಯಿಸಿ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತನನ್ನು ಸಮಾಧಾನಗೊಳಿಸಿ, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳ ಎದುರು ಕರೆದೊಯ್ದರು.
ದೂಡಿ ಒಳಗೆ ಬಂದರು: ಕಚೇರಿಯ ಹಿರಿಯ ಅಧಿಕಾರಿಗಳ ಎದುರು ಬಂದ ರೈತ ಭರಮಗೌಡ, ಕಳೆದ ಒಂದು ವರ್ಷದಿಂದ ಅಲೆದಾಡಿದರೂ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ. ಮೊನ್ನೆ ನಾನು ಅವರಿಗೆ ಎಚ್ಚರಿಕೆ ಕೊಟ್ಟಂತೆ ಇಂದು ಗೇಟಿಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ನನ್ನನ್ನು ಬಲವಂತದಿಂದ ದೂಡಿ ಕೀಲಿ ತೆಗೆದರು. ಇವರ ವರ್ತನೆಯಿಂದ ಪೆಟ್ರೋಲ್ ಸುರಿದುಕೊಂಡು ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುವಷ್ಟು ಕೋಪ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಅಧಿಕಾರಿ : ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್ ಸಿ.ವಿ. ಹೊಸಮನಿ, ಪ್ರತಿಭಟನಾನಿರತ ರೈತನ ಹೊಲದಲ್ಲಿದ್ದ ವಿದ್ಯುತ್ ಕಂಬಗಳನ್ನು ಇಲಾಖೆಯಿಂದ ತೆಗೆದಿಲ್ಲ. ಪಕ್ಕದ ಹೊಲದವರು ತೆಗೆದಿರಬಹುದು. ಕಂಬಗಳು ಅಲ್ಲಿಯೇ ಇವೆ. ಇನ್ನು ರೈತನ ಹೊಲ ವ್ಯಾಪ್ತಿಯಲ್ಲಿ 25 ಎಚ್‌ಪಿ ವಿದ್ಯುತ್ ಪರಿವರ್ತಕವಿದ್ದು, ಅದನ್ನು ಇವತ್ತೇ 63 ಎಚ್‌ಪಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಿ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು. ಬಳಿಕ ಅಕ್ರಮ-ಸಕ್ರಮ ಯೋಜನೆಯಡಿ ಅದನ್ನು ಸಕ್ರಮಗೊಳಿಸಲಾಗುವುದು. ಸದ್ಯಕ್ಕೆ ವಿದ್ಯುತ್ ಸಂಪರ್ಕ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.