ಸಂಶೋಧನಾ ಕೇಂದ್ರಗಳಿಗೆ ಅಗತ್ಯ ಸಹಕಾರ


Team Udayavani, Dec 28, 2019, 3:04 PM IST

br-tdy-1

ದೇವನಹಳ್ಳಿ: ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಸಂಶೋಧನೆ ಮೂಲಕ ಮರು ಬಳಕೆ ಮಾಡುವುದರ ಮೂಲಕ ಪರಿಸರ ಹಾನಿ ತಗ್ಗಿಸಲು ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಿಳಿಸಿದರು.

ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೇಂದ್ರೀಯ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ, ರಾಸಾಯಿನಿಕ ಮತ್ತು ಪೆಟ್ರೋಲಿಯಂ ಸಚಿವಾಲಯ ವತಿಯಿಂದ ಸ್ಥಾಪಿಸಿರುವ ಸಿಪೆಟ್‌ ಎಸ್‌ಎಆರ್‌ಪಿ. ಎಪಿಪಿಡಿಎಲ್‌ಆರ್‌ ಪಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸಂಶೋಧನೆ ಕೇಂದ್ರಗಳು ಸ್ಥಾಪನೆ ಆಗುವುದರಿಂದ ಜನರ ಮತ್ತು ರೈತರ ಬದುಕು ಬದಲಾವಣೆ ಆಗಲು ಸಹಕಾರಿ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಜಾಗತಿಕ ಮಟ್ಟದಲ್ಲಿ ಬೆಂಗಳೂರು ದೇಶ ಮತ್ತು ವಿಶ್ವದ ಗಮನವನ್ನು ಸೆಳೆಯುತ್ತಿದೆ. ಪ್ಲಾಸ್ಟಿಕ್‌ ಪಾಲಿಮರ್‌ ತ್ಯಾಜ್ಯ ನಿರ್ವಹಣೆ, ಮರು ಬಳಕೆ ಮಾಡಲು ಅಗತ್ಯವಿರುವ ಸಂಶೋಧನೆ ಮತ್ತು ವಿಸ್ತರಣೆಗೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಯೋಗದಲ್ಲಿ ಸಿಪೆಟ್‌ನಂತಹ ಉಪಯುಕ್ತ ಸಂಸೆ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ. ಇದರಿಂದಾಗಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದ್ದು, ಈ ಸಂಸ್ಥೆಯ ಬೆಳವಣಿಗೆ ಮತ್ತು ವಿಸ್ತರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಪ್ಲಾಸ್ಟಿಕ್‌ ಪಾಲಿಮರ್‌ ಗೃಹ ಬಳಕೆಯಿಂದ ಹಿಡಿದು ಕೈಗಾರಿಕಾ ಕ್ಷೇತ್ರದವರೆಗೂ ಅತಿ ಹೆಚ್ಚು ಬಳಕೆ ಆಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಮರು ಬಳಕೆಗೆ ಕಾರ್ಯಕ್ರಮ ಮಾಡಲು ಯೋಜನ ರೂಪಿಸಿರುವುದು ಶ್ಲಾಘನೀಯ ಎಂದರು.

ಉಪ ಮುಖ್ಯ ಮಂತ್ರಿ ಸಿ.ಎನ್‌ ಅಶ್ವಥ್‌ ನಾರಾಯಣ್‌ ಮಾತನಾಡಿ, ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿ ಹೊಂದುವ ಮೂಲಕ ವಿಜ್ಞಾನ ಕ್ಷೇದಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನೆ , ಲ್ಯಾಬ್‌ಗ ಸೀಮತ ವಾಗಿರದೆ ಎಲ್ಲರಿಗೂ ತಲುಪವಂತಾಗಬೇಕು. ಬೆಂಗಳೂರು ನಗರದಲ್ಲಿ ಪ್ರಮುಖ ಭಾಗಗಳ 33 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಸರ್ಕಾರ ಹೊಸ ಕಾರ್ಯಕ್ರಮ ಜಾರಿಗೆ ತರಲಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮಾತನಾಡಿ, ಸಿಪೆಟ್‌ ಸಂಸ್ಥೆಯು ದೇಶದಲ್ಲಿ 37 ಕೇಂದ್ರಗಳನ್ನು ಒಳಗೊಂಡಿದೆ. ಪ್ಲಾಸ್ಟಿಕ್‌ ಪಾಲಿಮರ್‌ ಮರು ಬಳಕೆ ಮಾಡಲು ಸಂಶೋಧನಾ ಕೇಂದ್ರಕ್ಕೆ 5 ಎಕರೆ ಜಾಗ ನೀಡಿದರೆ ಅನುಕೂಲವಾಗುವುದು. ರಾಯಚೂರಿನಲ್ಲಿ ಕೃಷಿ ಪಾರ್ಕ್ ನಿರ್ಮಾಣಕ್ಕೆ 500 ಎಕರೆ ಭೂಮಿ ಅಗತ್ಯವಿದ್ದು ರಾಜ್ಯ ಸರ್ಕಾರ ಜಾಗವನ್ನು ನೀಡಿದರೆ ಅದರ ಮಂಜೂರಾತಿ ಮಾಡಿಸಿ ರೈತರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾಲಿಮರ್‌ ಮರು ಬಳಕೆ ಮಾಡಲು ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ತ್ಯಾಜ್ಯ ವಿಲೇವಾರಿ, ಮರು ಬಳಕೆಯಲ್ಲಿ ಇ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲಿದೆ ಎಂದರು.

ಮಾಜಿ ಸಚಿವ ಹಾಗೂ ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ ಮನುಷ್ಯನ ದುರಾಸೆಯಿಂದ ಹವಾಮಾನ ಬದಲಾಗುತ್ತಿದ್ದು ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಪರಿಸರ ಸಮತೋಲನ ಕಾಪಾಡಿಕೊಳ್ಳು ಈ ರೀತಿಯ ಸಂಶೋಧನೆ ಗಳು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆಯಲ್ಲಿ ಸಿಪೆಟ್‌ ಮುಖ್ಯ ನಿರ್ದೇಶಕ ಡಾ. ಅಬ್ದುಲ್‌ ಎಮ್‌ ಖಾದರ್‌, ಪೆಟ್ರೋ ಕೆಮಿಕಲ್ಸ್‌ ಜಂಟಿ ಕಾರ್ಯದರ್ಶಿ ಕಾಶೀನಾಥ್‌ ಜಾ, ಸಿಪೆಟ್‌ ಅಧಿಕಾರಿ ನಾಯಕ್‌, ಭಾಗವಹಿಸಿದ್ದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

16-bng

Magadi: ಮದುವೆ ನಿಶ್ಚಯವಾಗಿದ್ದ ಯುವ ವಕೀಲೆ ಆತ್ಮಹತ್ಯೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.