ಯುವತಿ ಮಾರಾಟ ಆರೋಪ: ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿಸಿದರು
Team Udayavani, Dec 29, 2019, 3:00 AM IST
ಬನಹಟ್ಟಿ: ಮದುವೆ ಮಾಡಿಸುವ ಆಮಿಷ ತೋರಿಸಿ ಅಪ್ರಾಪ್ತ ಯುವತಿಯನ್ನು ಮಾರಾಟ ಮಾಡಲು ಮೂರು ತಿಂಗಳಿಂದ ಮನೆಗೆ ತಂದಿಟ್ಟುಕೊಂಡಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಮಹಿಳೆಯೊಬ್ಬಳನ್ನು ಕಂಬಕ್ಕೆ ಕಟ್ಟಿ, ಥಳಿಸಿದ ಘಟನೆ ರಬಕವಿಯಲ್ಲಿ ಶನಿವಾರ ನಡೆದಿದೆ.
ಮೂಲತಃ ಹನಗಂಡಿ ನಿವಾಸಿ ಬಸಯ್ಯ ಮಲ್ಲಯ್ಯ ಮಠಪತಿ ಎಂಬುವರು ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆಯ ಹಾಸ್ಟೆಲ್‌ನಲ್ಲಿ ಇದ್ದುಕೊಂಡು, ಪಿಯುಸಿ ಕಲಿಯುತ್ತಿದ್ದ ಅಲ್ಲಿಯ ಬಡಬಾಲಕಿಗೆ ಮದುವೆ ಮಾಡಿಸುವುದಾಗಿ ಮನವೊಲಿಸಿ ಕರೆದುಕೊಂಡು ಬಂದಿದ್ದ. ಮಾರಾಟ ಮಾಡಲು ತಂತ್ರ ರೂಪಿಸಿದ್ದನೆಂದು ಆಕೆ ಆರೋಪಿಸಿದ್ದಾಳೆ.
ಬಾಲಕಿಯನ್ನು ಮೂರು ತಿಂಗಳ ಹಿಂದೆ ರಬಕವಿಗೆ ಕರೆದುಕೊಂಡು ಬಂದಾಗ ನೆರೆ ಹೊರೆಯವರಿಗೆ ಅಕ್ಕನ ಮಗಳೆಂದು ನಂಬಿಸಿದ್ದು, ಒಂದು ಸಲ ಗುಜರಾತ್, ಇನ್ನೊಂದು ಸಲ ರಾಜಸ್ಥಾನಕ್ಕೆ ಮಾರಾಟ ಮಾಡಲು ಕರೆದುಕೊಂಡು ಹೋಗಿ ವಾಪಸ್ಸಾಗಿದ್ದ. ಒಂದು ಕಡೆ ಮಾರಾಟ ಮಾಡುವ ಒಪ್ಪಂದವಾಗಿದ್ದು, ಐದು ಲಕ್ಷ ರೂ.ಮುಂಗಡ ಹಣವನ್ನು ಬಸಯ್ಯ ಪಡೆದಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ.
ಜನವರಿ 1ರ ನಂತರ ಅಲ್ಲಿ ಕಳುಹಿಸುವ ಉದ್ದೇಶವಿದ್ದು, ಡಿ.27ರ ರಾತ್ರಿ ಬಸಯ್ಯ ಮತ್ತು ಆತನ ಪತ್ನಿ ಬಾಲಕಿಗೆ ದೈಹಿಕ ಕಿರುಕುಳ ನೀಡಲಾರಂಭಿಸಿದರು. ಇದನ್ನು ಸಹಿಸದೇ ಮನೆಯ ಹೊರಗಡೆ ಬಂದಿದ್ದರಿಂದ ವಿಷಯ ಬಹಿರಂಗಗೊಂಡಿದೆ. ಸುತ್ತಲಿನವರು ರಾತ್ರಿಯಿಡೀ ಅವಳಿಗೆ ರಕ್ಷಣೆ ನೀಡಿ ಬೆಳಗ್ಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.