ಬುರಾರಿ ಮನೆಗೆ ಬಾಡಿಗೆಗೆ ಬಂದ ಪೆಥಾಲಜಿಸ್ಟ್
Team Udayavani, Dec 29, 2019, 12:28 AM IST
ಹೊಸದಿಲ್ಲಿ: 2018ರ ಜುಲೈನಲ್ಲಿ ದಿಲ್ಲಿಯ ಬುರಾರಿ ಪ್ರಾಂತ್ಯದಲ್ಲಿ ಒಂದೇ ಕುಟುಂಬದ 11 ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಗೆ, ರೋಗಶಾಸ್ತ್ರಜ್ಞರಾದ ಮೋಹನ್ ಸಿಂಗ್ ಕಶ್ಯಪ್ ಎಂಬವರು ಬಾಡಿಗೆದಾರರರಾಗಿ ಕಾಲಿಡುತ್ತಿದ್ದಾರೆ. ರವಿವಾರ ಆ ಮನೆಯಲ್ಲಿ ಹೋಮ- ಹವನಗಳನ್ನು ಮಾಡಿ ಗೃಹ ಪ್ರವೇಶ ಮಾಡುವುದಾಗಿ ಅವರು ತಿಳಿಸಿದ್ದಾರೆ. 2018ರಲ್ಲಿ ಈ ಮನೆಯ 11 ಸದಸ್ಯರು ಮೋಕ್ಷಕ್ಕಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾ ದ್ಯಂತ ಸುದ್ದಿಯಾಗಿತ್ತು.
ಆ ಪ್ರಕರಣ ಬೆಳಕಿಗೆ ಬಂದ ಅನಂತರ ಮನೆ ಯನ್ನು ಚಂದಾವತ್ ಕುಟುಂಬದ ಹತ್ತಿರದ ಸಂಬಂಧಿ ದಿನೇಶ್ ಚಂದಾವತ್ ಎಂಬವರು ಸುಪರ್ದಿಗೆ ಪಡೆದಿದ್ದರು. ಆದರೆ, ಆಗಿನಿಂದ ಈ ಮನೆಗೆ ಯಾರೂ ಬಾಡಿಗೆಗೆ ಬಂದಿರಲಿಲ್ಲ. ಈಗ ದಿನೇಶ್ ಅವರಿಂದಲೇ ಆ ಮನೆಯ ನೆಲ ಅಂತಸ್ತು ಹಾಗೂ ಮೊದಲ ಮಹಡಿಯನ್ನು ಕಶ್ಯಪ್ ಬಾಡಿಗೆ ಪಡೆದಿದ್ದಾರೆ. ನೆಲ ಅಂತಸ್ತಿನಲ್ಲಿ ಪೆಥಾಲಜಿ ಲ್ಯಾಬ್ ಮಾಡಿ, ಮೊದಲ ಅಂತಸ್ತಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿರಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.