ಆರು ಬೋಗಿಯ ಮತ್ತೆರಡು ಮೆಟ್ರೋ ರೈಲು
Team Udayavani, Dec 29, 2019, 3:05 AM IST
ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗದ ಮತ್ತೆರಡು ರೈಲುಗಳಿಗೆ ತಲಾ ಮೂರು ಹೆಚ್ಚುವರಿ ಬೋಗಿಗಳು ಸೇರ್ಪಡೆಗೊಳ್ಳಲಿವೆ. ಸೋಮವಾರ (ಡಿ.30) ನಾಗಸಂದ್ರ- ಯಲಚೇನಹಳ್ಳಿ ನಡುವಿನ ಮಾರ್ಗದ ಮೂರು ಬೋಗಿಗಳ ಎರಡು ರೈಲುಗಳನ್ನು ಆರು ಬೋಗಿಗಳನ್ನಾಗಿ ಪರಿವರ್ತಿಸಲಾಗುವುದು.
ಈ ಮೂಲಕ ಉದ್ದೇಶಿತ ಮಾರ್ಗದಲ್ಲಿ ಒಟ್ಟಾರೆ 14 ಆರು ಬೋಗಿಗಳ ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಭಾನುವಾರ ಹೊರತುಪಡಿಸಿ ಆರು ಬೋಗಿಗಳ ಈ ರೈಲುಗಳು ಒಟ್ಟು 106 ಸುತ್ತಿನ ಪ್ರಯಾಣ ನಡೆಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಟಣೆ ತಿಳಿಸಿದೆ. ಗರಿಷ್ಠ ಸಮಯದಲ್ಲಿ ಅಂದರೆ ಪೀಕ್ ಅವರ್‌ನಲ್ಲಿ ಶೇ.77ರಷ್ಟು ಆರು ಬೋಗಿ ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಒಟ್ಟಾರೆ 22 ರೈಲುಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ.
ಮೆಟ್ರೋದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ 50 ರೂ.!
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರ ತಡರಾತ್ರಿ ನಗರದ ಮೂರು ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣ ದರ 50 ರೂ.! 31ರಂದು ತಡರಾತ್ರಿ 2 ಗಂಟೆಗೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಏಕ ಕಾಲ ದಲ್ಲಿ ನಾಲ್ಕೂ ದಿಕ್ಕುಗಳಿಗೆ ರೈಲುಗಳು ಹೊರ ಡಲಿವೆ. ಈ ವಿಸ್ತರಿಸಿದ ಅಂದರೆ 11.30ರ ನಂತರ ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ), ಟ್ರಿನಿಟಿ ಮತ್ತು ಕಬ್ಬನ್ ಉದ್ಯಾನ ನಿಲ್ದಾಣಗಳಿಂದ ಇತರೆ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ 50 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.
50 ರೂ. ಮೊತ್ತದ ಕಾಗದದ ಟಿಕೆಟ್‌ಗಳನ್ನು ವಿತರಿಸಲಾಗುವುದು. ಟೋಕನ್‌ಗಳನ್ನು ವಿತರಿಸುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತರಿಸಿದ ಅವಧಿಯಲ್ಲಿ 31ರ ರಾತ್ರಿ 8ರಿಂದಲೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಟಿಕೆಟ್ ಖರೀದಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಎಂದಿನಂತೆ ರಿಯಾಯ್ತಿ ದರ ಅನ್ವಯ ಆಗಲಿದೆ. ಟ್ರಿನಿಟಿ, ಎಂ.ಜಿ. ರಸ್ತೆ ಮತ್ತು ಕಬ್ಬನ್ ಉದ್ಯಾನ ಹೊರತುಪಡಿಸಿದರೆ, ಉಳಿದ ನಿಲ್ದಾಣಗಳ ನಡುವೆ ಪ್ರಯಾಣ ದರ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆ ತಿಳಿಸಿದೆ.
ಕೊನೆಯ ಮೆಟ್ರೋ ರೈಲು ನಿರ್ಗಮನ ಸಮಯ
ಟರ್ಮಿನಲ್ ನಿರ್ಗಮನ ಸಮಯ (ತಡರಾತ್ರಿ)
ಬೈಯಪ್ಪನಹಳ್ಳಿ 1.35
ಮೈಸೂರು ರಸ್ತೆ 1.40
ನಾಗಸಂದ್ರ 1.30
ಯಲಚೇನಹಳ್ಳಿ 1.35
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.