2020ರೊಳಗೆ ಮಾಲವಿ ಜಲಾಶಯ ಪೂರ್ಣ
ಉಲುವತ್ತಿ, ಹರೇಗೊಂಡನಹಳ್ಳಿ, ಮಾಲವಿ ವಿವಿಧ ಕಾಮಗಾರಿಗಳ ಭೂಮಿಪೂಜೆ
Team Udayavani, Dec 29, 2019, 6:15 PM IST
ಹಗರಿಬೊಮ್ಮನಹಳ್ಳಿ: ಆಗಸ್ಟ್ 2020ರೊಳಗೆ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರುಣಿಸಲಾಗುವುದು ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು.
ತಾಲೂಕಿನ ಉಲುವತ್ತಿ ಗ್ರಾಮದ ಸಿಸಿರಸ್ತೆ, ಶಾಲಾ ಕೊಠಡಿ ಸೇರಿದಂತೆ 1.26 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಸರಕಾರದ ಅವಧಿಯಲ್ಲಿ ಮಾಲವಿ ಜಲಾಶಯಕ್ಕೆ 150 ಕೋಟಿ ರೂ. ಅನುದಾನ ನೀಡುವ ಮೂಲಕ ಮಾಲವಿ ಜಲಾಶಯ ವ್ಯಾಪ್ತಿಯ ರೈತರ ಬಹುದಿನದ ಕನಸನ್ನು ನನಸಾಗಿಸಿದ್ದಾರೆ. ಉಲುವತ್ತಿಯಲ್ಲಿ ಗ್ರಾಪಂ ಕಚೇರಿಯ ಅವಶ್ಯಕತೆಯಿರುವುದನ್ನು ಮನಗಂಡಿದ್ದು ಇನ್ನೊಂದು ವರ್ಷದೊಳಗೆ ಉಲುವತ್ತಿ ಗ್ರಾಮಕ್ಕೆ ಗ್ರಾಮ ಪಂಚಾಯ್ತಿ ಕಚೇರಿ ತಂದು ಮೂಲಭೂತ ಸೌಕರ್ಯಗಳು ಕೂಡಲೇ ಸಿಗಲು ಅನುಕೂಲ ಮಾಡಿಕೊಡಲಾಗುವುದು.
ಗ್ರಾಮದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದ್ದು, ಮುಂದಿನ ಸಾಲಿನಲ್ಲಿ 1 ಕೋಟಿಗೂ ಅಧಿ ಕ ಅನುದಾನ ನೀಡಿ ಗ್ರಾಮದ ಸಿಸಿ ರಸ್ತೆ, ಚರಂಡಿ, ದೇವಸ್ಥಾನಗಳ ಅಭಿವೃದ್ಧಿಯನ್ನು ಮಾಡಲಾಗುವುದು. 8 ಶಾಲಾ ಕೊಠಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಮಾರ್ದನಿಸಿದ ಹೌದು ಹುಲಿಯಾ: ಶಾಸಕ ಭೀಮಾನಾಯ್ಕ ಭಾಷಣದುದ್ದಕ್ಕೂ ಉಲುವತ್ತಿ ಗ್ರಾಮದ ಯುವಕರು ಹೌದು ಹುಲಿಯಾ ಎಂದು ಶಹಬ್ಟಾಸ್ ಗಿರಿ ನೀಡುತ್ತಿದ್ದು ಕಂಡುಬಂತು. ಗ್ರಾಮಕ್ಕೆ ಕೋಟಿ ರೂ. ಅನುದಾನ ನೀಡುತ್ತೇನೆ ಎಂದಾಕ್ಷಣ ಹೌದು ಹುಲಿಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರು ಗ್ರಾಮವನ್ನು ಸತತ ಎರಡು ತಾಸುಗಳ ಕಾಲ ಸುತ್ತಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪೂರಕವಾಗಿ ಸ್ಪಂದಿಸಿದ್ದು ಕಂಡುಬಂತು. ಮಾಜಿ ಸಿಎಂ ಸಿದ್ದರಾಮಯ್ಯನವರ ಹೆಸರು ಶಾಸಕರು ಹೇಳುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂತೋಷ ಹರಿದುಬಂತು.
ಭೀಮಾನಾಯ್ಕ ಈ ಗ್ರಾಮ ಚುನಾವಣೆಯಲ್ಲಿ 700 ಮತಗಳನ್ನು
ಲೀಡ್ ಕೊಟ್ಟಿದೆ ಎಂದು ಹೇಳಿದಾಕ್ಷಣ ಮುಂದಿನ ಚುನಾವಣೆಯಲ್ಲಿ ಇದಕ್ಕಿಂತ ಹೆಚ್ಚು ಮತಗಳ ಲೀಡ್ ಕೊಡುತ್ತೇವೆ ಎಂದು ಹುಮ್ಮಸ್ಸಿನಿಂದ ಹೇಳಿದರು. ಶಾಸಕರ ಆಗಮನದಿಂದ ಉಲುವತ್ತಿ ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಸೇರಿದ್ದರು. ಇದಕ್ಕೂ ಮುನ್ನ ಹರೇಗೊಂಡನಹಳ್ಳಿ, ಮಾಲವಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ ಮಾತನಾಡಿದರು. ಪುರಸಭೆ ಸದಸ್ಯ ಉಲುವತ್ತಿ ಬಾಬುವಲಿ, ತಾಪಂ ಸದಸ್ಯೆ ಶ್ಯಾಮಲಾ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಮುಟುಗನಹಳ್ಳಿ ಕೊಟ್ರೇಶ್, ಕುರಿ ಶಿವಮೂರ್ತಿ, ಡಿಶ್ ಮಂಜುನಾಥ, ಮಾಬುಬೇಗ್, ಮೈಬುಸಾಬ್, ಗೋವಿಂದಪ್ಪ, ವೆಂಕಟೇಶ್, ದುರುಗಪ್ಪ, ಹ್ಯಾಳ್ಯಾದ ಚನ್ನಬಸಪ್ಪ, ಚಂದ್ರಶೇಖರ ಇತರರಿದ್ದರು. ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.