ಕಲಾವಿದ- ಸಂಘಟಕ ಆಗುವುದು ಕಷ್ಟ: ಡಾ| ಜಿ.ಎಸ್. ಭಟ್
Team Udayavani, Dec 29, 2019, 2:50 PM IST
ಸಾಗರ: ಪ್ರಾದೇಶಿಕ ರಂಗಭೂಮಿ ಮತ್ತು ರಾಷ್ಟ್ರೀಯ ರಂಗಭೂಮಿ ಸಮ್ಮಿಲನವೇ ನಾಟ್ಯ ತರಂಗದ ಸಂಸ್ಕೃತಿ ಸಪ್ತಾಹ ಎಂದು ನಿವೃತ್ತ ಪ್ರಾಚಾರ್ಯ, ಯಕ್ಷಗಾನ ವಿದ್ವಾಂಸ ಡಾ| ಜಿ.ಎಸ್. ಭಟ್ ತಿಳಿಸಿದರು.
ನಗರದ ಶ್ರೀನಗರದ ನಾಟ್ಯತರಂಗ ಸಂಸ್ಥೆ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಕಲಾವಿದ ಮತ್ತು ಸಂಘಟಕ ಆಗುವುದು ಕಷ್ಟ. ಆದರೆ ನಾಟ್ಯತರಂಗದ ಸಂಚಾಲಕ ವಿದ್ವಾನ್ ಜಿ.ಬಿ. ಜನಾರ್ದನ್ ಕಲಾವಿದನಾಗಿ, ಸಂಘಟಕನಾಗಿ ಎರಡೂ ಜವಾಬ್ದಾರಿಯನ್ನು ಅತ್ಯಂತ ಆಸಕ್ತಿಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ವೇದಿಕೆಯಲ್ಲಿ ಸಹ ಕಾರ್ಯಕ್ರಮ ನೀಡುವಷ್ಟು ಪ್ರಾವೀಣ್ಯತೆ ಸಂಪಾದಿಸಿರುವುದು ಜನಾರ್ದನ್ ಅವರ ಕಲಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.
ಕೆ.ಟಿ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ಸುಧಾ ಕುಷ್ಟಗಿ, ಜಿ.ಬಿ. ಜನಾರ್ದನ್ ಇದ್ದರು. ಸೌಖ್ಯ ಸ್ವಾಗತಿಸಿದರು. ಪ್ರತಿಮಾ ವಂದಿಸಿದರು. ಅರ್ಚನ ಮತ್ತು ರಂಜನ ನಿರೂಪಿಸಿದರು. ನಂತರ ಸುಧಾ ಅರವಿಂದ್ ಮತ್ತು ಸುಧಾ ಕುಷ್ಟಗಿ ಅವರಿಂದ ದೇವ-ಭಾವ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.