ವಿದ್ಯೆಯ ಪರಿಪೂರ್ಣತೆಗೆ ಪೂರ್ಣಪ್ರಜ್ಞ ವಿದ್ಯಾಪೀಠ
Team Udayavani, Dec 30, 2019, 9:45 AM IST
ಬೆಂಗಳೂರು: ವೇದ, ಉಪನಿಷತ್‌ಗಳ ಸಮಗ್ರ ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಪರಿಪೂರ್ಣ ಜ್ಞಾನ ಮತ್ತು ಶೈಕ್ಷಣಿಕವಾಗಿ ಹಂತ ಹಂತದ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿಕೊಡುವ ಉದ್ದೇಶದಿಂದ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು 1956ರಲ್ಲಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಸ್ಥಾಪಿಸಿದರು.
12 ವಿದ್ಯಾರ್ಥಿಗಳು ಮತ್ತು ಮೂವರು ಪ್ರಾಧ್ಯಾಪಕರೊಂದಿಗೆ ಆರಂಭಗೊಂಡ ಈ ಗುರುಕುಲ, ಇಂದು ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಹಿತವಾಗಿ ವಿದ್ಯಾದಾನದ ಅಪೂರ್ವ ಸೇವೆ ನಡೆಯುತ್ತಿದೆ.
1953ರಲ್ಲಿ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಅಖೀಲ ಭಾರತ ಮಾಧ್ವ ಮಹಾ ಮಂಡಲವು 1955ರ ಮೇ 26ರಂದು ಶ್ರೀ ಭಂಡಾರಕೇರಿ ಮತ್ತು ಶ್ರೀ ವಿಶ್ವೇಶತೀರ್ಥರ ಮಾರ್ಗದರ್ಶನದಲ್ಲಿ ಉಪಸಮಿತಿಯೊಂದನ್ನು ನೇಮಿಸಿ, ವಿದ್ಯಾಪೀಠ ಸ್ಥಾಪನೆಗೆ 25 ಸಾವಿರ ರೂ.ಗಳ ನಿಧಿಯನ್ನು ಮೀಸಲಿಟ್ಟಿತ್ತು. ಸಮಿತಿಯು ಬೆಂಗಳೂರನ್ನು ವಿದ್ಯಾಪೀಠ ಸ್ಥಾಪನೆಗೆ ಆರಿಸಿಕೊಂಡಿತು.
ಸಂಶೋಧನ ಮಂದಿರ
1990ರ ವೇಳೆಗೆ ಪೂರ್ಣಪ್ರಜ್ಞ ಸಂಶೋಧನ ಮಂದಿರ ಹುಟ್ಟುಹಾಕಿದರು. ಪ್ರಾಚೀನ ತಾಡಪತ್ರಗಳ ಸಂರಕ್ಷಣೆ, ಸಂಶೋಧನೆ, ಪ್ರಕಾಶನವೇ ಇದರ ಮಹತ್ವದ ಕಾರ್ಯವಾಗಿದೆ. 55 ಕೃತಿಗಳು, ಅನುವಾದಿತ ಕೃತಿಗಳನ್ನು ಸಂಸ್ಥೆ ಹೊರತಂದಿದೆ. ಹತ್ತಾರು ವಿದ್ಯಾರ್ಥಿಗಳು ವಿದ್ಯಾವಾರಿಧಿ(ಪಿಎಚ್.ಡಿ) ಪದವಿ ಪಡೆದಿದ್ದಾರೆ.
1980ರಲ್ಲಿ ವಿದ್ಯಾಪೀಠದ ಆವರಣದಲ್ಲಿ ಶ್ರೀಕೃಷ್ಣ ಗುಡಿಯನ್ನು ನಿರ್ಮಿಸಲಾಗಿದೆ. ವಿಶೇಷ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನ ಸಹಿತ ಮಹತ್ತರ ಆಚರಣೆಗಳು ಇಲ್ಲಿ ನಡೆಯುತ್ತಿರುತ್ತವೆ. ಪೂರ್ಣಪ್ರಜ್ಞ ವಿದ್ಯಾಪೀಠದ ಒಟ್ಟು ಅಧ್ಯಯನ ಅವಧಿ 13 ವರ್ಷಗಳದ್ದಾಗಿದೆ.
ಶ್ರೀಗಳ ಆಶಯದಂತೆ ವಿದ್ಯಾಪೀಠದಲ್ಲಿ ಬೃಂದಾವನ
ಬೆಂಗಳೂರು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಬೃಂದಾವನ ಉಡುಪಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದು ಏಕೆ ಎಂಬ ಕೌತುಕ ಈಗ ಎಲ್ಲರಲ್ಲೂ ಮನೆ ಮಾಡಿದೆ. ಇದಕ್ಕೆ ಶ್ರೀಗಳು ನಾಲ್ಕೈದು ವರ್ಷಗಳ ಹಿಂದೆಯೇ ಸ್ಪಷ್ಟ ಉತ್ತರ ಬರೆದಿಟ್ಟಿದ್ದರು.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪೂರ್ಣ ಪ್ರಜ್ಞ ಆವರಣದ ಶ್ರೀಕೃಷ್ಣ ದೇವಸ್ಥಾನದಲ್ಲಿ ತಾವು ವಾಸವಿರುವ ಕೊಠಡಿ ಮತ್ತು ಧ್ಯಾನ ಮಂದಿರ ಮಧ್ಯದಲ್ಲಿರುವ ಜಾಗದಲ್ಲಿಯೇ ತಮ್ಮ ಬೃಂದಾವನವನ್ನು ನಿರ್ಮಿಸಬೇಕು ಎಂದು ಈ ಹಿಂದೆಯೇ ಮಠದ ಪುಸ್ತಕದಲ್ಲಿ ದಾಖಲಿಸಿದ್ದರು.
ಶ್ರೀಗಳು ಸದಾ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ತಮ್ಮ ಪ್ರವಾಸದ ಸಮಯದಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿ ದ್ದರು. ಈ ವೇಳೆ ನಿತ್ಯದ ಪ್ರವಚನ, ಬೋಧನೆ ಮಾಡುತ್ತಿದ್ದರು. “ಮಕ್ಕಳೊಂದಿಗೆ ನಾನು ಇರಬೇಕು, ನಾನು ಇಲ್ಲ ಎನ್ನುವ ಕೊರಗು ಮಕ್ಕಳನ್ನು ಎಂದಿಗೂ ಕಾಡಬಾರದು’ ಎಂಬ ಉದ್ದೇಶದಿಂದಲೇ ತಮ್ಮ ಬೃಂದಾವನವನ್ನು ತಮ್ಮದೇ ಕನಸಿನ ಪೂರ್ಣಪ್ರಜ್ಞಾ ವಿದ್ಯಾಪೀಠ ದಲ್ಲೇ ಮಾಡಬೇಕು ಎಂದು ಆಶಿಸಿದ್ದರು.
ಇದನ್ನು ಶ್ರೀಗಳು ತಮ್ಮ 85ನೇ ಜನ್ಮದಿನಾ ಚರಣೆಯ ಸಂದರ್ಭದಲ್ಲೇ ವಿದ್ಯಾರ್ಥಿ ಗಳ ಬಳಿ ಹೇಳಿಕೊಂಡಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠದ ಕೃಷ್ಣ ಮಂದಿರದ ಸಮೀಪ ದಲ್ಲಿರುವ ಶ್ರೀಗಂಧದ ಮರ ಇರುವ ಜಾಗದಲ್ಲೇ ಬೃಂದಾವನ ನಿರ್ಮಾಣ ಮಾಡಬೇಕು ಎಂದು ಜಾಗವನ್ನೂ ಶ್ರೀಗಳು ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.