ಎಂಬಿಎ ಅಂಬಾರಿ; ಓದಿ ಓದಿ ಕೆಲ್ಸ ಗಳಿಸಿ


Team Udayavani, Dec 31, 2019, 5:45 AM IST

ve-8

ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌, ಈಗ ಬಹಳ ಜನಪ್ರಿಯವಾಗಿರುವ ಆದಾಯ ತರುವ ಕೋರ್ಸ್‌. ಇದರಡಿ ಎಂಬಿಎ, ಬಿಬಿಎಗಳು ಬರುತ್ತವೆ. ವಾಣಿಜ್ಯ ಜಗತ್ತಿನಲ್ಲಿ, ಕಾರ್ಪೋರೇಟ್‌ವಲಯಗಳಲ್ಲಿ ಬ್ಯುಸಿನೆಸ್‌ ಅಡ್ಮಿನ್‌ಗಳು ಅನಿವಾರ್ಯವಾಗಿದ್ದಾರೆ. ಹೀಗಾಗಿ, ಬಿಬಿಎ, ಎಂಬಿಎ ಪದವೀಧರರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಈ ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಕೋರ್ಸ್‌ಗಳು ಮ್ಯಾನೇಜ್‌ಮೆಂಟ್‌ ಮತ್ತು ಕಾರ್ಪೊàರೇಟ್‌ ಜಗತ್ತಿನ ಕೀಲೆ ಕೈಗಳೇ ಆಗಿಬಿಟ್ಟಿವೆ. ಹೀಗಾಗಿ, ಇಂದು ಅಧಿಕ ಬೇಡಿಕೆಯನ್ನು ಹೊಂದಿವೆ. ವಾಣಿಜ್ಯ ವ್ಯವಹಾರಗಳಿಗೆ ಲಗತ್ತಾದ, ಮುಖ್ಯವಾಗಿ ಕಾರ್ಪೊರೇಟ್‌ ಜಗತ್ತಿಗೆ ಬೇಕಾದ ಕೌಶಲಗಳನ್ನು ಕಲಿಸುವುದು ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಕೋರ್ಸ್‌ಗಳ ಪ್ರಮುಖ ಉದ್ದೇಶ. ಇವುಗಳಲ್ಲಿ ಬಿ.ಬಿ.ಎ ಮತ್ತು ಎಂ.ಬಿ.ಎ ಬಹು ಮುಖ್ಯವಾದ ಕೋರ್ಸ್‌ಗಳು. ಆದರೆ, ಈ ವಿಷಯಗಳ ಕಲಿಕೆಯೊಂದಿಗೆ ನಾಯಕತ್ವದ ಗುಣಗಳನ್ನು, ನಿರ್ಧಾರ ತಳೆಯುವ ಕೌಶಲವನ್ನು ಎಲ್ಲದರ ಜೊತೆಗೆ ಉತ್ತಮ ಸಂವಹನ ಸಾಮರ್ಥ್ಯವನ್ನು ಕಲಿಯುವುದು ಅವಶ್ಯವಾಗಿದೆ. ಹೀಗಾಗಿ, ಈ ಕೋರ್ಸ್‌ಗಳ ಜೊತೆ ಜೊತೆಗೇ ಉಪ ಕೋರ್ಸ್‌ಗಳೂ ಇವೆ. ಇಲ್ಲೂ ಕೂಡ ಅಂಕವೇ ಮುಖ್ಯ. ಮಾರ್ಕ್‌Õಕಡಿಮೆ ಇದ್ದರೆ ಫೀ ಹೆಚ್ಚು, ಅಂಕ ಹೆಚ್ಚಿದ್ದರೆ ಫೀ ಕಡಿಮೆ. ಅಂಕವೇ ಎಲ್ಲದರ ಅಂಕೆ.

ಬಿ.ಬಿ.ಎ
ಇದರ ಪೂರ್ಣ ಹೆಸರು ಬ್ಯಾಚುಲರ್‌ ಆಫ್ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌. ಇದೊಂದು ಪದವಿ ಕೋರ್ಸ್‌ ಆಗಿದ್ದು, ಇದರಲ್ಲಿ ಪ್ರವೇಶ ಪಡೆಯಲು ದ್ವಿತೀಯ ಪಿ.ಯು.ಸಿ (10 + 2) ಯಶಸ್ವಿಯಾಗಿ ಮುಗಿಸಿ ಕನಿಷ್ಠ 50% ಅಂಕ ಗಳಿಸಿರಬೇಕು (ಪರಿಶಿಷ್ಟ ಜಾತಿ / ವರ್ಗ ಹಿಂದುಳಿದ ವರ್ಗಗಳು ಮತ್ತು ವಿಶೇಷ ಕೌಶಲ್ಯದ ಮಕ್ಕಳಿಗೆ ಶೇ.45ರಷ್ಟು ಅಂಕ ಕಡ್ಡಾಯ) ಆದರೆ, ಕೆಲವು ಕಾಲೇಜುಗಳಲ್ಲಿ ಕಡಿಮೆ ಅಂಕ ಗಳಿಸಿದವರಿಗೂ ಸೀಟು ನೀಡುತ್ತಾರೆ. ಒಳ್ಳೆಯ ಕಾಲೇಜುಗಳಲ್ಲಿ ಸೀಟು ಬೇಕೆಂದರೆ, ಖಂಡಿತ ಉತ್ತಮ ಅಂಕ ಗಳಿಸಿರಬೇಕು. ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಬೇಕಾದವರು ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾದವು: MPJ ಆಪ್ಟಿಟ್ಯೂಡ್‌ ಟೆಸ್ಟ್‌ NMAT
(UG), DUET, SET ಮತ್ತು UGAT – AIMA.. ಇದು ಮೂರು ವರ್ಷದ ಆರು ಸೆಮಿಸ್ಟರ್‌ಗಳ ಕೋರ್ಸ್‌. ಆಪ್ಟಿಟ್ಯೂಡ್‌ ಟೆಸ್ಟ್‌ಗಳನ್ನು ಎದುರಿಸುವುದೂ ಒಂದು ಕಲೆ. ಅದಕ್ಕೂ ಟ್ಯೂಷನ್‌ಗಳು ಉಂಟು. ಬಿ.ಬಿ.ಎ ಹಿಂದೆ ಎಷ್ಟೆಲ್ಲಾ ಸರ್ಕಸ್ಸುಗಳು ಇವೆ ನೋಡಿ.

ಎಂ.ಬಿ.ಎ.
ಬಿ.ಕಾಂ ಅಥವಾ ಬಿ.ಬಿ.ಎ ಅಥವಾ ತತ್ಸಮಾನ ಮಾನ್ಯತೆ ಪಡೆದ ಪದವಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಎಂ.ಬಿ.ಎ. ಮಾಡಬಹುದು. ಇಲ್ಲೂ ಕೂಡ ಬೇರೆ ಬೇರೆ ಕಾಲೇಜುಗಳು ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಬಿಬಿಎಗಿಂತ ಸ್ವಲ್ಪ ಭಿನ್ನವಾದ ಪರೀಕ್ಷೆಗಳು ಇವು. ಏಕೆಂದರೆ, ಇದರಲ್ಲಿ ಕಟ್‌ ಆಫ್ ಅಂಕವನ್ನು ನಿಗದಿಪಡಿಸುತ್ತವೆ. ಕೆಲವು ಮುಖ್ಯ ಪ್ರವೇಶ ಪರೀಕ್ಷೆಗಳೆಂದರೆ: CAT,
CMAT, IIFT, MAT, NMAT, XAT ಮತ್ತು IBSAT ಇದು ಎರಡು ವರ್ಷದ ನಾಲ್ಕು ಸೆಮಿಸ್ಟರ್‌ಗಳ ಕೋರ್ಸ್‌.

ಡಾಕ್ಟೊರಲ್‌ ಕೋರ್ಸ್‌ಗಳು
ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ಗೆ ಸಂಬಂಧಿಸಿದಂತೆ ಡಾಕ್ಟೊರಲ್‌ ಪಡೆಯಲು ಇಚ್ಛಿಸುವವರು ಸ್ನಾತಕೋತ್ತರ ಪದವಿಯಲ್ಲಿ ಶೇ.50ಕ್ಕಿಂತ ಅಧಿಕ ಸರಾಸರಿ ಅಂಕ ಹೊಂದಿರಬೇಕು ಮತ್ತು ಇದಕ್ಕೂ ಪ್ರವೇಶ ಪರೀಕ್ಷೆ ಕಡ್ಡಾಯ. ಬಹುತೇಕ ಎಲ್ಲ ವಿ.ವಿ.ಗಳ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದಿಂದ ವರ್ಷಕ್ಕೊಮ್ಮೆ ಪಿಎಚ್‌.ಡಿ. ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. MMU ದೆಹಲಿ ಮತ್ತಿತರ MUU ಕೇಂದ್ರಗಳು, ನಾರ್ಸಿ ಮಾಂಜೀ ಇನ್ಸಿಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಮೊದಲಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಡಾಕ್ಟೊರಲ್‌ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತವೆ. ಇದು 3 ರಿಂದ 5 ವರ್ಷದ ಅವಧಿಯ ಕೋರ್ಸ್‌.

ದೇಶದ ಪ್ರತಿಷ್ಠಿತ ಬಿ-ಸ್ಕೂಲ್‌ಗ‌ಳು
ವಿಶ್ವವಿದ್ಯಾಲಯಗಳು, ಅವುಗಳಿಂದ ಮಾನ್ಯತೆ ಪಡೆದ ಕಾಲೇಜುಗಳೇ ಅಲ್ಲದೆ ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಕಲಿಸಲೆಂದೇ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಿವೆ. ವಿವಿಧ ನಗರಗಳಲ್ಲಿರುವ MMJ ಗಳ ಜೊತೆಗೇ ಕ್ಸೇವಿಯರ್‌, ಸಿಂಬಯಾಸಿಸ್‌ ಸಂಸ್ಥೆಗಳೂ ಉನ್ನತ ಪದವಿಗಳನ್ನು ಕೊಡಮಾಡುತ್ತವೆ. ಬಿ.ಬಿ.ಎ, ಎಂ.ಬಿ.ಎ, ಕೋರ್ಸ್‌ಗಳಲ್ಲಿ ಸ್ಪೆಷಲೈಸೇಷನ್‌ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಯು ತನ್ನ ಆಸಕ್ತಿಯ ವಿಷಯ ಅಂದರೆ, ಫೈನಾನ್ಸ್‌, ಮಾರ್ಕೆಟಿಂಗ್‌, ಎಚ್‌.ಆರ್‌. ಅಥವಾ ಇನ್ನಾವುದಾದರೂ ವಿಶೇಷ ವಿಷಯಗಳ ಬಗ್ಗೆ ವಿಚಾರಿಸಿ, ಅದರಲ್ಲಿ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಬಹುದು. ಎರಡೂ ಕೋರ್ಸ್‌ಗಳಲ್ಲಿ ಇಂಟರ್ನ್ಶಿಪ್‌ಗೆ ಅವಕಾಶ ನೀಡುವಂಥ ಸಂಸ್ಥೆಗಳನ್ನು ಮಾತ್ರ ವಿದ್ಯಾರ್ಥಿಗಳು ಆಯ್ದುಕೊಳ್ಳಬೇಕು. ಏಕೆಂದರೆ, ಮುಂದಿನ ಉದ್ಯೋಗ ಕ್ಷೇತ್ರಕ್ಕೆ ಇದೇ ಮೊದಲ ಹೆಜ್ಜೆ ಎನ್ನುವುದನ್ನು ಮರೆಯಬಾರದು. ಒಳ್ಳೆಯ ಕಂಪೆನಿಗಳಲ್ಲಿ ಇಂಟರ್ನ್ಶಿಪ್‌ ಪಡೆಯಲು ಪ್ರಯತ್ನಿಸಬೇಕು. ಹಾಗೆಯೇ, ಪ್ರಾಜೆಕ್ಟ್ ಅನ್ನು ಸಾಮಾನ್ಯವಾಗಿ ಅಂತಿಮ ಸೆಮಿಸ್ಟರ್‌ಗಳಲ್ಲಿ ನೀಡಲಾಗುವುದು. ಇದನ್ನು ಕಾಟಾಚಾರಕ್ಕೆ ಮಾಡದೆ ಪೂರ್ಣ ಶ್ರದ್ಧೆಯಿಂದ ತೊಡಗಿಕೊಂಡು ಪ್ರಾಜೆಕ್ಟ್ ಮಾಡಿದರೆ, ಮುಂದೆ ಅದರಿಂದ ಮಹಾ ಅನುಕೂಲ ಆಗುತ್ತದೆ. ಇಂಡಸ್ಟ್ರಿಯ ಪ್ರಾಯೋಗಿಕ ಅಂಶಗಳನ್ನು ಮನದಟ್ಟು ಮಾಡಿಸುವುದೇ ಇಂಟರ್ನ್ಶಿಪ್‌ ಮತ್ತು ಪ್ರಾಜೆಕ್ಟ್ಗಳ ಮುಖ್ಯ ಉದ್ದೇಶ. ಇವುಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವುದು ಭವಿಷ್ಯದ ಹಿತದೃಷ್ಟಿಯಿಂದ ಒಳಿತು.

ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಕೆರಿಯರ್‌
ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಪರಿಣತರಿಗೆ ಚಿಂತೆ ಇಲ್ಲ. ಇದೊಂಥರಾ ಕಾಮರ್ಸ್‌ಗೆ ಸಂಬಂಧಿಕರಿದ್ದಂತೆ. ಹೀಗಾಗಿ, ವಿಫ‌ುಲ ಅವಕಾಶಗಳು ಇವೆ. ಅದು ಹೇಗೆಂದರೆ, ಬ್ಯಾಂಕಿಂಗ್‌, ಫೈನಾನ್ಸ್‌, ಮಾರ್ಕೆಟಿಂಗ್‌, ಬಿ.ಪಿ.ಓ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಇವರು ಬೇಕೇಬೇಕು. ಯಾವುದೇ ಸಂಸ್ಥೆ ಇಂದು ವ್ಯವಹಾರ ನಡೆಸಬೇಕಾದರೆ ಫೈನಾನ್ಸ್‌, ಮಾರ್ಕೆಟಿಂಗ್‌, ಆಪರೇಷನ್ಸ್‌, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್‌ ಇವೆಲ್ಲವನ್ನು ತೂಗಿಸಿಕೊಂಡು ನಡೆಯಬೇಕು. ಸಂಸ್ಥೆಯನ್ನು ನಡೆಸಬಲ್ಲ ತಂತ್ರಗಾರರು ಬೇಕು. ಇದನ್ನು ಕಲಿತವರ ಮೇಲೆ ಪ್ರತಿಯೊಂದು ಕಂಪೆನಿಯು ಅವಲಂಬಿತವಾಗಿರುವುದರಿಂದ ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ಬಲ್ಲವರಿಗೆ ಬೇಡಿಕೆ ಇದೆ. ಪದವೀಧರರಿಗೆ ಆರಂಭದಲ್ಲಿ 20, 25 ಸಾವಿರ ಪಗಾರ ದೊರೆಯುತ್ತದೆ. ಸ್ನಾತಕೋತ್ತರ ಪದವೀಧರರಿಗೆ ತಿಂಗಳಿಗೆ 25-30 ಸಾವಿರ ದೊರೆಯಬಹುದು. ಕ್ರಮೇಣ ಐದರಿಂದ ಹತ್ತು ವರ್ಷ ಅನುಭವ ಪಡೆದವರು 50 ರಿಂದ 80 ಸಾವಿರದವರೆಗೆ ಸಂಬಳ ಪಡೆಯುವ ಕ್ಷೇತ್ರ ಇದಾಗಿದೆ. ಯಾವುದೇ ವೃತ್ತಿಗೆ ಮಾರ್ಕೆಟ್‌ ಇರಬೇಕು. ಬಿಬಿಎಗೆ ಅದು ಇದೆ. ಹೀಗಾಗಿ, ಸ್ವಲ್ಪ ಕಷ್ಟ ಎನಿಸಿದರೂ ಈ ಪದವಿಗಳನ್ನು ಪಡೆಯುವುದರಿಂದ ವೃತ್ತಿ ಬದುಕು ದೀರ್ಘ‌ವಾಗಿರುತ್ತದೆ. ಭವಿಷ್ಯದಲ್ಲೂ ಯಾವುದೇ ಆತಂಕಗಳು ಎದುರಾಗುವುದಿಲ್ಲ.

ಪ್ರೊ. ರಘು ವಿ.

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.